ರಾತ್ರಿಯಿಡಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ಲು.. ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ!

ರಾತ್ರಿಯಿಡಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ಲು.. ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ!

ಇದು ಸ್ಮಾರ್ಟ್‌ ಫೋನ್‌ ಜಮಾನ.. ಕೈಯಲ್ಲೊಂದು ಫೋನ್‌.. ಕಿವಿಗೊಂದು ಹೆಡ್‌ ಫೋನ್‌ ಇದ್ರೆ ಸಾಕು.. ಪ್ರಪಂಚ ಮುಳುಗಿ ಹೋದ್ರೂ ಗೊತ್ತಾಗಲ್ಲ.. ಬೆಳಗ್ಗೆಯಿಂದ ರಾತ್ರಿ ಮಲಗೋವರೆಗೂ ಇಯರ್‌ಫೋನ್‌ ಹಾಕಿಕೊಂಡು ಇರ್ತಾರೆ.. ಕೆಲವೊಂದು ಬಾರಿ ಹೆಡ್‌ಫೋನ್‌ ಹಾಕಿಕೊಂಡೇ ನಿದ್ರೆಗೆ ಜಾರುತ್ತಾರೆ.. ಇಲ್ಲೊಬ್ಬಳು ಕೂಡ ಹೆಡ್‌ ಫೋನ್‌ ಹಾಕಿಕೊಂಡು ನಿದ್ರೆಗೆ ಜಾರಿದ್ದಾಳೆ. ಆದ್ರೆ ಬೆಳಗ್ಗೆ ಏಳುವ ವೇಳೆಗೆ ಆಕೆಯ ಕಿವಿ ಢಮಾರ್‌ ಆಗಿದೆ..

ಇದನ್ನೂ ಓದಿ: 10 ಟೀಮ್‌ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗಿದೆ? – ಎಷ್ಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ?

ಹೌದು.. ಚೀನಾ ಮೂಲದ ಶಾಂಡಾಂಗ್‌ ಎಂಬಲ್ಲಿ ಈ ಘಟನೆ ನಡೆದಿದೆ.. ವಾಂಗ್‌  ಎಂಬ ಯುವತಿ ರಾತ್ರಿ ವೇಳೆ ಮಲಗುವಾಗ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ದಾಳೆ.. ಬೆಳಗ್ಗೆ ಏಳುವಾಗ ಆಕೆಗೆ ಶಾಕ್‌ ಕಾದಿತ್ತು.. ಯಾಕಂದ್ರೆ ಆಕೆಗೆ ಕಿವಿಯೇ ಕೇಳಿಸುತ್ತಿರಲಿಲ್ಲ. ತನಗೆ ಏನೂ ಕೇಳಿಸುತ್ತಿಲ್ಲ ಅಂತಾ ಆಕೆ ಕಿವಿ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದಳು. ಕೆಲಸದಲ್ಲಿ ತೊಂದರೆಯಾಗುತ್ತಿದೆ ಯಾರು ಮಾತನಾಡುವುದು ಸರಿಯಾಗಿ ಕೇಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಳು. ವೈದ್ಯರು ಆಕೆಯ ಕಿವಿಗಳನ್ನು ಪರೀಕ್ಷಿಸಿದಾಗ ಆಕೆಯ ಎಡ ಕಿವಿಯ ನರಗಳು ಶಾಶ್ವತವಾಗಿ  ಹಾನಿಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ಶಾಶ್ವತ ಕಿವುಡಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಶಾಂಡಾಂಗ್​​ನ ಸ್ಥಳೀಯ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ವಾಂಗ್. ಪ್ರತಿ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಳು. ಕಾಲೇಜು ದಿನಗಳಿಂದ ಅಂದರೆ ಕಳೆದ ಎರಡು ವರ್ಷಗಳಿಂದ ಹೆಡ್‌ಫೋನ್‌ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ಮಲಗುವ ಅಭ್ಯಾಸವನ್ನು ಹೊಂದಿದ್ದಾಳೆ. ಈ ಕೆಟ್ಟ ಅಭ್ಯಾಸದಿಂದ ಈಗ ಆಕೆ ಶಾಶ್ವತವಾಗಿ ಕಿವಿ ಕಳೆದುಕೊಂಡಿದ್ದಾಳೆ. ಈಗ ಯಾರ ಮಾತುಗಳನ್ನು ಕೇಳಬೇಕೆಂದರೆ ಶ್ರವಣ ಸಾಧನಗಳನ್ನು ಬಳಸಬೇಕು.

Shwetha M