ಹೂ ಬೊಕ್ಕೆ ಬದಲು ವಧುವಿನ ಕೈಯಲ್ಲಿ ಚಿಕನ್ ಲೆಗ್ ಪೀಸ್! – ಕೆಎಫ್ಸಿ ಥೀಮ್ನಲ್ಲಿ ಮದುವೆಯಾದ ಜೋಡಿ!

ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುವುದು ಬಹಳ ಮುಖ್ಯವಾದ ಕ್ಷಣವಾಗಿದೆ. ಮದುವೆಯ ಪ್ರತಿಯೊಂದು ಕ್ಷಣವನ್ನು ಜೀವಮಾನವಿಡೀ ಸ್ಮರಣೀಯವಾಗಿರಿಸಲು ಪ್ರತಿಯೊಬ್ಬರು ಮದುವೆ ಸಮಾರಂಭವನ್ನು ಬಹಳ ವಿಶೇಷವಾಗಿ ನಡೆಸಬೇಕೆಂದು ಬಯಸುತ್ತಾರೆ. ಕೆಲವರು ರಾಯಲ್ ಥೀಮ್ ಗಳಲ್ಲಿ ಮದುವೆಯಾದರೆ, ಇನ್ನೂ ಕೆಲವರು ತಮ್ಮ ಇಷ್ಟದ ದೇಶ ಅಥವಾ ಸ್ಥಳಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಾರೆ. ಹೀಗೆ ಪ್ರತಿಯೊಬ್ಬರೂ ಅದ್ಧೂರಿಯಾಗಿ ತಮ್ಮ ಇಷ್ಟದಂತೆ ಮದುವೆ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಅದೇ ರೀತಿ ಇಲ್ಲೊಂದು ವಿಶಿಷ್ಟವಾದ ಮದುವೆ ನಡೆದಿದೆ. ಇವರ ಥೀಮ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಹೌದು, ಇತ್ತೀಚೆಗೆ ಅನೇಕ ಜನರು ಮದುವೆಯನ್ನು ಅವರ ಕನಸಿನಂತೆ ಮಾಡಲು ಬಯಸುತ್ತಾರೆ. ಅದಕ್ಕಾಗಿ ಡೆಸ್ಟಿನೇಷನ್ ವೆಡ್ಡಿಂಗ್, ಥೀಮ್ ಇರುವಂತಹ ಮದುವೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ. ಅನೇಕರು ವಿಶಿಷ್ಟವಾದ ಬಟ್ಟೆಗಳು, ಅಲಂಕಾರಗಳಿಂದ ವಿಶೇಷ ಕಾರ್ಯಕ್ರಮಗಳ ಮೂಲಕ ಮದುವೆ ಸಮಾರಂಭ ಏರ್ಪಡಿಸುತ್ತಿದ್ದರು. ಇಲ್ಲೊಂದು ವಿಶಿಷ್ಟ ಥೀಮ್ ಮೂಲಕ ಮದುವೆ ಆಗಿದ್ದಾರೆ. ಅವರು ಮದುವೆಯಾಗಲು ಕೆಎಫ್ಸಿ ಥೀಮ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಗಡಿಬಿಡಿಯಲ್ಲಿ ಏನೋ ಮಾಡಲು ಹೋಗಿ ಟೂತ್ ಬ್ರಷ್ ನುಂಗಿದ ಯುವತಿ! – ಸಾವಿನ ಅಂಚಿನಿಂದ ಪಾರಾಗಿದ್ದೇ ರೋಚಕ..
ನವೆಂಬರ್ 26 ರಂದು ಸಿಂಗಾಪುರದಲ್ಲಿ ಈ ಜೋಡಿ ಕೆಎಫ್ಸಿ (ಕೆಂಟುಕಿ ಫ್ರೈಡ್ ಚಿಕನ್) ಥೀಮಿನ ಮದುವೆ ಮಾಡಿಕೊಂಡಿದ್ದಾರೆ. 32 ವರ್ಷದ ಲಾಯಿಂಗ್ ಲೆ ವಾಂಗ್, 40 ವರ್ಷದ ಕ್ಸಿ ಪೆಂಗ್ ಅವರನ್ನು ವಾಂಗ್ ಕೆಎಫ್ಸಿ ಥೀಮ್ ಮೂಲಕ ಮದುವೆಯಾದ ಜೋಡಿ.
ಲಾಯಿಂಗ್ ಹಾಗೂ ಕ್ಸಿ ಪೆಂಗ್ ಈ ಥೀಮ್ ನಲ್ಲಿ ಮದುವೆಯಾಗಲು ಕೂಟ ಒಂದು ಕಾರಣ ಇದೆ. ವಾಂಗ್ ಕೆಎಫ್ಸಿಯ ದೊಡ್ಡ ಅಭಿಮಾನಿಯಾಗಿದ್ದು, ಆಕೆಯ ಮದುವೆಗೆ ಮುಂಚಿತವಾಗಿ ರೆಸ್ಟೋರೆಂಟ್ಗೆ ಇದರ ಬಗ್ಗೆ ಇ-ಮೇಲ್ ಮಾಡಿದ್ದಳು, ಆಕೆಯ ಮದುವೆಯನ್ನು ಆಚರಿಸಿಕೊಳ್ಳಲು ಇಂತಹದೇ ಒಂದು ಸ್ಥಳವನ್ನು ಆಕೆ ಹುಡುಕುತ್ತಿದ್ದಳಂತೆ. ಹೀಗಾಗಿ ಆಕೆ ಈ ಕೆಎಫ್ಸಿ ಶಾಪ್ನಲ್ಲಿ ಮದುವೆಯಾಗಲು ಬಯಸಿದ್ದಾಳೆ.
