40 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ ಈ  ಮಹಿಳೆ!: ಕಾರಣ ಕೇಳಿ ತಬ್ಬಿಬ್ಬಾದ ವೈದ್ಯರು…

40 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ ಈ  ಮಹಿಳೆ!: ಕಾರಣ ಕೇಳಿ ತಬ್ಬಿಬ್ಬಾದ ವೈದ್ಯರು…

ಪ್ರತಿನಿತ್ಯ ವೈದ್ಯರ ಬಳಿ ನೂರಾರು ರೋಗಿಗಳು ಬರುತ್ತಾರೆ. ತಮಗಿರುವ ಆರೋಗ್ಯ ಸಮಸ್ಯೆಯನ್ನು ಹೇಳಿ ಸ್ಥಿತಿಗಳಿಗನುಗುಣವಾಗಿ ಔಷಧಿಗಳನ್ನೂ ಪಡೆಯುತ್ತಾರೆ. ಆದರೆ ಇಲ್ಲೊಬ್ಬಳು ವೈದ್ಯರ ಬಳಿ ತನ್ನ ಆರೋಗ್ಯ ಸಮಸ್ಯೆಯನ್ನು ಹೇಳಿದ್ದಾಳೆ. ಇದನ್ನು ಕೇಳಿದ ವೈದ್ಯರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

ಚೀನಾದಲ್ಲಿ ವಾಸಿಸುತ್ತಿರೋ ಮಹಿಳೆಯೊಬ್ಬಳು ವೈದ್ಯರ ಬಳಿ ತೆರಳಿ ಕಳೆದ 40 ವರ್ಷಗಳಿಂದ ತಾನು ಒಂದು ಕ್ಷಣವೂ ನಿದ್ದೆಯೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ತಾನು ಬಾಲ್ಯದಿಂದಲೂ ಒಂದು ರಾತ್ರಿ ಕೂಡ ಮಲಗಿಲ್ಲ ಎಂದು ಹೇಳಿದ್ದು, ಮಹಿಳೆಯ ನಿಗೂಢ ಸ್ಥಿತಿಯು ವೈದ್ಯರನ್ನು ಕಂಗೆಡಿಸುವಂತೆ ಮಾಡಿದೆ.

ಇದನ್ನೂ ಓದಿ: ‘Google’ಗೆ ಬ್ರೇಕ್ ಹಾಕುತ್ತಾ ‘ChatGPT’? – ವಿದ್ಯಾರ್ಥಿಗಳಿಗೆ ವರವೋ.. ಶಾಪವೋ..!?

ಪೂರ್ವ ಚೀನಾದ ಹೆನಾನ್ ಪ್ರಾಂತ್ಯದ ಲಿ ಜಾನಿಂಗ್ (Li Zhanying) ಎಂಬಾಕೆ ತಾನು ಸುಮಾರು 40 ವರ್ಷಗಳಿಂದ ನಿದ್ದೆಯೇ ಮಾಡಿಲ್ಲ ಎಂದಿದ್ದಾಳೆ. ತಾನು ಐದು ವರ್ಷದವಳಿದ್ದಾಗ ಕೊನೆಯ ಬಾರಿ ನಿದ್ದೆ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ. ಆಕೆಯ ಸಮಸ್ಯೆ ಅವಳನ್ನು ಹಳ್ಳಿಯಲ್ಲಿ ಸೆಲೆಬ್ರಿಟಿಯನ್ನಾಗಿ ಮಾಡಿದೆ. ಆಷ್ಟೇ ಅಲ್ಲದೇ ಈ ಮಹಿಳೆಯ ಆರೋಗ್ಯ ಸಮಸ್ಯೆ ವೈದ್ಯಕೀಯ ಜಗತ್ತಿಗೆ ಸವಾಲಾಗಿದೆ.

ಆರಂಭದಲ್ಲಿ, ನೆರೆಹೊರೆಯವರು ಆಕೆ ಹೇಳುತ್ತಿರುವುದು ಸುಳ್ಳು ಎಂದು ಭಾವಿಸಿದ್ದರು. ಸತ್ಯಾಂಶವನ್ನು ಅರಿಯಲು ಅವರು ರಾತ್ರಿಯಿಡೀ ಅವಳೊಂದಿಗೆ ಎಚ್ಚರವಾಗಿರಲು ಪ್ರಯತ್ನಿಸಿದ್ದಾರೆ. ಅಲ್ಲದೇ ಅವಳೊಂದಿಗೆ ಕಾರ್ಡ್‌ಗಳನ್ನು ಆಡುತ್ತಿದ್ದರು. ಕೆಲವರು ಅಲ್ಲಿಯೇ ಮೇಜಿನ ಮೇಲೆ ಮಲಗಿದರೆ, ಕೆಲವರು ಮನೆಗೆ ಮರಳುತ್ತಿದ್ದರು. ಆದರೂ ಲಿ ಮಾತ್ರ ಕ್ಷಣವೂ ನಿದ್ರೆ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಲಿ ಜಾನಿಂಗ್ (Li Zhanying) ಅವರ ನಿದ್ರಾಹೀನ ಸ್ಥಿತಿಯ ಬಗ್ಗೆ ಅವರ ಪತಿ ಲುಯಿ ಸುಕ್ವಿನ್ ಅವರು ದೃಢಪಡಿಸಿದ್ದಾರೆ. ತನ್ನ ಪತ್ನಿ ನಿದ್ರಿಸುವುದನ್ನು(Sleeping) ಎಂದಿಗೂ ನೋಡಿಲ್ಲ. ಇದು ಮಾತ್ರವಲ್ಲ, ತನ್ನ ಪತ್ನಿ ಲೀ ರಾತ್ರಿಯಲ್ಲಿ ಸಮಯ ಕಳೆಯಲು ಮನೆಕೆಲಸ ಮಾಡುತ್ತಾರೆ. ಆರಂಭದಲ್ಲಿ ಲಿ ಜಾನಿಂಗ್ ಅವರ ಈ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ಹಲವು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾಳೆ. ಹಲವು ವೈದ್ಯರನ್ನೂ ಸಂಪರ್ಕಿಸಿದೆವು. ಆದರೆ ಯಾವ ಔಷಧಿಯಿಂದಲೂ ಏನೂ ಪ್ರಯೋಜನವಾಗಲಿಲ್ಲ.  ಇಲ್ಲಿಯವರೆಗೆ ಯಾವುದೇ ವೈದ್ಯರು ಲಿ ಯ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ಅಥವಾ ಕಾರಣದ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ ಎಂದು  ಲುಯಿ ಸುಕ್ವಿನ್ ಪತ್ನಿಯ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

suddiyaana