ಊಟಕ್ಕಾಗಿ ಕೇಳಿದ್ದು 500 ರೂಪಾಯಿ, ಸಿಕ್ಕಿದ್ದು 51 ಲಕ್ಷ ರೂಪಾಯಿ!

ಊಟಕ್ಕಾಗಿ ಕೇಳಿದ್ದು 500 ರೂಪಾಯಿ, ಸಿಕ್ಕಿದ್ದು 51 ಲಕ್ಷ ರೂಪಾಯಿ!

ತಿರುವನಂತಪುರಂ: ತನ್ನ ಮೂವರು ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲು ತನ್ನ ಬಳಿ ಹಣವಿಲ್ಲ ಎಂದು ಕೇರಳದ ಮಹಿಳೆಯೊಬ್ಬರು ತನ್ನ ಮಗನ ಶಿಕ್ಷಕರ ಬಳಿ 500 ರೂಪಾಯಿಗಳ ಸಹಾಯ ಕೇಳಿದ್ದರು. ಆದರೆ ಅವರ ಖಾತೆಯಲ್ಲಿ ಜಮೆಯಾಗಿದ್ದು 500 ರೂ. ಬದಲು ಬರೋಬ್ಬರಿ 51 ಲಕ್ಷ ರೂ.!

ಇದನ್ನೂ ಓದಿ: ಕೈಗೆ ಕಚ್ಚಿದ ಮುದ್ದಿನ ಬೆಕ್ಕು – ಚಿಕಿತ್ಸೆ ಪಡೆದರೂ ಬದುಕಲೇ ಇಲ್ಲ ಮಾಲೀಕ..!

ಹೌದು, ಕೇರಳದ ಪಾಲಕ್ಕಾಡ್ ನ ಕೂಟ್ಟನಾಡ್ ಎಂಬ ಗ್ರಾಮದ ಸುಭದ್ರಾಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿಕೊಂಡು ಸಂಸಾರ ದೂಡುತ್ತಿದ್ದ ಪತಿ ರಾಜನ್ ಕಳೆದ ಆಗಸ್ಟ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜನ್ ಸಾವಿನ ಬಳಿಕ ಕುಟುಂಬ ಬೀದಿಗೆ ಬಿದ್ದಿದೆ. ಇದಾದ ಬಳಿಕ ಮಕ್ಕಳನ್ನು ಸಾಕುವುದೇ ಸುಭದ್ರಾಳಿಗೆ ಹೊರೆಯಾಗಿದೆ. ಅಲ್ಲದೇ ಮೂವರು ಮಕ್ಕಳ ಪೈಕಿ ಒಂದು ಮಗು ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದೆ. ಇದರಿಂದಾಗಿ ಸುಭದ್ರಾಳಿಗೆ ಬೇರೆಡೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನ ಮಕ್ಕಳಿಗೆ ಊಟ ಹಾಕಲು ತನ್ನ ಮಗನ ಶಿಕ್ಷಕಿ ಬಳಿ 500 ರೂ ಸಹಾಯ ಕೇಳಿದ್ದಾರೆ.

ಕುಟುಂಬದ ದುಸ್ಥಿತಿಯಿಂದ ಮನನೊಂದ ಶಿಕ್ಷಕಿ, ಕುಟುಂಬದ ವ್ಯಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಸಹಾಯ ಕೋರಿದ್ದಾರೆ. ಅಲ್ಲದೇ ಸುಭದ್ರಾರ ಬ್ಯಾಂಕ್ ಖಾತೆ ವಿವರವನ್ನುಅಪ್ ಲೋಡ್ ಮಾಡಿದ್ದರು.  ಇದಾದ 48 ಗಂಟೆಗಳಲ್ಲಿ ಪರೋಪಕಾರಿಗಳಿಂದ ಸುಮಾರು 51 ಲಕ್ಷ ರೂ.ಗಳು ಸುಭದ್ರಾಳ ಖಾತೆಗೆ ಜಮೆಯಾಗಿದೆ.

suddiyaana