ಸುಂದರಿಯ ಬಾಳಲ್ಲಿ ವಿಧಿಯ ಘೋರ ಆಟ! – ತನ್ನ ಸಾವನ್ನು ತಾನೇ ಘೋಷಿಸಿದ ಮಹಿಳೆ!

ಸುಂದರಿಯ ಬಾಳಲ್ಲಿ ವಿಧಿಯ ಘೋರ ಆಟ! – ತನ್ನ ಸಾವನ್ನು ತಾನೇ ಘೋಷಿಸಿದ ಮಹಿಳೆ!

ಅದೊಂದು ಸುಂದರ ಕುಟುಂಬ.. ಪ್ರೀತಿಸುವ ಗಂಡ, ಮುದ್ದಾದ ಮಕ್ಕಳು. ಕೈತುಂಬಾ ಸಂಪಾದನೆ.. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಆ ವಿಧಿ ಕುಟುಂಬದ ಖುಷಿಯನ್ನೇ ಕಸಿದುಕೊಂಡಿದೆ. ಸುಂದರವಾಗಿ ಬಾಳಿ ಬದುಕಬೇಕಿದ್ದಾಕೆಯ ಬಾಳಲ್ಲಿ ಸಾವಿನ ಅಟ್ಟಹಾಸ ಹತ್ತಿರವಾಗಿದೆ. ಆದರೂ ತನಗೆ ಇಂತಹ ದುರ್ಗತಿ ಬಂತಲ್ಲ ಅಂತಾ ಶಪಿಸದೇ ತನ್ನ ಸಾವನ್ನು ತಾನೇ ಘೋಷಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಬಳ್ಳಾರಿ ಬಿಜೆಪಿ ಸಂಸದರ ಮಗನಿಂದ ಯುವತಿ ಜೊತೆ ಪ್ರೇಮ, ಕಾಮದಾಟ – ಲೈಂಗಿಕವಾಗಿ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಕೇಸ್ ದಾಖಲು

ಹೌದು.. ಅಚ್ಚರಿಯಾದ್ರೂ ಸತ್ಯ. ಕ್ಯಾನ್ಸರ್‌ ಕಾಯಿಲೆ ಅನೇಕರ ಬಾಳನ್ನು ಸರ್ವನಾಶ ಮಾಡಿದೆ. ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ಕ್ಯಾನ್ಸರ್‌ ಕಾಯಿಲೆ ಬಂದ್ರೆ ಅದನ್ನು ತಡೆದುಕೊಳ್ಳುವ ಶಕ್ತಿ ಯಾರಿಗೂ ಇರುವುದಿಲ್ಲ. ಆದ್ರೆ ಈಕೆ ಎಂದೂ ಕೂಡ ತನಗೆ ಇಂಥಾ ಪರಿಸ್ಥಿತಿ ಬಂದುಬಿಡ್ತಲ್ಲಾ ಎಂದು ದೇವರನ್ನು ಶಪಿಸಿಲ್ಲ, ಇರುವಷ್ಟು ದಿನ ಇದ್ದ ಜೀವನವನ್ನು ಖುಷಿಯಿಂದಲೇ ಕಳೆದಿದ್ದಾಳೆ. ತನ್ನ ಸಾವು ಸಮೀಪಿಸುತ್ತಿದ್ದಂತೆ ತನ್ನ ಸಾವಿನ ಸುದ್ದಿಯನ್ನು ತಾನೇ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾಳೆ. ಸದ್ಯ ಈ ಪೋಸ್ಟ್‌ ಭಾರಿ ವೈರಲ್‌ ಆಗಿದೆ.

ಈ ಮಹಿಳೆ ಹೆಸರು ಕೇಸಿ ಮ್ಯಾಕ್​ಇಂಟೈರ್.​ ಆಕೆ ಅಂಡಾಶಯದ ಕ್ಯಾನ್ಸರ್​ಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾಳೆ. ಆಕೆ  ಸಾಯುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾವನ್ನು ಘೋಷಿಸಿ,  ಪ್ರೀತಿಪಾತ್ರರಿಗೆ ಕೊನೆಯ ವಿದಾಯವನ್ನು ಬರೆದಿದ್ದಾಳೆ.

ನೀವು ಈ ಪೋಸ್ಟ್​ ಅನ್ನು ಓದುತ್ತಿದ್ದರೂ, ನಾನು ಈ ಜಗತ್ತಿನಲ್ಲಿ ಇಲ್ಲ ಎಂದರ್ಥ. ನನಗೆ ಅಂಡಾಶಯ ಕ್ಯಾನ್ಸರ್​ ಇತ್ತು. ಅದು ನಾಲ್ಕನೇ ಹಂತವನ್ನು ತಲುಪಿತ್ತು. ಚಿಕಿತ್ಸೆ ಪಡೆದರೂ ವಾಸಿಯಾಗಿಲ್ಲ. ಮತ್ತೆ ಪುನರಾವರ್ತನೆಯಾಗಿದೆ. ಈ ಐದು ತಿಂಗಳು ವರ್ಜೀನಿಯಾ, ರೋಡ್​ ಐಲೆಂಡ್​ ಹಾಗೂ ನ್ಯಾಯಾರ್ಕ್​ನಲ್ಲಿ ನನ್ನ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜತೆ ಕಳೆಯಲು ಅವಕಾಶ ದೊರೆತಿರುವುದಕ್ಕೆ ನಾನು ಧನ್ಯ ಎಂದು ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ.

ಆಸ್ಪತ್ರೆಗೆ ತೆರಳಿ ಯಾರಿಗೂ ತಿಳಿಯದಂತೆ ಬೇರೆಯವರ ವೈದ್ಯಕೀಯ ಸಾಲವನ್ನು ತಾನೇ ಪಾವತಿಸಲು ಚಾರಿಟಿಯನ್ನು ತೆರೆಯುವುದು ಆಕೆಯ ಕನಸಾಗಿತ್ತು. ಆ ಕನಸನ್ನು ಸಾಕಾರಗೊಳಿಸುತ್ತೇನೆ ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.

ಕೇಸಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನಾವು ನಿಮ್ಮನ್ನು ಕಳೆದುಕೊಂಡುಬಿಟ್ಟೆವು, ನೀನೆಲ್ಲೇ ಇದ್ದರೂ ನಮ್ಮೊಂದಿಗೆ ಇದ್ದೀಯ ಎನ್ನುವ ಭಾವನೆ ನಮ್ಮದು ಎಂದು ಪತಿ ಬರೆದುಕೊಂಡಿದ್ದಾರೆ.

Shwetha M