ಕೊರೊನಾ ಎಫೆಕ್ಟ್ – 2 ವರ್ಷಗಳ ಬಳಿಕ ವಾಸನೆ ಗ್ರಹಿಸಿದ ಮಹಿಳೆ!

ಕೊರೊನಾ ಎಫೆಕ್ಟ್ – 2 ವರ್ಷಗಳ ಬಳಿಕ ವಾಸನೆ ಗ್ರಹಿಸಿದ ಮಹಿಳೆ!

ಕೊವಿಡ್ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ ರೀತಿಯಲ್ಲಿ ತನ್ನ ಪರಿಣಾಮ ಬೀರಿದೆ. ಕೆಲವರಿಗೆ ಕೊರೊನಾ ಒಂದು ವಾರ ಬಾಧಿಸಿ ಗುಣಮುಖವಾದರೆ, ಇನ್ನೂ ಕೆಲವರಿಗೆ ವರ್ಷಗಳ ಕಾಲ ಬಾಧಿಸಿದೆ. ವಯಸ್ಕರು ಹಾಗೂ ಚಿಕ್ಕವರು ಅನ್ನದೇ ಎಲ್ಲಾ ವಯಸ್ಸಿನವರಿಗೂ ಕಾಡಿದೆ. ಇಲ್ಲೊಬ್ಬರು ಮಹಿಳೆ ಕಳೆದ 2 ವರ್ಷಗಳ ಹಿಂದೆ ಕೊವಿಡ್ ಸೋಂಕಿಗೆ ತುತ್ತಾಗಿದ್ದು, ಬಳಿಕ ಆಕೆ ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡಿದ್ದಳು. ಇದೀಗ ಆಕೆ ವಾಸನೆ ಗ್ರಹಿಸುವ ಶಕ್ತಿ ಮರಳಿ ಪಡೆದಿದ್ದಾಳೆ.

ಇದನ್ನೂ ಓದಿ: ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ಅಮೆರಿಕ ಮೂಲದ ಜೆನ್ನಿಫರ್ ಎಂಬ ಮಹಿಳೆ ಎರಡು ವರ್ಷದ ಹಿಂದೆ ಕೊವಿಡ್‍ಗೆ ತುತ್ತಾಗಿದ್ದಳು. ಬಳಿಕ ಆಕೆ ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡಿದ್ದಳು. ಇದೀಗ ಆಕೆ ಮತ್ತೆ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆದಿದ್ದಾಳೆ. ಕ್ಲೆವೆಲ್ಯಾಂಡ್ ಕ್ಲಿನಿಕ್‌ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಮಹಿಳೆ ಕೊವಿಡ್ ಬಳಿಕ ವಾಸಗೆ ಗ್ರಹಿಸಿ ಪ್ರತಿಕ್ರಿಯಿಸುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುತ್ತಾಳೆ. ಅವಳಿಗೆ ಒಂದು ಕಾಫಿ ಕಪ್ ನೀಡಲಾಗುತ್ತದೆ. ಅದನ್ನು ಆಕೆ  ಎತ್ತಿಕೊಂಡು ವಾಸನೆ ಗ್ರಹಿಸುತ್ತಾಳೆ. ಈ ವೇಳೆ ಆಕೆಗೆ ಕಾಫಿ ಘಮವನ್ನು ಗ್ರಹಿಸಲು ಸಾಧ್ಯವಾಗಿದೆ. ನನಗೆ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ ಅಂತಾ ಆಕೆ ಭಾವುಕಳಾಗಿ ಹೇಳಿದ್ದಾಳೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಎರಡು ವರ್ಷಗಳ ಕಾಲ ಆಹಾರ ನನಗೆ ರುಚಿಸುತ್ತಿರಲಿಲ್ಲ. ವಾಸನೆಯ ಅರಿವಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸಾಮಾನ್ಯ ಚಿಕಿತ್ಸೆಗಾಗಿ ಬಳಸುವ ಸ್ಟೇಲೆಟ್ ಗ್ಯಾಂಗ್ಲಿಯಾನ್ ಬ್ಲಾಕ್ ಇಂಜೆಕ್ಷನ್ ನೀಡಿದ ಮೇಲೆ ಮಹಿಳೆ ಮೊದಲ ಬಾರಿಗೆ ವಾಸನೆ ಹಾಗೂ ರುಚಿಯನ್ನು ಗ್ರಹಿಸಿದ್ದಾಳೆ ಅಂತಾ ವರದಿಯಾಗಿದೆ.

suddiyaana