ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾದ ಇಬ್ಬರು ಮಾಜಿ ಶಾಸಕರು – ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಬಿಗ್ ಶಾಕ್

ಚುನಾವಣೆಗೂ ಮುನ್ನ ಪಕ್ಷಾಂತರ ಪರ್ವ ನಡೆಯೋದು ಸಾಮಾನ್ಯ. ಆದ್ರೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷಾಂತರ ಪರ್ವ ಜೋರಾಗಿದೆ. ಬೆಂಗಳೂರಲ್ಲಿ ಡಿಕೆಶಿ ಭರ್ಜರಿ ಆಪರೇಷನ್ ಮಾಡಿದ್ದಾರೆ. ಈಗಾಗ್ಲೇ ಪದ್ಮನಾಭನಗರ ಹಾಗೂ ಯಶವಂತಪುರದಲ್ಲಿ ಬಿಜೆಪಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ ಗೊಂಡಿದ್ದಾರೆ. ಇದೀಗ ಬಿಜೆಪಿ ಜೆಡಿಎಸ್ ಮೈತ್ರಿ ಆದ್ಮೇಲೆ ಮತ್ತಷ್ಟು ಜನ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ಇಬ್ಬರು ಮಾಜಿ ಶಾಸಕರೂ ಕೂಡ ಇದ್ದಾರೆ.
ಇದನ್ನೂ ಓದಿ : ಪಂಜಾಬ್ ನಲ್ಲಿ ಆಪ್ ಸರ್ಕಾರದಿಂದ ಕಾಂಗ್ರೆಸ್ ಶಾಸಕನ ಬಂಧನ – ಅನ್ಯಾಯ ಸಹಿಸಲ್ಲ ಎಂದ ಖರ್ಗೆ.. ಮೈತ್ರಿಗೆ ಹೊಡೆತ?
ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ರಾಜಕೀಯ ಪಲ್ಲಟಗಳು, ಪಕ್ಷಾಂತರಗಳು ಪದೇ ಪದೇ ನಡೆಯುತ್ತಿದ್ದು, ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಉಂಟಾಗಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ದಶಕಗಳ ಕಾಲ ಇದ್ದು ಶಾಸಕರಾಗಿ ಸೇವೆ ಸಲ್ಲಿಸಿರುವ ಪ್ರಭಾವಿ ಮುಖಂಡ, ಮಾಜಿ ಶಾಸಕರೊಬ್ಬರು ಕಮಲ ಪಾಳಯಕ್ಕೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ.
ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದು, ಈ ಬಗ್ಗೆ ಶಿರಹಟ್ಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಅಕ್ಟೋಬರ್ 10 ರಂದು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಶಿರಹಟ್ಟಿಯ ಮೀಸಲು ಕ್ಷೇತ್ರದ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಖಚಿತಪಡಿಸಿದ್ದು, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆ ಮೂಹರ್ತ ಫಿಕ್ಸ್ ಆಗಿದೆ. ಸಾಕಷ್ಟು ಮಾಜಿ ಶಾಸಕರು ಕಾಂಗ್ರೆಸ್‌ಗೆ ಸೇರ್ತಾರೆ ಎಂದು ಹೇಳಿದರು.
ಅಲ್ಲದೇ, ಜಗದೀಶ್ ಶೆಟ್ಟರ್ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಜಿಪಂ ಸದಸ್ಯನಾದೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಟ್ರು. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಎರಡು ಬಾರಿ ಶಾಸಕನಾಗಿ ಆಯ್ಕೆಯಾದೆ. ಶಿರಹಟ್ಟಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ರಾಮಪ್ಪ ಲಮಾಣಿ ಹೇಳಿದ್ದಾರೆ. 2023 ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡ್ತಾರೆಂದು ನಂಬಿಕೆ ಇತ್ತು. ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನ ಮಾಡಿಸಿದ್ರು. ಟಿಕೆಟ್ ಕೊಡುತ್ತೇನೆಂದು ಹಣ ಖರ್ಚು ಮಾಡಿಸಿದ್ರು. ನಾಮಿನೇಷನ್ ಕೊಡುವ ದಿನದವರಿಗೆ ನಿಂಗ ಟಿಕೆಟ್ ಕೊಡ್ತೇವೆ ಅಂದ್ರು. ಕೊನೆಗೆ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡಿದ್ರು ಎಂದು ಹೇಳಿದರು. ಹೀಗಾಗಿ ನನಗೆ ಮನಸ್ಸಿಗೆ ಬೇಜಾರ್ ಆಗಿದೆ. ಬಿಜೆಪಿ ಪಕ್ಷದಲ್ಲಿ ಇದ್ರೆ ಪ್ರಯೋಜನವಿಲ್ಲ ಸುಮ್ನೆ ಆಗಿದೆ. ಸಿಸಿ ಪಾಟೀಲ್ ಮನವೊಲಿಸಿದ್ರು. ವಿಧಾನ ಸಭೆಯಲ್ಲಿ ಡಾ. ಚಂದ್ರು ಲಮಾಣಿ ಎಮ್ಎಲ್ಎ ಆಗಿ ನಮ್ಮ ಕಾರ್ಯಕರ್ತರಿಗೆ ನೀವು ರಾಮಪ್ಪ ಲಮಾಣಿ ಅಭಿಮಾನಿಗಳು ನಮ್ಮ ಹತ್ತಿರ ಬರಬೇಡಿ ಅಂದ್ರು ಎಂದು ಆರೋಪಿಸಿದ್ದಾರೆ. ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ಆಗ ಅವರಲ್ಲಿ ಬಿಜೆಪಿಯಲ್ಲಿ ಬೇಜಾರ್ ಆಗಿದೆ. ನಾನು ಕಾಂಗ್ರೆಸ್ ಸೇರ್ಪಡೆ ಆಗುತ್ತೇನೆ ಅಂದೆ ಎಂದಾಗ ಒಪ್ಪಿಕೊಂಡರು ಎಂದು ಮಾಜಿ ಶಾಸಕ ರಾಮಪ್ಪ ಲಮಾಣಿ ಹೇಳಿದ್ಧಾರೆ.