10 ನಿಮಿಷ ಟಾಯ್ಲೆಟ್ ಬ್ರೇಕ್ ತೆಗೆದುಕೊಂಡ ಮಹಿಳೆ! – ಬಾಸ್ ಪ್ರಶ್ನಿಸಿದ್ದಕ್ಕೆ ಉದ್ಯೋಗಿ ಹೀಗಾ ಮಾಡೋದು?

ಮೊದಲ ಬಾರಿಗೆ ಕೆಲಸಕ್ಕೆ ಹೋದಾಗ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೊಸ ಜನ, ಹೊಸ ರೂಲ್ಸ್ ಎಲ್ಲವೂ ಹೊಸತು.. ಇವೆಲ್ಲವನ್ನು ಫೇಸ್ ಮಾಡುವುದು ಹೇಗೆ ಅಂತಾ ತಲೆಕೆಡಿಸಿಕೊಳ್ಳುತ್ತೇವೆ. ಇನ್ನೂ ಬಾಸ್, ಸಹೋದ್ಯೋಗಿಗಳು ಸಪೋರ್ಟಿವ್ ಆಗಿರದಿದ್ದರೆ ಇದು ಕಿರುಕುಳದಂತೆಯೂ ಭಾಸವಾಗಬಹುದು. ಹೊಸ ಜಾಬ್ನಲ್ಲಿ ಉಂಟಾದ ಕಿರುಕುಳದಿಂದ ಮಹಿಳೆಯೊಬ್ಬರು ಕೆಲಸ ಆರಂಭಿಸಿದ ಮೂರೇ ದಿನಕ್ಕೆ ತನ್ನ ಹೊಸ ಉದ್ಯೋಗಕ್ಕೆ ರಿಸೈನ್ ಮಾಡಿದ್ದಾರೆ. ಆಕೆ ಕೊಟ್ಟ ಕಾರಣವೇನು ಅಂತಾ ಗೊತ್ತಾದರೆ ನೀವು ಶಾಕ್ ಆಗುವುದು ಪಕ್ಕಾ.
ಮಹಿಳೆಯೊಬ್ಬಳು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆ ಕಂಪನಿಯ ಬಾಸ್ ಒಂದು ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಆಕೆ ಕೆಲಸವನ್ನೇ ತೊರೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿ ಮೂರೇ ದಿನಕ್ಕೆ ರಿಸೈನ್ ಮಾಡಿರುವ ಕುರಿತು ಕಾರಣವನ್ನು ರೆಡ್ಡಿಟ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾಳೆ. ತಾನು ಕೆಲಸ ತೊರೆದ ಕಾರಣವನ್ನು ಮಹಿಳೆ ಸುದೀರ್ಘವಾಗಿ ವಿವರಿಸಿದ್ದಾಳೆ.
ಇದನ್ನೂ ಓದಿ: ಫಿಟ್ನೆಸ್ ಚಾಲೆಂಜ್ ಅಂತಾ ಅತೀ ಹೆಚ್ಚು ನೀರು ಕುಡಿದಳು.. ಕೊನೆಗೆ ಆಸ್ಪತ್ರೆ ಸೇರಿದಳು!