ಇನ್ನೊಂದು ದುಖಃದ ವಿಚಾರವೆಂದರೆ ವಧು ಲಾಯಿಂಗ್ ತನ್ನ ಕಾಲುಗಳಲ್ಲಿನ ಸ್ವಾದೀನ ಕಳೆದುಕೊಂಡಿದ್ದಾಳೆ. ಆಕೆಗೆ ಎಲ್ಲರಂತೆ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಕೆ ಗಾಲಿಕುರ್ಚಿಯಲ್ಲಿ ಓಡಾಡುವಂತ ಸ್ಥಿತಿಯಲ್ಲಿದ್ದಾಳೆ. ಆಕೆಯ ಮೆದುಳಿನಲ್ಲಿ ದೋಷಯುಕ್ತ ರಕ್ತನಾಳಗಳನ್ನು ಹೊಂದಿದ್ದು, ಅದು ಅವಳ ನಡೆಯುವ ಸಾಮರ್ಥ್ಯವನ್ನು ಕಸಿದುಕೊಂಡಿದೆಯಂತೆ. ಆದ್ದರಿಂದ, ರೆಸ್ಟೋರೆಂಟ್ ಅವಳ ಸ್ಥಿತಿಯ ಬಗ್ಗೆ ತಿಳಿದಾಗ, ಸ್ಥಳೀಯ ಮ್ಯಾನೇಜರ್ ಅವಳ ಮದುವೆಯನ್ನು ಇನ್ನಷ್ಟು ವಿಶೇಷವಾಗಿಸಲು ನಿರ್ಧರಿಸಿದರು. ಹೀಗಾಗಿ ಕೆಎಫ್ಸಿ ಶಾಪ್ನಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಕೆಎಫ್ಸಿ ಮ್ಯಾನೆಜರ್ ಆಕೆಯ ಕನಸಿನಂತೆ ವಿವಾಹ ಸಮಾರಂಭವನ್ನು ಮಾಡಿಸಿದ್ದಾರೆ. ಮದುವೆಗಾಗಿ ಅಂಗಡಿಯನ್ನು ವಿಶೇಷವಾಗಿ ಅಲಂಕಾರ ಮಾಡಿಸಿದ್ದಾರೆ. ಕೆಎಫ್ಸಿ ಮೆನು ಐಟಂಗಳ ರೆಡಿ ಮಾಡಿಸಿ ಅದರ ಉಪಸ್ಥಿತಿಯಲ್ಲಿ ಈ ಜೋಡಿಯು ವಿವಾಹವಾದರು. ಇನ್ನೊಂದು ಕುತೂಹಲಕಾರಿ ವಿಚಾರ ಎಂದರೆ ವಧುಗಾಗಿ ಗುಲಾಬಿಗಳು ಮತ್ತು ಲಿಲ್ಲಿಗಳ ಪುಷ್ಪಗುಚ್ಛವನ್ನು ನೀಡುವ ಬದಲು, ಬಿಳಿ ಕಾಗದವನ್ನು ಸುತ್ತಿದ ಮತ್ತು ಕೆಂಪು ರಿಬ್ಬನ್ನಿಂದ ಅಲಂಕರಿಸಲ್ಪಟ್ಟ ಕೆಎಫ್ಸಿ ಡ್ರಮ್ಸ್ಟಿಕ್ಗಳ ಪುಷ್ಪಗುಚ್ಛವನ್ನು ಸಿದ್ದಪಡಿಸಿ ನೀಡಲಾಗಿದೆ.
ಈ ಜೋಡಿ ಮೊದಲ ಬಾರಿಗೆ ಕೆಎಫ್ಸಿ ಔಟ್ಲೆಟ್ ಭೇಟಿಯಾಗಿದ್ದರಂತೆ. ಅಂದಿನಿಂದ, ವಾಂಗ್ ಕೆಎಫ್ಸಿಯ ಅಭಿಮಾನಿಯಾಗಿದ್ದಾರೆ ಮತ್ತು ತನ್ನ ಮದುವೆಯನ್ನು ಈ ರೀತಿ ಆಚರಿಸುವ ಬಗ್ಗೆ ಕಲ್ಪನೆ ಮಾಡಿಕೊಂಡಿದ್ದರಂತೆ. ಮೂಲಗಳ ಪ್ರಕಾರ, ಕೆಎಫ್ಸಿ, ಈ ಮದುವೆಯ ಊಟದ ಅರ್ಧದಷ್ಟು ಹಣವನ್ನು ಪಾವತಿಸಿತು ಮತ್ತು ಆರತಕ್ಷತೆಗೆ ಅಲಂಕಾರಿಕ ವಸ್ತುಗಳನ್ನು ಸಹ ಇವರೇ ಒದಗಿಸಿದರಂತೆ.