ಮಹಿಳೆಗೆ ಸ್ಮಾರ್ಟ್‌ ಫೋನ್‌ ಗೀಳು! – ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡೇ ಬಿಟ್ಳು!

ಮಹಿಳೆಗೆ ಸ್ಮಾರ್ಟ್‌ ಫೋನ್‌ ಗೀಳು! – ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡೇ ಬಿಟ್ಳು!

ಇದು ಸೋಶಿಯಲ್‌ ಮೀಡಿಯಾ ಜಮಾನ.. ಕೈಯಲ್ಲಿ ಪೋನ್‌ ಇದ್ರೆ ಬೇರೆ ಪರಿಜ್ಞಾನನೇ ಇಲ್ಲ.. ಎಲ್ಲಿದ್ದೇವೆ, ಏನಾಗುತ್ತಿದೆ ಅನ್ನೋ ಅರಿವೆ ಇರುವುದಿಲ್ಲ. ದಿನವಿಡೀ ಸ್ಕ್ರೋಲ್‌ ಮಾಡ್ತಾನೇ ಇರ್ತಾರೆ. ಹೀಗೆ ಪೋನ್‌ನಲ್ಲಿ ಮುಳುಗಿದ್ದವರು ಅನೇಕ ಬಾರಿ ಆಪತ್ತಿಗೆ ಸಿಲುಕಿದ್ದೂ ಇದೆ. ಇಲ್ಲೊಬ್ಬಳು ಮಹಿಳೆ ಫೋನ್ ಗುಂಗಿನಲ್ಲಿ ಆಹಾರದ ಬದಲು ಕೈಯಲ್ಲಿದ್ದ ಐಪ್ಯಾಡ್‌ ಅನ್ನೇ ಓವನ್‌ನಲ್ಲಿ ಇಟ್ಟಿದ್ದಾಳೆ.

ಹೌದು, ಘಟನೆ ಬಗ್ಗೆ ಸೋಶಿಯಲ್ ಮೀಡಿಯಾ ರೆಡಿಟ್‌‌ನಲ್ಲಿ ಬರೆಯಲಾಗಿದೆ. ಮಹಿಳೆಯೊಬ್ಬರು ತಮ್ಮ ಆ್ಯಪಲ್ ಐಪ್ಯಾಡ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಇದೇ ವಳೆ ಮಕ್ಕಳು ಆಹಾರ ಕೇಳಿದ್ದಾರೆ. ಆದ ಆ ಮಹಿಳೆ ರೆಫ್ರಿಜರೇಟರ್‌ನಿಂದ ಆಹಾರ ತೆಗೆದು ಓವನ್‌ನಲ್ಲಿ ಇಡಲು ಮುಂದಾಗಿದ್ದಾಳೆ. ಆದರೆ ಐಪ್ಯಾಡ್ ನೋಡತ್ತಲೆ ಫ್ರೀಡ್ಜ್ ತೆರೆದ ಮಹಿಳೆ, ಆಹಾರ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಓವನ್ ಪಕ್ಕದಲ್ಲೇ ಇಟ್ಟು ಓವನ್ ಆನ್ ಮಾಡಿದ್ದಾರೆ. ಆಹಾರವನ್ನು ಓವನ್ ಒಳಗಿಡುವ ಬದಲು ಕೈಯಲ್ಲಿದ್ದ ಐಪ್ಯಾಡ್ ಒಳಗಿಟ್ಟು ಟೆಂಪರೇಚರ್ ಸೆಟ್ ಮಾಡಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಶೈನಿಂಗ್ –ಇಂಗ್ಲೆಂಡ್‌ನ ಸೆಂಚೂರಿ ಸ್ಟಾರ್ ಜೋ ರೂಟ್ ಬೊಂಬಾಟ್ ಬ್ಯಾಟಿಂಗ್

ಕೆಲ ಹೊತ್ತಿನ ಬಳಿಕ ಓವನ್ ತೆರೆದಾಗ ಗರಿಗರಿಯಾದ ಐಪ್ಯಾಡ್ ಕ್ರಂಬಲ್ ರೆಡಿಯಾಗಿದೆ. ಓವನ್ ತೆರೆಯುತ್ತಿದ್ದಂತೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಅಷ್ಟರಲ್ಲೇ ಐಪ್ಯಾಡ್ ಸರಿಮಾಡಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಹೀಗಾಗಿ ಬಿಸಿ ಮಾಡಿಕೊಡಲು ಅಡುಗೆ ಕೋಣೆಗೆ ತೆರಳಿದ ಮಹಿಳೆ, ಆಹಾರವನ್ನು ಓವನ್‌ನಲ್ಲಿಡುವ ಬದಲು ಕೈಯಲ್ಲಿದ್ದ ಐಪ್ಯಾಡ್‌ನ್ನು ಓವನ್‌ನಲ್ಲಿಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ನೋಡಿದಾ ಐಪ್ಯಾಡ್ ರೋಸ್ಟ್ ಆಗಿದೆ. ಸರಿಮಾಡಲು ಸಾಧ್ಯವಿಲ್ಲದಷ್ಟು ರೋಸ್ಟ್ ಆಗಿದೆ.

ರೆಡಿಟ್‌‌ನಲ್ಲಿ ಮಹಿಳೆಯ ಮಗ ಈ ಬಗ್ಗೆ ಬರೆದಿದ್ದಾನೆ. ನನ್ನ ತಾಯಿ ಅಚಾತುರ್ಯದಿಂದ ಐಪ್ಯಾಡ್ ಬೇಯಿಸಿದ್ದಾಳೆ ಎಂದು ಫೋಟೋ ಹಂಚಿಕೊಂಡಿದ್ದಾನೆ. ಇದೀಗ ಈ ಪೋಸ್ಟ್‌ ಭಾರಿ ವೈರಲ್ ಆಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರೆ ಕತೆ ಬೇರೆ ಆಗುತ್ತಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಆ್ಯಪಲ್ ಕ್ರಂಬಲ್ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಐಪ್ಯಾಡ್ ಇನ್ನು ಬಳಸಲು ಸಾಧ್ಯವಿಲ್ಲ. ಐಪ್ಯಾಡ್ ಮಾತ್ರವಲ್ಲ, ಓವನ್ ಕೂಡ ಬಳಸಬೇಡಿ. ಕೆಮಿಕಲ್‌ನಿಂದ ಓವನ್ ಬಳಸು ಸಾಧ್ಯವಿಲ್ಲ. ಫೋನ್‌, ಪ್ಲಾಸ್ಟಿಕ್ ರಾಸಾಯನಿಕಗಳು ಓವನ್ ಒಳಗೆ ಸೇರಲಿದೆ. ನೀವೆಷ್ಟೆ ತೊಳೆದರೂ ಹೋಗುವುದಿಲ್ಲ. ಓವನ್‌ನಲ್ಲಿ ಆಹಾರ ಇಟ್ಟು ಬಿಸಿ ಮಾಡಿದಾಗ ಈ ರಾಸಾಯನಿಕಗಳು ಆಹಾರದಲ್ಲಿ ಸೇರಿಕೊಳ್ಳಲಿದೆ. ಹೀಗಾಗಿ ಐಪ್ಯಾಡ್ ಜೊತೆಗೆ ಓವನ್ ಕೂಡ ಬಿಸಾಡಿ ಎಂದು ಮತ್ತೆ ಕೆಲವರು ಸಲಹೆ ನೀಡಿದ್ದಾರೆ.

Shwetha M