ಸ್ಕೂಬಾ ಡೈವಿಂಗ್‌ಗೆ ಸಜ್ಜಾಗಿದ್ದ ಯುವತಿಗೆ “ಶಾರ್ಕ್” ನಿಂದ ಶಾಕ್!
ಸ್ಕೂಬಾ ಡೈವಿಂಗ್ ಮಾಡಬೇಕು ಅನ್ನೋದು ಅನೇಕರ ಕನಸು. ಹೀಗಾಗಿ ಜೀವನದಲ್ಲಿ ಒಂದು ಬಾರಿಯಾದರೂ ಸ್ಕೂಬಾ ಡೈವಿಂಗ್ ಮಾಡಬೇಕು ಅಂತಾ ಹಾತೊರೆಯುತ್ತಿರುತ್ತಾರೆ. ಸ್ಕೂಬಾ ಡೈವಿಂಗ್ ಮಾಡಲು ಸಮುದ್ರದ ಮಧ್ಯೆ ತೆರಳುವುದನ್ನು ನಾವು ನೋಡಿದ್ದೇವೆ. ಈ ವೇಳೆ ಕೆಲವೊಂದು ಅವಘಡಗಳು ಸಂಭವಿಸುತ್ತದೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಇದೀಗ ಇಲ್ಲೊಂದು ಭಯಾನಕ ವೈರಲ್ ಆಗುತ್ತಿದೆ.
ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಕೆಲ ಜಲಚರಗಳು ದಾಳಿ ಮಾಡುತ್ತವೆ. ಇಲ್ಲೂ ಆದದ್ದು ಇದೇ. ಯುವತಿಯೊಬ್ಬಳು ಸ್ಕೂಬಾ ಡೈವಿಂಗ್ ಮಾಡಲು ಮುಂದಾಗಿದ್ದಾಳೆ. ಈಕೆ ಇನ್ನೇನು ನೀರಿಗೆ ಇಳಿಯಬೇಕು ಅನ್ನುವಷ್ಟರಲ್ಲಿ ಅಲ್ಲೊಂದು ಆತಂಕಕಾರಿ ಸನ್ನಿವೇಶ ಎದುರಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬಾಲಕಿಯೊಂದಿಗೆ ಮೈನಾಹಕ್ಕಿ ಸ್ನೇಹ – ಶಾಲೆಗೂ ಹೋಗುತ್ತೆ.. ಪಾಠನೂ ಕೇಳುತ್ತೆ!
ವೈರಲ್ ಆದ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಯುವತಿಯೊಬ್ಬಳು ಸ್ಕೂಬಾ ಡೈವಿಂಗ್ ಮಾಡಲು ಸೂಕ್ತವಾದ ಉಡುಗೆ, ಸುರಕ್ಷತಾ ಸಾಧನಗಳನ್ನ ಧರಿಸಿ ಸಜ್ಜಾಗಿದ್ದಾಳೆ. ಉತ್ಸಾಹದಿಂದಲೇ ನೀರಿಗಿಳಿಯಲು ಮುಂದಾಗಿದ್ದಾಳೆ. ಆಕೆ ಇಳಿಯುತ್ತಿದ್ದಂತೆ ಏನೋ ಕಂಡು ಗಾಬರಿಗೊಂಡು ತಕ್ಷಣ ಭಯದಲ್ಲಿ ಹಿಂದಕ್ಕೆ ಬಂದಿದ್ದಾರೆ. ಕಾರಣ, ಅಲ್ಲೊಂದು ದೊಡ್ಡ ಶಾರ್ಕ್ ಆಕೆಗೆ ಎದುರಾಗಿತ್ತು! ಹೀಗೆ ಬಂದ ಶಾರ್ಕ್ ಬಲಿಗಾಗಿ ಬಾಯಿತೆರೆದು ಆಕೆಯನ್ನು ನುಂಗಲು ಮುಂದಾಗಿದೆ. ಒಂದು ಕ್ಷಣ ಅಲ್ಲಿದ್ದವರು ಗಾಬರಿಗೊಂಡಿದ್ದಾರೆ.
ಯುವತಿ ಸಕಾಲದಲ್ಲಿ ಹಿಂದಕ್ಕೆ ಬಂದಿದ್ದರಿಂದ ದೊಡ್ಡ ಅಪಾಯದಿಂದ ಪಾರಾಗಿದ್ದಾಳೆ. ಆಕೆ ಒಂದು ಕ್ಷಣ ಮೈಮರೆತರೂ ಶಾರ್ಕ್ ಬಾಯಿಗೆ ಆಹಾರವಾಗಿ ಸೇರುತ್ತಿದ್ದಳು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಜನರು ಅಚ್ಚರಿ, ಆಘಾತ, ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಹಲವರು ಶಾರ್ಕ್‌ನ ದಾಳಿಗಳ ಬಗ್ಗೆಯೂ ಬರೆದುಕೊಂಡಿದ್ದಾರೆ.
Jump in.. pic.twitter.com/cDjayUX3AS
— Wow Terrifying (@WowTerrifying) March 16, 2023