ಪ್ರಿಯಕರನ ಮಾತು ಕೇಳಿ ಲೇಡಿಸ್ ಪಿಜಿಯ ಬಾತ್‌ರೂಮ್‌ನಲ್ಲಿ ಕ್ಯಾಮೆರಾ ಇಟ್ಟ ಯುವತಿ!

ಯುವಕರು ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಪ್ರೀತಿ ಬಲೆಯಲ್ಲಿ ಬಿದ್ದ ಮೇಲೆ ತಮ್ಮ ಸಂಗಾತಿ ಹೇಳಿದಂತೆ ಕೆಲವರು ಕೇಳಬೇಕಾಗುತ್ತದೆ. ಅದು ತಪ್ಪೋ.. ಸರಿಯೋ ಒಟ್ಟಿನಲ್ಲಿ ಆತ ಅಥವಾ ಆಕೆ ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ. ಇದೀಗ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಹೇಳಿದಂತೆ ಮಾಡಲು ಹೋಗಿ ಕಂಬಿ ಎಣಿಸುವಂತೆ ಆಗಿದೆ.
ಅಷ್ಟಕ್ಕೂ ಆಗಿದ್ದು ಏನು?
ಈ ಘಟನೆ ಚಂಡೀಗಢದ ಸೆಕ್ಟರ್ 22ರ ಪಿಜಿಯೊಂದರಲ್ಲಿ ನಡೆದಿದೆ. ಯುವತಿಯೊಬ್ಬಳು ಪ್ರಿಯತಮನ ಮಾತು ಕೇಳಿ ಲೇಡಿಸ್ ಪಿಜಿಯ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮರಾ ಅಳವಡಿಸಿದ್ದಾಳೆ. ಬಾತ್‌ರೂಮ್ ನ ಗೀಸರ್ ಮೇಲೆ ಕ್ಯಾಮರಾ ಇರುವುದು ಪಿಜಿ ಯುವತಿಯರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಯುವತಿಯ ಕೃತ್ಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನ್ನು ಬಂಧಿಸಿ ಅವರ ಫೋನ್‌ಗಳನ್ನು ಸೀಜ್ ಮಾಡಿ ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದಾರೆ. ತನಿಖೆಯ ಪ್ರಕಾರ ಹುಡುಗಿ ಯುಪಿ ನಿವಾಸಿಯಾಗಿದ್ದು, ಹುಡುಗ ಚಂಡೀಗಢದವನೆಂದು ಹೇಳಲಾಗಿದೆ.
ಯುವತಿ ಕಣ್ಣಿಗೆ ಬಿದ್ದ ಹಿಡನ್ ಕ್ಯಾಮೆರಾ
ಪಿಜಿಯಲ್ಲಿ ಅಳವಡಿಸಿದ್ದ ಹಿಡನ್ ಕ್ಯಾಮೆರಾ ಯುವತಿಯೊಬ್ಬಳು ಬಾತ್‌ರೂಮ್‌ಗೆ ಹೋದಾಗ ಗೋಚರಿಸಿದೆ. ತಕ್ಷಣ ಆಕೆ ತನ್ನ ಇತರ ರೂಮ್ಮೇಟ್ಗಳಿಗೆ ತಿಳಿಸಿದಳು ಮತ್ತು ಪೊಲೀಸರಿಗೆ ದೂರನ್ನೂ ನೀಡಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಆರೋಪಿಗಳನ್ನು ಇಬ್ಬರನ್ನೂ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ, ತನ್ನ ಗೆಳೆಯನ ಒತ್ತಾಯದ ಮೇರೆಗೆ ಸ್ನಾನಗೃಹದಲ್ಲಿ ಕ್ಯಾಮೆರಾ ಅಳವಡಿಸಿದ್ದು, ಇತರ ಹುಡುಗಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ಆತನಿಗೆ ಕಳುಹಿಸಲೆಂದು ಹುಡುಗಿ ಹೇಳಿದ್ದಾಳೆ.
ನಾಲ್ಕು ದಿನಗಳ ಹಿಂದೆಯಷ್ಟೇ ಪಿಜಿಗೆ ಎಂಟ್ರಿ
ಆರೋಪಿ ಯುವತಿ ನಾಲ್ಕು ದಿನಗಳ ಹಿಂದೆಯಷ್ಟೇ ತನ್ನ ಪಿಜಿಗೆ ಬಂದಿದ್ದಳು ಎಂದು ಪಿಜಿ ಮಾಲೀಕ ಯಶ್ ಬಜಾಜ್ ಹೇಳುತ್ತಾರೆ. ಪಿಜಿಯಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳು ಬಾತ್‌ರೂಮ್‌ಗೆ ಪ್ರವೇಶಿಸಿದಾಗ ಹಿಂದೆಂದೂ ಕಂಡಿರದ ಕಪ್ಪು ಬಣ್ಣದ ಡಿವೈಸ್ ಹೊಳೆಯುತ್ತಿರುವುದು ಕಂಡಿದ್ದು, ತನಿಖೆ ನಡೆಸಿದಾಗ ಅದೊಂದು ಹಿಡನ್ ಕ್ಯಾಮೆರಾ ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು.
ಸಿನಿಮಾದಿಂದ ಪ್ರೇರಣೆಗೊಂಡಿದ್ದ ಯುವತಿ
ದೂರಿನ ಮೇರೆಗೆ ಯುವತಿಯನ್ನು ತಕ್ಷಣ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಸತ್ಯ ಬಾಯಿ ಬಿಡದಿದ್ದರು, ನಂತರ ಪೊಲೀಸರು ಅವಳನ್ನು ಕಟ್ಟುನಿಟ್ಟಾಗಿ ವಿಚಾರಣೆ ಮಾಡಿದಾಗ, ನಂತರ ಬಾಯಿ ಬಿಟ್ಟಳು ಎಂದು ಹೇಳಿದರು. ‘ಕೇರಳ’ ಎಂಬ ಬಾಲಿವುಡ್ ಸಿನಿಮಾ ನೋಡಿದ ನಂತರ ಹಣದ ದುರಾಸೆಯಿಂದ ಹುಡುಗಿ ಇಷ್ಟೆಲ್ಲ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಆದ್ರೆ ಕ್ಯಾಮೆರಾದಲ್ಲಿ ಯಾವುದೇ ಫೋಟೋ, ವಿಡಿಯೋಗಳು ಸೆರೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.