ಹೆಚ್ಚುವರಿ ಲಗೇಜ್‌ಗೆ ಹಣ ಕೇಳಿದ್ರೆ ಬಾಂಬ್ ಬೆದರಿಕೆ..!- ವಿಮಾನ ನಿಲ್ದಾಣದಲ್ಲಿ ಮಹಿಳೆಯ ಹೈಡ್ರಾಮಾ..!   

ಹೆಚ್ಚುವರಿ ಲಗೇಜ್‌ಗೆ ಹಣ ಕೇಳಿದ್ರೆ ಬಾಂಬ್ ಬೆದರಿಕೆ..!- ವಿಮಾನ ನಿಲ್ದಾಣದಲ್ಲಿ ಮಹಿಳೆಯ ಹೈಡ್ರಾಮಾ..!   

ಹೆಚ್ಚುವರಿ ಲಗೇಜ್‌ಗೆ ಹಣ ಪಾವತಿಸಬೇಕು ಎಂದು ಕೇಳಿದ್ದಕ್ಕೆ ಬ್ಯಾಗ್ ಮುಟ್ಟಿದ್ರೆ ಹುಷಾರ್.. ಅದರಲ್ಲಿ ಬಾಂಬ್ ಇದೆ ಅಂತಾ ಮಹಿಳೆಯೊಬ್ಬರು ಏರ್ಪೋರ್ಟ್ ಸಿಬ್ಬಂದಿಯನ್ನು ಹೆದರಿಸಿದ ಘಟನೆ ನಡೆದಿದೆ. ಮಹಿಳೆಯ ವರ್ತನೆಯಿಂದ ಆತಂಕಕ್ಕೆ ಒಳಗಾದ ಸಿಬ್ಬಂದಿ ಭದ್ರತಾ ಪಡೆಗಳ ನೆರವು ಪಡೆದಿದ್ದಾರೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹೈಡ್ರಾಮಾ ನಡೆದಿದೆ.

ಇದನ್ನೂ ಓದಿ: ಭೂಮಿಯಾಳದಲ್ಲಿ ರಂಧ್ರ ಕೊರೆಯುತ್ತಿರುವುದೇಕೆ ಚೀನಾ ? – ಆಳವಾದ ಬೋರ್‌ಹೋಲ್‌ಗೆ ಕಾರಣಗಳೇನು?

ಹೆಚ್ಚುವರಿ ಲಗೇಜ್ ತಂದಿದ್ದ ಮಹಿಳೆಗೆ ಏರ್ಪೋರ್ಟ್ ಸಿಬ್ಬಂದಿ ಹಣ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ಜಗಳಕ್ಕಿಳಿದ ಮಹಿಳೆಯೊಬ್ಬಳು ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೆದರಿಸಿದ್ದಾಳೆ. ಕೂಡಲೆ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಹಿಳೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೋರ್ಟ್ ಮುಂದೆ ಹಾಜರುಪಡಿಸಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಮಹಿಳೆಯು ತನ್ನ ತಾಯಿಯನ್ನು ಭೇಟಿಯಾಗಲು ಮೇ 29 ರಂದು ಕೊಲ್ಕತ್ತಾಕ್ಕೆ ಹೊರಟಿದ್ದಳು. 5:30 ರ ವೇಳೆ ಚೆಕ್ ಇನ್ ಆಗಲು ಚೆಕ್ ಇನ್ ಕೌಂಟರ್ ತಲುಪಿದ್ದಳು. ವಿಮಾನಯಾನ ನಿಯಮಗಳು ದೇಶೀಯ ಪ್ರಯಾಣಕ್ಕಾಗಿ ಗರಿಷ್ಠ 15 ಕೆಜಿಯ ಒಂದೇ ಬ್ಯಾಗ್ ಅನುಮತಿಸುತ್ತದೆ. ಆದರೆ ಮಹಿಳೆ ಎರಡು ಬ್ಯಾಗ್‌ಗಳನ್ನು ಹೊಂದಿದ್ದಳು. ಮತ್ತು ಅದರ ತೂಕ 22.05 ಕೆಜಿ ಇತ್ತು. ಲಗೇಜ್ ತೂಕ ಹೆಚ್ಚಿದ್ದ ಹಿನ್ನಲೆ ಹಚ್ಚುವರಿ ಬ್ಯಾಗ್‌ಗೆ ಹಣ ಪಾವತಿಸುವಂತೆ ಕೌಂಟರ್ ನಲ್ಲಿದ್ದ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದಕ್ಕೆ ನಿರಾಕರಿಸಿದ ಮಹಿಳೆ ಸಿಬ್ಬಂದಿ ಜೊತೆಗೆ ಜಗಳಕ್ಕಿಳಿದು ಕೂಗಾಡಲು ಆರಂಭಿಸಿದ್ದಾಳೆ. ನಂತರ ಬಾಂಬ್ ಇದೆಯೆಂದು ಹೆದರಿಸುವ ಮೂಲಕ ಹೈಡ್ರಾಮಾವನ್ನೇ ಮಾಡಿದ್ದಾಳೆ.

suddiyaana