ನೀಲಿಬಣ್ಣದ ಈ ಯುವತಿ ಅನ್ಯಗ್ರಹ ಜೀವಿ ಅಂತೆ – ಯುವತಿ ದೇಹ ಸೇರಿತಾ ಏಲಿಯನ್ ಆತ್ಮ?

ಜಗತ್ತಿನಲ್ಲಿ ಕೆಲವರ ವರ್ತನೆಗಳು ಅಚ್ಚರಿ ಜೊತೆಗೆ ಕುತೂಹಲ ಮೂಡಿಸುತ್ತವೆ. ಇಂಗ್ಲೆಂಡ್ ನ ಈ ಯುವತಿಯ ಕಥೆ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಯಾಕಾಂದ್ರೆ ತಾನು ಮನುಷ್ಯಳೇ ಅಲ್ಲ ಎಂದು ಈ ಯುವರ್ತಿ ವರ್ತಿಸುತ್ತಿದ್ದಾಳೆ.
ಇದನ್ನೂ ಓದಿ : 28 ಲೀಟರ್ ಬಿಯರ್ ಕುಡಿದ ವ್ಯಕ್ತಿ! – ನಾಲ್ಕು ವಾರವಾದ್ರೂ ಅಮಲು ಬಿಡಲಿಲ್ಲ!
ಇಂಗ್ಲೆಂಡ್ ನಲ್ಲಿ ವಾಸವಿರುವ ಲುರೈ ಲಿ ಎಂಬ ಯುವತಿ ತನ್ನನ್ನು ತಾನು ಏಲಿಯನ್ ಎಂದುಕೊಂಡಿದ್ದಾಳೆ. ಆಕಸ್ಮಿಕವಾಗಿ ಮನುಷ್ಯ ರೂಪದಲ್ಲಿ ಹುಟ್ಟಿದ್ದೇನೆ. ಆದರೆ ನಾನು ಅನ್ಯಗ್ರಹ ಜೀವಿ ಅಂತಾ ಮೈತುಂಬಾ ನೀಲಿ ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾಳೆ. ನನ್ನ ಆತ್ಮ ಏಲಿಯನ್ ಆಗಿದ್ದು ಮಾನವ ದೇಹಕ್ಕೆ ಸೇರಲ್ಪಟ್ಟಿದೆ. ಈಗಲೂ ಸಹ ನಾನು ಬೇರೆ ಲೋಕದವಳು ಎಂದು ಭಾಸವಾಗುತ್ತಿದೆ. ನನ್ನ ರೂಪ, ನನ್ನ ದೇಹದ ಅಂಗಗಳ ಬಗ್ಗೆ ನನಗೆ ಇಷ್ಟವಿಲ್ಲ. ಇದು ನನ್ನ ದೇಹವಲ್ಲ. ನಾನು ಬೆಳಕಿನಲ್ಲಿ ಹಾರಾಡಲು ಬಯಸುತ್ತೇನೆ. ಭೂಮಿ ಮೇಲಿನ ಬಹಳಷ್ಟು ವಿಷಯಗಳು ನನಗೆ ಅರ್ಥವಾಗುವುದಿಲ್ಲ. ಗುರುತ್ವಾಕರ್ಷಣೆಯು ನನಗೆ ಸಿಟ್ಟು ಬರಿಸುತ್ತದೆ. ನನಗೆ ಮನುಷ್ಯರೊಂದಿಗೆ ಬೆರೆಯುವುದು ಇಷ್ಟವಾಗುವುದಿಲ್ಲ ಎಂದಿದ್ದಾಳೆ. ಹಾಗೇ ಅನ್ಯಗ್ರಹದ ಭಾಷೆ ಎಂದು ಯಾರಿಗೂ ತಿಳಿಯದ ಪದಗಳಲ್ಲಿ ಮಾತನಾಡುತ್ತಾಳೆ. ಲುರೈ ಲಿಯ ವರ್ತನೆಗೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಟೀಕೆಗಳನ್ನ ಮಾಡ್ತಿದ್ದಾರೆ.