ಮೂರು ಮದುವೆಯಾದ ಬಳಿಕ ಮೊದಲ ಗಂಡನೇ ಬೇಕು ಅಂತಾ ಪಟ್ಟು ಹಿಡಿದ ಮಹಿಳೆ!

ಮೂರು ಮದುವೆಯಾದ ಬಳಿಕ ಮೊದಲ ಗಂಡನೇ ಬೇಕು ಅಂತಾ ಪಟ್ಟು ಹಿಡಿದ ಮಹಿಳೆ!

ಈಕೆಗೆ ಈಗಾಗಲೇ ಮೂರು ಮದುವೆ ಆಗಿದೆ. ಆದ್ರೆ ಇದೀಗ ಈಕೆ ಎರಡನೇ ಹಾಗೂ ಮೂರನೇ ಗಂಡ ಬೇಡ.. ನನಗೆ ಮೊದಲ ಪತಿಯೇ ಬೇಕು.. ಆತನಲ್ಲಿಗೆ ಕಳುಹಿಸಿಕೊಡಿ ಅಂತಾ ಈಗ ಕೋರ್ಟ್‌ ಮೆಟ್ಟಿಲು ಏರಿದ್ದಾಳೆ.

ಅಚ್ಚರಿಯಾದ್ರೂ ಸತ್ಯ. ಈ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮೆಹ್ಸಾನಾ ಜಿಲ್ಲೆಯ ಮಹಿಳೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಮೊದಲ ಮದುವೆಯಾಗಿದ್ದಳು. ಇದಾದ ನಂತರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಶಹಪುರ್ ವಾರ್ಡ್‌ನಲ್ಲಿ ಅವರ ವಿವಾಹವನ್ನು ನೋಂದಾಯಿಸಲಾಗಿತ್ತು. ಆದರೆ ಈ ವಿಷಯ ಮಹಿಳೆಯ ಮನೆಯವರಿಗೆ ತಿಳಿದಾಗ ಬಲವಂತವಾಗಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಹೆಣ್ಣು ಕೊಟ್ಟ ಅತ್ತೆಯನ್ನೇ ಬುಟ್ಟಿಗೆ ಹಾಕಿಕೊಂಡ – ಮಾವನ ಸಮ್ಮುಖದಲ್ಲೇ ಮದುವೆ ಆದ ಭೂಪ!

ಇದಾದ ನಂತರ ಮಹಿಳೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪತ್ನಿಯನ್ನು ಮರಳಿಸುವಂತೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಪೊಲೀಸರು ಮಹಿಳೆಯನ್ನು ಹುಡುಕಿದರು ಮತ್ತು ಮನೆಯಿಂದ ವಶಪಡಿಸಿಕೊಂಡರು. ಬಳಿಕ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮೊದಲ ಮದುವೆಯನ್ನು ಖಾತ್ರಿಪಡಿಸಿಕೊಂಡಿದ್ದು, ಮೊದಲು ತನ್ನ ಪತಿಯನ್ನು ಗುರುತಿಸಿ ನಂತರ ಸತ್ಯವನ್ನು ಬಹಿರಂಗಪಡಿಸಿದ್ದು, ಇದನ್ನು ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಮೊದಲ ಮದುವೆಯಾದ ನಂತರ ಕೋಪಗೊಂಡ ಮನೆಯವರು ಬಲವಂತವಾಗಿ ಕರೆದುಕೊಂಡು ಹೋಗಿ ಎರಡನೇ ಮದುವೆ ಮಾಡಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಆದರೆ, ಕೆಲ ದಿನಗಳ ನಂತರ ಎರಡನೇ ಪತಿಯೂ ಮಹಿಳೆಯನ್ನು ತೊರೆದಿದ್ದ. ಇದಾದ ನಂತರ ಮಹಿಳೆಯನ್ನು ಬನಸ್ಕಾಂತ ಜಿಲ್ಲೆಗೆ ಕರೆದೊಯ್ದು ಮೂರನೇ ಬಾರಿಗೆ ವಿವಾಹ ಮಾಡಿಸಲಾಗಿದೆ.

ಆದರೆ, ನ್ಯಾಯಾಲಯದಿಂದ ಆದೇಶವನ್ನು ಪಡೆದ ನಂತರ, ಪೊಲೀಸರು ಮಹಿಳೆಯ ಮೂರನೇ ಗಂಡನ ಮನೆಗೆ ತಲುಪಿಸಿದ್ದಾರೆ. ಆದರೆ ತಾನು ಮೊದಲ ಪತಿಯೊಂದಿಗೆ ಇರಲು ಬಯಸಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳೆಯ ಕೋರಿಕೆಗೆ ಮಣಿದ ನ್ಯಾಯಾಲಯ, ಭದ್ರತೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಆದೇಶ ನೀಡಿದ್ದು, ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸಲು ಅವಕಾಶ ನೀಡಿದೆ.  ಇದಲ್ಲದೇ ಆಕೆಗೆ ಅಪಾಯ ಸಂಭವಿಸಿದರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೂಡ ಹೇಳಿದೆ.

Shwetha M