ಅಬ್ಬಬ್ಬಾ.. ಹಾವುಗಳೊಂದಿಗೆ ಟೈಮ್ ಪಾಸ್ ಮಾಡುತ್ತಾಳೆ ಈ ಮಹಿಳೆ!
ಸಾಮಾನ್ಯವಾಗಿ ಬೆಕ್ಕು ನಾಯಿಗಳನ್ನು ಕಂಡ್ರೂ ಹೆದರುತ್ತಾರೆ. ಮಾರುದ್ದ ಓಡಿ ಹೋಗುತ್ತಾರೆ. ಇನ್ನೂ ಎಲ್ಲಾದ್ರೂ ಹಾವು ಇದೆ ಅಂತಾ ಗೊತ್ತಾದ್ರೆ ಆ ಕಡೆ ತಲೆ ಕೂಡ ಹಾಕಲ್ಲ. ಇನ್ನು ಕೆಲ ಮಹಿಳೆಯರಂತೂ ಸಣ್ಣ ಪುಟ್ಟ ಕೀಟಗಳಿಗೂ ಹೆದರುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಬೃಹತ್ ಹಾವುಗಳ ಜೊತೆ ಆಟವಾಡುತ್ತಾ ಟೈಮ್ ಪಾಸ್ ಮಾಡುತ್ತಿದ್ದಾರೆ. ಇದರ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಅಯ್ಯೋ.. ಇದೆಂಥಾ ಹುಚ್ಚಾಟ? – ಪ್ಯಾರಾಚೂಟ್ ಇಲ್ಲದೆ 12,500 ಅಡಿಯಿಂದ ಜಿಗಿದ ವ್ಯಕ್ತಿ
ಹೌದು, ಅಚ್ಚರಿಯಾದ್ರೂ ಸತ್ಯ. ಅನೇಕರು ಹಾವುಗಳಿಗೆ ತುಂಬಾ ಹೆದರುತ್ತಾರೆ. ಆದ್ರೆ ಅಮೆರಿಕದ ಕ್ಯಾಲಿಫೋರ್ನಿಯಾದ ಮಹಿಳೆ ಜೇ ಬ್ರೂವರ್ ಎಂಬಾಕೆ ಬೃಹತ್ ಗಾತ್ರದ ಅನಕೊಂಡಗಳ ಜೊತೆ ಆಡವಾಡುತ್ತಿದ್ದಾಳೆ. ಅಲ್ಲದೇ ಅವುಗಳನ್ನ ಮೈ ಮೇಲೆ ಎಲ್ಲ ಎಳೆದುಕೊಂಡು ಮುದ್ದಾಡುತ್ತಿದ್ದಾಳೆ. ಆ ಅನಕೊಂಡಗಳು ಕೂಡ ಆಕೆಯ ಮೇಲೆ ಹೋಗುತ್ತಿರುತ್ತಾವೆ. ಅವುಗಳ ಮೇಲೆ ಮಲಗಿಕೊಳ್ಳುತ್ತಾಳೆ. ಇದಕ್ಕೆ ಬ್ರೂವರ್ ಭಯ ಬೀಳದೆ ಅವುಗಳಿಗೆ ಫ್ರೆಂಡ್ಲಿಯಾಗಿಯೇ ಅವುಗಳನ್ನು ಟ್ರೀಟ್ ಮಾಡುತ್ತಿರುತ್ತಾಳೆ. ಇನ್ನೊಂದು ಸಂಗತಿ ಎಂದರೆ ಬ್ರೂವರ್ ಕೇವಲ ಒಂದೋ, ಎರಡೋ ಅನಕೊಂಡಗಳ ಜೊತೆ ಆಟವಾಡುತ್ತಿಲ್ಲ. ಬರೋಬ್ಬರಿ 27 ಅನಕೊಂಡಗಳ ಜೊತೆಗೆ ತನ್ನ ಸಮಯವನ್ನು ಕಳೆದಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಮಾಹಿತಿ ಪ್ರಕಾರ, ಜೇ ಬ್ರೂವರ್ ಕ್ಯಾಲಿಫೋರ್ನಿಯಾದ ಫೌಂಟೇನ್ ವ್ಯಾಲಿಯಲ್ಲಿ ಸರೀಸೃಪಗಳ ಮೃಗಾಲಯ ಹೊಂದಿದ್ದಾಳೆ. ಮೃಗಾಲಯದಲ್ಲಿ ಹಾವುಗಳು, ಚಿರತೆಗಳು, ಹೆಬ್ಬಾವುಗಳು, ಬಿಳಿ ಮೊಸಳೆಗಳು, ಆನೆಗಳು, ಆಮೆಗಳು, ಅನಕೊಂಡಗಳು ಸೇರಿ ಇನ್ನು ಬೇರೆ ಬೇರೆ ಪ್ರಾಣಿಗಳು ಇವೆ. ಜೇ ಬ್ರೂವರ್ ತಮ್ಮ ಮಗಳು ಜೂಲಿಯೆಟ್ ಜೊತೆ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅನಕೊಂಡಗಳ ಜೊತೆ ಟೈಮ್ಪಾಸ್ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.