ಯಾರದ್ದೋ ಶವ ತೋರಿಸಿ ತನ್ನ ಪತಿ ಎಂದಳು – ಒಡಿಶಾ ರೈಲು ದುರಂತದ ₹17 ಲಕ್ಷ ಪರಿಹಾರಕ್ಕಾಗಿ ಮಹಿಳೆ ಕಳ್ಳಾಟ!

ಯಾರದ್ದೋ ಶವ ತೋರಿಸಿ ತನ್ನ ಪತಿ ಎಂದಳು – ಒಡಿಶಾ ರೈಲು ದುರಂತದ ₹17 ಲಕ್ಷ ಪರಿಹಾರಕ್ಕಾಗಿ ಮಹಿಳೆ ಕಳ್ಳಾಟ!

ನೆತ್ತರ ಕಲೆ ಮಾಸಿಲ್ಲ. ಸೂತಕದ ಛಾಯೆ ಮರೆಯಾಗಿಲ್ಲ. ಸಾವಿನ ಮನೆಗಳಲ್ಲಿ ಕಣ್ಣೀರು ಹರಿಯುತ್ತಲೇ ಇದೆ. ಗಾಯಾಳುಗಳು ನೋವಿನಲ್ಲಿ ಚೀರಾಡುತ್ತಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಪೈಕಿ 100 ಜನರ ಗುರುತೇ ಪತ್ತೆಯಾಗಿಲ್ಲ. ಸಾವನ್ನಪ್ಪಿದವರು ಯಾರು..? ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು..? ಸಂಬಂಧಿಗಳು ಯಾರು ಅನ್ನೋದನ್ನ ಕಂಡು ಹಿಡಿಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೆ ಇಂಥಾ ಟೈಮಲ್ಲಿ ಇಲ್ಲೊಬ್ಬಳು ಮಹಿಳೆ ಮಾಡಬಾರದ ಕೆಲಸ ಮಾಡಿದ್ದಾಳೆ.

ಇದನ್ನೂ ಓದಿ : ‘ಬ್ರಿಜ್ ಭೂಷಣ್ ರನ್ನ ಬಂಧಿಸಿ.. ಒಕ್ಕೂಟಕ್ಕೆ ಮಹಿಳಾ ಅಧ್ಯಕ್ಷರನ್ನ ನೇಮಿಸಿ’ – ಕ್ರೀಡಾ ಸಚಿವರ ಮುಂದೆ ಕುಸ್ತಿಪಟುಗಳ ಬೇಡಿಕೆ!

ಒಡಿಶಾದಲ್ಲಿ ಜೂನ್ 2ರಂದು ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 280ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ, ಒಡಿಶಾ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಆದರೆ ಇದೇ ಪರಿಹಾರದ ಹಣಕ್ಕಾಗಿ ಇಲ್ಲೊಬ್ಬಳು ಕಳ್ಳಾಟ ಆಡಿದ್ದಾಳೆ. ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ಎಂಬಾಕೆ ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ ಮೃತದೇಹವೊಂದನ್ನು ತೋರಿಸಿ ಅದೇ ತನ್ನ ಪತಿಯ ಮೃತದೇಹ ಎಂದು ಗುರುತಿಸಿದ್ದಾಳೆ. ಯಾಕಂದ್ರೆ ರೈಲ್ವೆ ಸಚಿವಾಲಯದಿಂದ (railways ministry) ₹10 ಲಕ್ಷ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಿಂದ ₹ 5 ಲಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ₹ 2 ಲಕ್ಷ ನೀಡಲಾಗುತ್ತದೆ. ಹಾಗಾದರೆ ಒಟ್ಟು ₹ 17 ಲಕ್ಷ ಸಿಗಬಹುದು ಎಂಬ ದುರಾಸೆಯಿಂದ ಮಹಿಳೆ ಈ ನಾಟಕವಾಡಿದ್ದಾಳೆ.

ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಮೃತದೇಹವೊಂದನ್ನು ಅದೇ ತನ್ನ ಪತಿಯ ಮೃತದೇಹ ಎಂದು ಗುರುತಿಸಿದ್ದರು. ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂಬುದು ಗೊತ್ತಾಗಿದೆ. ಸಾರ್ವಜನಿಕ ಹಣವನ್ನು ದೋಚಲು ಪ್ರಯತ್ನಿಸಿದ್ದಕ್ಕಾಗಿ ಮತ್ತು ತಾನು ಬದುಕಿದ್ದರೂ ಸತ್ತಿದ್ದೇನೆ ಎಂದು ಹೇಳಿದ ತನ್ನ ಹೆಂಡತಿಯ ವಿರುದ್ಧ ಕಠಿಣ ಕ್ರಮಕ್ಕೆ ಬಿಜಯ್ ದತ್ತಾ ಒತ್ತಾಯಿಸಿದ್ದಾರೆ. ಮೊದಲು ದೂರು ದಾಖಲಿಸಿದ ಮಣಿಬಂಡಾ ನಿಲ್ದಾಣದ ಉಸ್ತುವಾರಿ ಪೊಲೀಸ್ ಅಧಿಕಾರಿ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾದಲ್ಲಿನ ಪೊಲೀಸ್ ಠಾಣೆಗೆ ದೂರು ವರ್ಗಾಯಿಸಿದ್ದಾರೆ.

suddiyaana