ಕಳೆದ ಸೋಮವಾರದಂದು ನಾನು ಕಂಪನಿಯೊಂದರಲ್ಲಿ ಕೆಲಸ ಆರಂಭಿಸಿದೆ. ಬುಧವಾರ ಬಾಸ್ ನನ್ನನ್ನು ಚೇಂಬರ್ಗೆ ಕರೆದರು ಮತ್ತು ಯಾಕಾಗಿ 10 ನಿಮಿಷ ಟಾಯ್ಲೆಟ್ ಬ್ರೇಕ್ ತೆಗೆದುಕೊಂಡೆ ಎಂದು ಪ್ರಶ್ನಿಸಿದ್ದಾರೆ. ಇದು ನಾನು ಕೆಲಸವನ್ನು ತೊರೆಯಲು ಕಾರಣವಾಯಿತು. ನಾನು ಹೀಗೆ ಮಾಡಿದ್ದು ಸರಿಯಾಗಿದೆಯೇ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಹೀಗಾಗಿ ಈ ಬಗ್ಗೆ ತಿಳಿದುಕೊಳ್ಳಲು ನಾನು ಕಾಲ್ ಮಾಡುತ್ತಿದ್ದೇನೆ’ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಬಾಸ್ ನೀಡುವ ಕಿರುಕುಳದ ಬಗ್ಗೆ ವಿವರಿಸಿ ಪೋಸ್ಟ್ ಮಾತ್ರವಲ್ಲ ಬಾಸ್, ‘ನಿನಗೆ ನಿಗದಿಪಡಿಸಿದ ವರ್ಕ್ ಫಿನಿಶ್ ಮಾಡಲು ಯಾಕೆ ತಡವಾಗುತ್ತಿದೆ’ ಎಂದು ಪ್ರಶ್ನಿಸಿದರು. ‘ಆದರೆ ನನಗೆ ಅವರು ಕೆಲಸ ನೀಡುತ್ತಿಲ್ಲ. ಸಹೋದ್ಯೋಗಿಯೊಬ್ಬರು ಗೈಡ್ ಮಾಡುತ್ತಿದ್ದಾರೆ. ಅವರು ಆರು ಗಂಟೆಗೆ ಮನೆಗೆ ಹೋಗುವಂತೆ ಸೂಚಿಸುತ್ತಿದ್ದಾರೆ’. ಅಷ್ಟೇ ಅಲ್ಲ, ನಾನು ಘಟನೆಯ ಬಗ್ಗೆ ವಿವರಿಸಿದರೆ ಮೇಲಾಧಿಕಾರಿ ನಾನು ವಾದಿಸುತ್ತೇನೆಂದು ಆರೋಪಿಸಿದರು. ಇಂಥಾ ಸ್ಥಳದಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ ಎಂದು ಮಹಿಳೆ ಪ್ರಶ್ನಿಸಿದ್ದಾರೆ.
ಘಟನೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿರುವ ಮಹಿಳೆ, ‘ನಾನು ಇಂಥಾ ಟಾಕ್ಸಿಕ್ ಅಗಿರುವ ಕೆಲಸ ಮಾಡುವ ಸ್ಥಳವನ್ನು ಬಿಟ್ಟು ಬಂದಿದ್ದಕ್ಕಾಗಿ ತುಂಬಾ ಖುಷಿ ಪಡುತ್ತಿದ್ದೇನೆ. ಇಂಥಾ ಸ್ಥಳದಲ್ಲಿ ಜಾಗದಲ್ಲಿ ಕೆಲಸ ಮಾಡುವುದು ಎಷ್ಟು ಹಾರಿಬಲ್ ಆಗಿದೆ ಎಂದು ನನಗೆ ಅರ್ಥವಾಗುತ್ತಿದೆ’ ಎಂದು ಮಹಿಳೆ ವಿವರಿಸಿದ್ದಾರೆ.
ಮಹಿಳೆ ಮಾಡಿರೋ ಪೋಸ್ಟ್ ಸಖತ್ ವೈರಲ್ ಆಗಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ನಿಮ್ಮನ್ನು ತರಬೇತಿಯಲ್ಲಿ ಹೊಸ ನೇಮಕ ಎಂದು ಪರಿಗಣಿಸಿದಾಗ ಕಾರಣವಿಲ್ಲದೆ ನಿಮಗೆ ಕಿರುಕುಳ ನೀಡುವುದನ್ನು ಮಾಡುವುದು ಸಾಮಾನ್ಯವಾಗಿ. ನೀವು ಸರಿಯಾದ ಕೆಲಸವನ್ನು ಮಾಡಿದ್ದೀರಿ, ನಿಮ್ಮ ಮುಂದಿನ ಕೆಲಸದಲ್ಲಿ ಶುಭವಾಗಲಿ’ ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನೀವು ನಿಮ್ಮ ಬಾಸ್ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಎಲ್ಲಾ ಹಕ್ಕನ್ನು ಹೊಂದಿದ್ದೀರಿ’ ಎಂದು ಸಲಹೆ ನೀಡಿದ್ದಾರೆ.