ಪ್ರಧಾನಿ ಮೋದಿ ಬಳಿ ಅಹಂ ಬಗ್ಗೆ ಮಾತನಾಡಿದ್ಯಾಕೆ ಕೊಹ್ಲಿ? – ಚಹಾಲ್ ಕಾಲೆಳೆದ ಮೋದಿ ಮಾತಿಗೆ ನಗೆಯಲ್ಲಿ ತೇಲಿದ ಆಟಗಾರರು

ಪ್ರಧಾನಿ ಮೋದಿ ಬಳಿ ಅಹಂ ಬಗ್ಗೆ ಮಾತನಾಡಿದ್ಯಾಕೆ ಕೊಹ್ಲಿ? – ಚಹಾಲ್ ಕಾಲೆಳೆದ ಮೋದಿ ಮಾತಿಗೆ ನಗೆಯಲ್ಲಿ ತೇಲಿದ ಆಟಗಾರರು

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಮತ್ತೊಮ್ಮೆ ಅಹಂ ಬಗ್ಗೆ ಮಾತಾಡಿದ್ದಾರೆ. ಅದೂ ಕೂಡಾ ದೇಶದ ಪ್ರಧಾನಿ ಜೊತೆ. ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ವೇಳೆ ಕೊಹ್ಲಿ ಅವರ ಪ್ರದರ್ಶನದ ಏರಿಳಿತದ ಬಗ್ಗೆ ಪ್ರಧಾನಿ ಮೋದಿ ಪ್ರಶ್ನೆ ಕೇಳಿದ್ರು. ಇದಕ್ಕೆ ಕೊಹ್ಲಿ ಕೊಟ್ಟ ರಿಯಾಕ್ಷನ್​ಅಚ್ಚರಿ ಹುಟ್ಟಿಸಿದೆ. ನಾನು ಏನು ಮಾಡಬೇಕು ಅಂದುಕೊಂಡ್ರೂ ಅದು ಆಗುತ್ತಲೇ ಇರಲಿಲ್ಲ. ಆಗ ನನಗೆ ಅನಿಸಿದ್ದು. ನಾನು ಮಾಡಿಬಿಡ್ತೀನಿ ಅನ್ನೋ ಭಾವನೆ ಇದ್ರೆ ಅಹಂಕಾರ ಬಂದು ಬಿಡುತ್ತೆ. ನಮಗೆ ಅಹಂಕಾರ ಇದ್ರೆ, ನಮ್ಮಿಂದ ಆಟ ಕೂಡ ದೂರ ಆಗಿಬಿಡುತ್ತೆ. ಹಾಗಾಗಿ ನಾನು ಅಹಂಕಾರ ಬಿಡಬೇಕಾಯ್ತು. ತಂಡಕ್ಕಾಗಿ ನನ್ನ ಅಹಂಕಾರವನ್ನು ಹಿಂದೆ ಇಡಬೇಕಾಯ್ತು ಎಂದು ಕೊಹ್ಲಿ ಹೇಳಿದ್ದಾರೆ.

ಯಜುವೇಂದ್ರ ಚಹಾಲ್ ಇದ್ದಲ್ಲಿ ನಗು ಇರುತ್ತದೆ. ಸದಾ ಒಂದಲ್ಲಾ ಒಂದು ರೀತಿಯಲ್ಲಿ ಕಾಮಿಡಿಯೋ, ಇಲ್ಲ ಆ ಕ್ಷಣಕ್ಕೆ ತಕ್ಕಂತೆ ಸೀರಿಯಸ್ ಸಂದರ್ಭದಲ್ಲೂ ಟೆನ್ಷನ್ ರಿಲೀಫ್ ಮಾಡೋ ಸಾಮಾರ್ಥ್ಯ ಇರೋ ಆಟಗಾರ ಅಂದ್ರೆ ಚಹಾಲ್. ಆದ್ರೆ, ಯಾಕೋ ಈ ಬಾರಿ ಐಪಿಎಲ್‌ನಲ್ಲಿ ಮಿಂಚಿದ ಈ ಹೀರೋ ಟಿ20 ವಿಶ್ವಕಪ್‌ನಲ್ಲಿ ಮಾತ್ರ ಬೆಂಚ್ ಕಾಯೋದು ಅನಿವಾರ್ಯವಾಗಿತ್ತೋ. ಆ ನೋವಲ್ಲಿಯೋ, ಅಥವಾ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಬೇಜಾರೋ, ಪ್ರಧಾನಿ ಮೋದಿ ಜೊತೆ ಮಾತುಕತೆ ವೇಳೆ ಚಹಾಲ್ ಗಂಭೀರವಾಗಿಯೇ ಕುಳಿತುಕೊಂಡಿದ್ರು. ಇವರನ್ನು ಗಮನಿಸಿದ ಮೋದಿ ಯಾಕೆ ಚಹಾಲ್ ಇಷ್ಟೊಂದು ಗಂಭೀರತೆಯಿಂದ ಕೂತಿದ್ದೀರಾ ಎಂದು ಕಿಚಾಯಿಸದರು. ಆಗ ಟೀಮ್ ಇಂಡಿಯಾದ ಪ್ರತಿಯೊಬ್ಬರು ಆಟಗಾರರು ನಗೆಗಡಲಲ್ಲಿ ತೇಲಿದ್ರು.

suddiyaana