ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ಈಗಿನ ಕಾಲದಲ್ಲಿ ಆರತಿಗೊಂದು ಕೀರುತಿಗೊಂದು ಇದ್ರೆ ಸಾಕು ಅಂತಾ ದಂಪತಿಗಳು ಬಯಸುತ್ತಾರೆ. ಇರೋ ಎರಡು ಮಕ್ಕಳನ್ನೇ ಸಾಕೋದು ಕಷ್ಟ ಇನ್ನೊಂದು ಮಗು ಆದ್ರೆ ಬದುಕು ಕಷ್ಟ ಇದೆ ಅಂತಾ ಹೇಳುವವರು ಅನೇಕರು ಇದ್ದಾರೆ. ಆದ್ರೆ ಇಲ್ಲೊಬ್ಬಳು ಮಹಾತಾಯಿ ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆಯನ್ನು ಜಾಗತಿಕವಾಗಿ ಹಿಂಪಡೆದ ಆಸ್ಟ್ರಾಜೆನೆಕಾ! – ಲಸಿಕೆ ಪಡೆದವರ ಕತೆಯೇನು?
ಅಚ್ಚರಿಯಾದ್ರೂ ಸತ್ಯ. ನಾವಿಬ್ಬರು, ನಮಗಿಬ್ಬರು ಅನ್ನೋ ಕಾಲವಿದು. ಆದ್ರೆ ಬಿಹಾರದ ಕಿಶನ್ಗಂಜ್ ಜಿಲ್ಲೆಯ ಪೋಥಿಯಾ ಬ್ಲಾಕ್ನಲ್ಲಿ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿನ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಮಹಿಳೆ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ಯಾವುದೇ ಆಪರೇಷನ್ ಇಲ್ಲದೆಯೇ ನಾರ್ಮಲ್ ಡೆಲಿವರಿ ಮೂಲಕ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ಕಿಶನ್ಗಂಜ್ ಜಿಲ್ಲೆಯ ಠಾಕೂರ್ಗಂಜ್ ಬ್ಲಾಕ್ನ ಜಲ್ ಮಿಲ್ಲಿಕ್ ಗ್ರಾಮದ ಜಾವೇದ್ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂಗೆ ಪಂಚ ಪಾಂಡವರು ಜನಿಸಿದ್ದಾರೆ. ವೈದ್ಯೆ ಡಾ.ಫರ್ಜಾನಾ ನೂರಿ ನೇತೃತ್ವದಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ಇನ್ನು ಜಾವೇದ್ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂಗೆ ಈಗಾಗಲೇ ಒಬ್ಬ ಮಗನಿದ್ದಾನೆ. ತಾಹೇರಾ ಬೇಗಂ 2 ತಿಂಗಳ ಗರ್ಭಿಣಿ ಸಮಯದಲ್ಲಿ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿಸಿದ್ದರು. ಆದರೆ ಈ ವೇಳೆ 4 ಮಕ್ಕಳಿರುವುದು ಗೊತ್ತಾಯಿತು. ಬಳಿಕ ಮತ್ತೊಂದು ಸಾರಿ ಬಂದಾಗ 5 ಮಕ್ಕಳಿರುವುದನ್ನು ಡಾಕ್ಟರ್ ದೃಢಪಡಿಸಿದರು. ಸದ್ಯ ಜಾವೇದ್ ಆಲಂ ಮತ್ತು ಅವರ ಪತ್ನಿ ತಾಹೇರಾ ಬೇಗಂ 6 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಏಕಕಾಳದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ದಂಪತಿ ಸಂತೋಷದಲ್ಲಿದ್ದಾರೆ.