ದೆವ್ವದೊಂದಿಗೆ ಮದುವೆಯಾದ ಗಾಯಕಿ..! – ಭೂತದಿಂದ ಡೈವೋರ್ಸ್ ಬೇಕು ಅಂತಾ ಪತ್ನಿಯಿಂದ ಮನವಿ..!

ದೆವ್ವದೊಂದಿಗೆ ಮದುವೆಯಾದ ಗಾಯಕಿ..! – ಭೂತದಿಂದ ಡೈವೋರ್ಸ್ ಬೇಕು ಅಂತಾ ಪತ್ನಿಯಿಂದ ಮನವಿ..!

ಮದುವೆ, ಸಂಸಾರ, ಮಕ್ಕಳು, ಕುಟುಂಬ ಹೀಗೆ ಮನುಷ್ಯನ ಸಂಬಂಧದ ಅನುಬಂಧ ಸುಂದರವಾಗಿತ್ತು. ಆದರೆ, ಈಗ ಕಾಲ ಬದಲಾಗುತ್ತಿದೆ.. ಇಲ್ಲಿ ಮದುವೆ, ಸಂಸಾರದ ಪರಿಕಲ್ಪನೆಗಳು ಕೂಡಾ ಬದಲಾಗುತ್ತಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಈಗ ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬಳು ಇನ್ನೂ ಬೇರೆ ರೀತಿಯಲ್ಲೇ ಮದುವೆಯಾಗಿದ್ದಾಳೆ. ಇದು ಬರೀ ಅಚ್ಚರಿಯ ವಿಷಯವಲ್ಲ. ನಂಬಲೂ ಅಸಾಧ್ಯವಾದದ್ದು. ಈಕೆ ಮದುವೆಯಾಗಿದ್ದು ರೋಬೋಟೋ, ಇಲ್ಲ ಇನ್ಯಾರನ್ನೋ ಆಗಿದ್ದರೂ ಜನ ಇರಲಿ ಬಿಡಮ್ಮ ಅಂತಿದ್ದರು. ಆದರೆ, ಈಕೆ ಮದುವೆಯಾಗಿದ್ದು ದೆವ್ವವನ್ನು.

ಇದನ್ನೂ ಓದಿ: ಪ್ರಿಯತಮನನ್ನು ಬಿಟ್ಟು ಬೆಡ್ ಶೀಟ್ ನೇ ಮದುವೆಯಾದ ಯುವತಿ! – ಹಿಂಗೂ ಆಗುತ್ತಾ?

ಇಂಗ್ಲೆಂಡ್‌ನ ರಾಕರ್ ಬ್ರೋಕಾರ್ಡ್ ಹ್ಯಾಲೋವೀನ್ ಎಂಬಾಕೆ ದೆವ್ವವನ್ನೇ ಮದುವೆಯಾಗಿದ್ದಾಳೆ. 2022ರಲ್ಲಿ ದೆವ್ವವನ್ನು ಮದುವೆಯಾದ ಈಕೆ ಈಗ ತನ್ನ ಬದುಕಲ್ಲಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸ್ತಿದ್ದಾಳಂತೆ. ಹೀಗಾಗಿ ಭೂತದಿಂದ ಡೈವೋರ್ಸ್ ಕೊಡಿಸಿ ಅಂತಾ ಕೇಳಿಕೊಳ್ಳುತ್ತಿದ್ದಾಳೆ.  ರಾಕರ್ ಬ್ರೋಕಾರ್ಡ್ ಹ್ಯಾಲೋವೀನ್, ಚರ್ಚ್‌ನಲ್ಲಿ ಎಡ್ವರ್ಡೊ ಎಂಬ ದೆವ್ವವನ್ನು ಮದುವೆಯಾಗಿದ್ದಳು. ವೃತ್ತಿಯಲ್ಲಿ ಗಾಯಕಿಯಾಗಿರುವ ಮಹಿಳೆಗೂ ಮತ್ತು ದೆವ್ವಕ್ಕೂ ಐದು ತಿಂಗಳ ಪರಿಚಯವಿತ್ತಂತೆ. ಇದಾದ ನಂತರ ಇಬ್ಬರೂ ಮದುವೆಯಾಗುತ್ತಾರಂತೆ. ಆದರೆ ಆರಂಭದಲ್ಲಿ ನನ್ನ ವೈವಾಹಿಕ ಜೀವನ ಚೆನ್ನಾಗಿತ್ತು. ಆದರೆ ಈಗ ನನ್ನ ಗಂಡ ಜೀವನವನ್ನು ನರಕ ಮಾಡಿಟ್ಟಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಬ್ರೋಕಾರ್ಡ್ ಪ್ರಕಾರ, ಗಂಡ ಎಲ್ಲಿ ಹೋದರೂ ನನ್ನನ್ನು ಹಿಂಬಾಲಿಸುತ್ತಿದ್ದಾನೆ. ಆತನನ್ನು ನನ್ನ ಜೀವನದಿಂದ ಹೊರಹಾಕಲು ಭೂತೋಚ್ಚಾಟನೆ ಮಾಡಿಸಬೇಕು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

‘ದೆವ್ವವನ್ನು ಮದುವೆಯಾಗುವ ಮೊದಲೇ ನಾನು ಈ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲ್ಲಿಲ್ಲ. ಆದರೆ ಈಗ ದೆವ್ವವನ್ನು ಮದುವೆಯಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದು ಅರ್ಥವಾಯಿತು’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಈ ಮಧ್ಯೆ, ಬ್ರೋಕಾರ್ಡ್ ತನ್ನ ಡಿವೋರ್ಸ್‌ ನಿರ್ಧಾರಕ್ಕೆ ಮುಂಚಿತವಾಗಿ, ಸಂಬಂಧವನ್ನು ಗಂಭೀರವಾಗಿ ಪರಿಗಣಿಸಲು ತನ್ನ ಪತಿಗೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು. ಆದರೆ ಅವಳ ಕೋರಿಕೆ ವ್ಯರ್ಥವಾಯಿತು. ಅಳುವ ಶಿಶುಗಳ ಕಿರುಚಾಟದೊಂದಿಗೆ ತನ್ನನ್ನು ಕಾಡುವ ಮೂಲಕ ದೆವ್ವ ತನ್ನ ಜೀವನವನ್ನು ನರಕವನ್ನಾಗಿ ಮಾಡಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅದೇನೆ ಇರ್ಲಿ, ದೆವ್ವವನ್ನು ಮದ್ವೆಯಾಗಿದ್ದೇ ಅಸಹಜ ಮತ್ತು ವಿಪರ್ಯಾಸ. ಹೀಗಿರುವಾಗ ದೆವ್ವ ಕಾಟ ಕೊಡ್ತಿದೆ ಅಂತ ಆರೋಪಿಸೋದ್ರಲ್ಲಿ ಅರ್ಥಾನೆ ಇಲ್ಲ ಅಂತಿದ್ದಾರೆ ನೆಟ್ಟಿಗರು.

suddiyaana