ಸಿಸೇರಿಯನ್‌ ಮಾಡುವಾಗ ಕೈಕೊಟ್ಟ ಕರೆಂಟ್ – ಮೊಬೈಲ್ ಟಾರ್ಚ್‌ ಬಳಸಿ ಹೆರಿಗೆ ಮಾಡಿದ ವೈದ್ಯರು!

ಸಿಸೇರಿಯನ್‌ ಮಾಡುವಾಗ ಕೈಕೊಟ್ಟ ಕರೆಂಟ್ – ಮೊಬೈಲ್ ಟಾರ್ಚ್‌ ಬಳಸಿ ಹೆರಿಗೆ ಮಾಡಿದ ವೈದ್ಯರು!

ಸರ್ಕಾರಿ ಆಸ್ಪತ್ರೆ ಅಂದಾಗ ಅಲ್ಲಿ ಸರಿಯಾದ ಸೌಕರ್ಯ ಇಲ್ಲ ಅನ್ನೋ ಮಾತು ಇದ್ದೇ ಇದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಅನೇಕ ಜನರು ಹಿಂದೇಟು ಹಾಕುತ್ತಾರೆ. ಇದೀಗ ಇಲ್ಲೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದು ಹೋಗಿದೆ. ಕರೆಂಟ್‌ ಇಲ್ಲ ಅಂತಾ ಮೊಬೈಲ್‌ ಟಾರ್ಚ್‌ಹಿಡಿದು ಗರ್ಭಿಣಿಗೆ ಆಪರೇಷನ್‌ ಮಾಡಿದ್ದು, ತಾಯಿ ಮಗು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದ ರೇವಣ್ಣ – ಕಾರಣವೇನು ಗೊತ್ತಾ?

ಈ ಆಘಾತಕಾರಿ ಘಟನೆ ಮುಂಬೈನ ಸುಷ್ಮಾ ಸ್ವರಾಜ್ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ವೈದ್ಯರು ಮೊಬೈಲ್‌ ಟಾರ್ಚ್‌ ಬೆಳಕಿಗೆ ಸಿಸೇರಿಯನ್ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್​ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿದೆ. ಆಸ್ಪತ್ರೆಯಲ್ಲಿ ಅವ್ಯವಸ್ಥೆಯಿಂದಾಗಿ ತಾಯಿ ಮಗು ಸಾವನ್ನಪ್ಪಿರುವುದಾಗಿ ಮೃತ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್‌ಗಳಂತಹ ತುರ್ತು ಅಗತ್ಯ ಉಪಕರಣಗಳಿಲ್ಲ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.

ಮುಂಬೈನ ಭಾಂಡೂಪ್‌ನ ನಿವಾಸಿಯಾಗಿರುವ ಸಹೀದುನ್ನಿಸ್ಸಾ ಅನ್ಸಾರಿ(26) ಹೆರಿಗೆ ನೋವಿನಿಂದ ಏ.29ರಂದು ಹನುಮಾನ್ ನಗರದಲ್ಲಿರುವ ಸುಷ್ಮಾ ಸ್ವರಾಜ್ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿನ ಹೃದಯ ಬಡಿತದಲ್ಲಿ ಏರುಪೇರಾಗಿದೆ ಮತ್ತು ಮಗು 4 ಕೆಜಿ ಇರುವುದರಿಂದ ಸಾಮಾನ್ಯ ಹೆರಿಗೆ ಮಾಡುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ವೈದ್ಯರ ಸಲಹೆಯಂತೆ ಮಹಿಳೆ ಸಿಸೇರಿಯನ್ ಮಾಡಲು ಒಪ್ಪಿಕೊಂಡಿದ್ದಾಳೆ.

ಆದರೆ ಸಿಸೇರಿಯನ್ ಸಮಯದಲ್ಲಿ ವಿದ್ಯುತ್​​ ಕಡಿತವಾಗಿದ್ದು, ಆಸ್ಪತ್ರೆಯಲ್ಲಿ ಜನರೇಟರ್ ಇಲ್ಲದ ಕಾರಣ ವೈದ್ಯರು ಮೊಬೈಲ್‌ ಟಾರ್ಚ್‌ ಹಿಡಿದು ಸಿಸೇರಿಯನ್ ಮಾಡಿದ್ದಾರೆ. ಅಷ್ಟೋತ್ತಿಗಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದಲ್ಲದೇ ಆಮ್ಲಜನಕದ ಕೊರತೆಯಿಂದಾಗಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕುಟುಂಬಸ್ಥರು ತಾಯಿಯನ್ನು ಎಲ್‌ಟಿಎಂಜಿ ಸಿಯಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಯಿಯೂ ಸಾವನ್ನಪ್ಪಿದ್ದಾಳೆ. ಈ ಘಟನೆ ಇದೀಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Shwetha M

Leave a Reply

Your email address will not be published. Required fields are marked *