ಟಿಕ್ ಟಾಕ್ ನೋಡಿ ಮೊಟ್ಟೆ ಬೇಯಿಸಿದ ಮಹಿಳೆ – ನಡೆದೇ ಹೋಯ್ತು ದುರಂತ!
ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ನೋಡಿ ಅಡುಗೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಸಾಮಾಜಿಕ ಜಾಲತಾಣಗಳ ವಿಡಿಯೋ ನೋಡಿಕೊಂಡು ಅಡುಗೆ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ನಿದರ್ಶವೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಇಲ್ಲೊಬ್ಬಳು ಮಹಿಳೆ ಟಿಕ್ ಟಾಕ್ ವಿಡಿಯೋ ನೋಡಿ ಮೊಟ್ಟೆ ಬೇಯಿಸಿದ್ದು, ಇದರಿಂದಾಗಿ ಆಕೆಯ ಮುಖವೇ ವಿರೂಪಗೊಂಡಿದೆ.
ಇದನ್ನೂ ಓದಿ: ಪಕ್ಷಿಯ ಜೀವ ಉಳಿಸಲು ಹೋಗಿ 1 ಲಕ್ಷ ಕಳೆದುಕೊಂಡ ಮಹಿಳೆ!
37 ವರ್ಷದ ಶಾಫಿಯಾ ಬಶೀರ್ ಎಂಬಾಕೆ ಟಿಕ್ ಟಾಕ್ ನಲ್ಲಿ ಮೊಟ್ಟೆ ಬೇಯಿಸುವ ವಿಧಾನವನ್ನು ನೋಡಿದ್ದಾಳೆ. ಬಳಿಕ ವಿಡಿಯೋದಲ್ಲಿ ತೋರಿಸಿದಂತೆ ತಾನು ಮೊಟ್ಟೆ ಬೇಯಿಸಬೇಕು ಎಂದು ಮುಂದಾಗಿದ್ದಾಳೆ. ನಂತರ ಆಕೆ ಒಂದು ಮಗ್ ನಲ್ಲಿ ಕುದಿಯುತ್ತಿರುವ ನೀರು ಹಾಕಿ ಅದಕ್ಕೆ ಮೊಟ್ಟೆಗಳನ್ನು ಹಾಕಿ 2 ನಿಮಿಷಗಳ ಕಾಲ ಮೈಕ್ರೋವೇವ್ನಲ್ಲಿ ಇರಿಸಿದ್ದಳು. ಬಳಿಕ ತಣ್ಣನೆಯ ಚಮಚದಿಂದ ಮೊಟ್ಟೆಯನ್ನು ಹೊರ ತೆಗೆದಾಗ ಅದು ಸ್ಫೋಟಗೊಂಡಿದೆ. ಇದರಿಂದ ಆಕೆಯ ಮುಖದ ಬಲಭಾಗ ಸಂಪೂರ್ಣ ಸುಟ್ಟಿದೆ. ಘಟನೆಯ ನಂತರ ಬಶೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ.
ಇದು ತನ್ನ ಜೀವನದ “ಅತ್ಯಂತ ಅಸಹನೀಯ” ನೋವು. ಬೇರೆ ಯಾರೂ ಕೂಡ ಜಾಲತಾಣವನ್ನು ನೋಡಿ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಬಶೀರ್ ಅವರು ಸಲಹೆ ನೀಡಿದ್ದಾಳೆ.
ಇಂದು ಬಹುತೇಕರು ಅಡುಗೆ ಮಾಡಲು ಜಾಲತಾಣ ಮೊರೆ ಹೋಗಿರುವ ಸಂದರ್ಭದಲ್ಲಿ ಈ ಮಹಿಳೆಗಾದ ಅನುಭವ ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ.