ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ!

ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ!

ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಸಹಜ. ಅದು ಲವ್ ಮ್ಯಾರೇಜ್ ಆಗಿರಲಿ ಅಥವಾ ಆರೆಂಜ್ಡ್ ಮ್ಯಾರೇಜ್ ಆಗಿರಲಿ ಗಂಡ ಹೆಂಡತಿ ಜಗಳ ಆಡುವುದು ಸಾಮಾನ್ಯ. ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಲೇ ಇರುತ್ತಾರೆ. ಕೆಲವೊಂದು ಬಾರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮನಸ್ತಾಪ ದೊಡ್ಡ ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ. ಸಣ್ಣ ಜಗಳದಿಂದಲೇ ಕೆಲವು ದಂಪತಿ ಒಟ್ಟಿಗೆ ಇರಲು ಸಾಧ್ಯ ಇಲ್ಲ ಅಂತಾ ವಿಚ್ಛೇದನ ಪಡೆಯುವುದನ್ನು ನಾವು ಕೇಳಿದ್ದೇವೆ. ಇನ್ನು ಕೆಲವು ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಇದೆ. ಇಲ್ಲೊಂದು ಕಡೆ ಗಂಡ ಮನೆ ಸ್ವಚ್ಛಗೊಳಿಸಿಲ್ಲ ಅಂತಾ ಪತ್ನಿ ಕೋಪದಲ್ಲಿ ಆತನ ಕಿವಿಯನ್ನೇ ಕಚ್ಚಿ ತುಂಡು ಮಾಡಿ ಹಾಕಿದ್ದಾಳೆ.

ಏನಿದು ಘಟನೆ?

ಗಂಡ ಮನೆ ಕೆಲಸಕ್ಕೆ ಸಹಾಯ ಮಾಡಲ್ಲ ಅಂತಾ ಹೆಚ್ಚಿನ ಮಹಿಳೆಯರು ದೂರುತ್ತಲೇ ಇರುತ್ತಾರೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ವಿಚಾರಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ ಉಂಟಾಗಿದೆ. ಕೋಪದಲ್ಲಿ ಮಹಿಳೆಯೊಬ್ಬಳು ಗಂಡನ ಕಿವಿಯನ್ನು ಕಚ್ಚಿರುವ ಘಟನೆ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರಿ ಮಳೆ – ಸಿಡಿಲು ಬಡಿದು 20 ಮಂದಿ ಸಾವು

ಮಹಿಳೆಯು ಬಲವಾಗಿ ಪತಿಯ ಕಿವಿಯನ್ನು ಕಚ್ಚಿರುವ ಕಾರಣ ಬಲಿ ಕಿವಿಯ ಮೇಲ್ಭಾಗ ತುಂಡಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ, ಚಿಕಿತ್ಸೆ ಬಳಿಕ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.ದೂರಿನ ನಂತರ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 324 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.20ರಂದು ಬೆಳಗ್ಗೆ 9.20ರ ಸುಮಾರಿಗೆ ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ, ಮನೆ ಸ್ವಚ್ಛಗೊಳಿಸುವಂತೆ ಪತ್ನಿಗೆ ಹೇಳಿದ್ದೆ, ಮನೆಗೆ ಬಂದ ಕೂಡಲೇ ಪತ್ನಿ ಜಗಳವಾಡಿದ್ದಾಳೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ತನಗೆ ಪಾಲು ನೀಡುವಂತೆ ಪತ್ನಿ ಕೇಳಿಕೊಂಡಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ನಾನು ಅವಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ, ವಾಗ್ವಾದ ನಡೆಯಿತು, ಆಕೆ ಹೊಡೆಯಲು ಬಂದಳು ನಾನು ದೂರ ತಳ್ಳಿದೆ. ಆಗ ಹಿಂದಿನಿಂದ ಬಂದು ಕಿವಿಯನ್ನು ಕಚ್ಚಿದ್ದಾಳೆ. ಆಗ ನನ್ನ ಕಿವಿಯ ಮೇಲ್ಭಾಗ ತುಂಡಾಗಿದೆ ಎಂದು ಹೇಳಿದ್ದಾರೆ.

ನವೆಂಬರ್ 22ರಂದು ಪೊಲೀಸರಿಗೆ ಬಂದು ಲಿಖಿತ ದೂರು ನೀಡಿದ್ದು, ನಾವು ದಾಖಲಿಸಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M