30 ಸಾವಿರ ಕಿ.ಮೀ ಪ್ರಯಾಣ ಮಾಡಿ ಫುಡ್ ಡೆಲಿವೆರಿ ಮಾಡಿದ ಮಹಿಳೆ- ವಿಡಿಯೋ ವೈರಲ್

30 ಸಾವಿರ ಕಿ.ಮೀ ಪ್ರಯಾಣ ಮಾಡಿ ಫುಡ್ ಡೆಲಿವೆರಿ ಮಾಡಿದ ಮಹಿಳೆ- ವಿಡಿಯೋ ವೈರಲ್

ಸಿಂಗಾಪುರ: ಆನ್ಲೈನ್‌ ನಲ್ಲಿ ಫುಡ್‌ ಆರ್ಡರ್‌ ಮಾಡುವುದು ಈಗಿನ ಟ್ರೆಂಡ್. ಆರ್ಡರ್ ಮಾಡಿದ ಅರ್ಧ ಗಂಟೆಯೊಳಗೆ ಫುಡ್‌ ನಮ್ಮ ಕೈ ಸೇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಫುಡ್‌ ಡೆಲಿವೆರಿ ಮಾಡಿ ಸುದ್ದಿಯಾಗಿದ್ದಾರೆ.

ಸಿಂಗಾಪುರದ ಮಹಿಳೆಯೊಬ್ಬರು ಅಂಟಾರ್ಟಿಕಾದಲ್ಲಿರುವ ಗ್ರಾಹಕರೊಬ್ಬರು ಆರ್ಡರ್‌ ಮಾಡಿದ ಆಹಾರವನ್ನು ತಲುಪಿಸಿದ್ದಾರೆ. ಸಿಂಗಾಪುರದಿಂದ ಅಂಟಾರ್ಟಿಕಾ ಎಂದರೆ 5-10 ಕಿಮೀಗಳಷ್ಟು ದೂರವಲ್ಲ. ಇವರು ಸಾಗಿದ್ದು 30,000 ಸಾವಿರ ಕೀ.ಮಿ, ಅಂದರೆ 4 ಖಂಡಗಳನ್ನು ದಾಟಿದ್ದಾರೆ.

ಇದನ್ನೂ ಓದಿ: ಹಗಲು ರಾತ್ರಿ ಎನ್ನದೇ ನೂರಾರು ಕುರಿಗಳು ಪ್ರದಕ್ಷಿಣೆ ಹಾಕುತ್ತಿವೆ ಕುರಿಗಳು- ವಿಡಿಯೋ ವೈರಲ್

ಸಿಂಗಾಪುರದ ಮಾನಸ ಗೋಪಾಲ್ ʼಫುಡ್‌ ಪಾಂಡʼ ಪ್ರಾಯೋಜಕತ್ವದಲ್ಲಿ ಸಿಂಗಾಪುರದಿಂದ ಅಂಟಾರ್ಟಿಕಾಕ್ಕೆ ಫುಡ್‌ ಡೆಲಿವೆರಿ ಮಾಡಿದ್ದಾರೆ. ಮಾನಸ ತಮ್ಮ ಪಯಣವನ್ನು ಚಿತ್ರೀಕರಿಸಿ ಇನ್ಸ್ಟಾಗ್ರಾಮ್‌ ನಲ್ಲಿ ಆಪ್ಲೋಡ್‌ ಮಾಡಿದ್ದು, ಇದು ವೈರಲ್‌ ಆಗಿದೆ.

ತಮ್ಮ ಕೈಯಲ್ಲಿ ಆರ್ಡರ್‌ ತಲುಪಿಸಲಿರುವ ಆಹಾರದ ಪೊಟ್ಟಣವನ್ನು ಹಿಡಿದುಕೊಂಡು ಸಿಂಗಾಪುರದಿಂದ ಹೊರಟ ಮಾನಸ ಗೋಪಾಲ್ ಬ್ಯೂನಸ್ ಅರೆಸ್, ಉಶುಯಾಯಾ ತಲುಪಿದ ಬಳಿಕ ಅಂಟಾರ್ಟಿಕಾ ಮುಟ್ಟಿದ್ದಾರೆ. ದಾರಿ ಮಧ್ಯ ಹಿಮಭರಿತ ಮಾರ್ಗ, ಮಣ್ಣಿನ ರಸ್ತೆಯನ್ನು ದಾಟಿಕೊಂಡು ಕೊನೆಗೆ ಗ್ರಾಹಕನ ಕೈಗೆ ತಲುಪಿಸಿದ್ದಾರೆ. ತಮ್ಮ ವಿಶೇಷ ಪಯಣದ ಬಗ್ಗೆ ಮಾನಸ ಅವರು ವಿಡಿಯೋ ಹಂಚಿಕೊಂಡಿದ್ದು, ಮಾನಸಾಳ ಈ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

 

suddiyaana