ಗುರುವಿನ ಗಾತ್ರದ ಗ್ರಹವನ್ನು ನುಂಗಿದ ನಕ್ಷತ್ರ! – ಭೂಮಿಗೆ ಎದುರಾಗಿದ್ಯಾ ಕಂಟಕ?

ಗುರುವಿನ ಗಾತ್ರದ ಗ್ರಹವನ್ನು ನುಂಗಿದ ನಕ್ಷತ್ರ! – ಭೂಮಿಗೆ ಎದುರಾಗಿದ್ಯಾ ಕಂಟಕ?

ಬಾಹ್ಯಾಕಾಶ ಸದಾ ಕೌತುಕದ ವಿಚಾರ. ಇಲ್ಲಿ ಹಿಂದೆಂದೂ ಕಂಡಿರದ, ಕೇಳಿರದಂತಹ ವಿಸ್ಮಯ, ವಿದ್ಯಾಮಾನಗಳು ನಡೆಯುತ್ತಲೇ ಇರುತ್ತವೆ. ಕೆಲ ತಿಂಗಳುಗಳ ಹಿಂದೆ ನಕ್ಷತ್ರಗಳ ಹುಟ್ಟು ಮತ್ತು ಸಾವಿನ ಬಗೆಗಿನ ಕುತೂಹಲಕಾರಿ ವಿಚಾರಗಳನ್ನು ವಿಜ್ಞಾನಿಗಳು ಹೇಳಿದ್ದರು. ಇದೀಗ ಮತ್ತೊಂದು ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಅದೇನೆಂದರೆ,  “ನಕ್ಷತ್ರವೊಂದು ಗ್ರಹವನ್ನು ನುಂಗಿರುವುದು”!

ಇದೇ ಮೊದಲ ಬಾರಿಗೆ ಸೂರ್ಯನಷ್ಟೇ ಗಾತ್ರವಿರುವ ಅಳಿವಿನಂಚಿನಲ್ಲಿರುವ ನಕ್ಷತ್ರವೊಂದು ಗುರು ಗ್ರಹದಷ್ಟು ದೊಡ್ಡದಾದ ಗ್ರಹವೊಂದನ್ನು ಕಬಳಿಸಿಬಿಟ್ಟಿದೆ. ನಕ್ಷತ್ರ ಗ್ರಹವನ್ನು ನುಂಗುತ್ತಿರುವ ದೃಶ್ಯವನ್ನು ನೋಡಿ ವಿಜ್ಞಾನಿಗಳು ಬೆರಗಾಗಿದ್ದಾರೆ. ಅನಾಮತ್ತಾಗಿ ಗ್ರಹವು ನಕ್ಷತ್ರಕ್ಕೆ ಬಲಿಯಾಗುತ್ತಿರುವ ದೃಶ್ಯವನ್ನು ಮಸ್ಸಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ), ಹಾರ್ವರ್ಡ್‌ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಚಂದ್ರನತ್ತ ಪ್ರಯಾಣಕ್ಕೆ ಸಜ್ಜಾದ ನಾಲ್ವರು ಗಗನಯಾನಿಗಳು – ಯಾರ್ಯಾರು & ಹೇಗಿದೆ ಸಿದ್ಧತೆ?

ಆರಂಭದಲ್ಲಿ ಖಗೋಳ ವಿಜ್ಞಾನಿಗಳಿಗೆ ಈ ವಿದ್ಯಮಾನವು ಬಿಳಿ-ಹಳದಿ ಬಣ್ಣದ ಬೆಳಕಿನ ಸ್ಫೋಟದಂತೆ ಕಂಡಿತ್ತು. ಇದು ಸಂಭವಿಸಿದ್ದು ಸುಮಾರು 12 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಅಕ್ವಿಲಾ ತಾರಾಪುಂಜದಲ್ಲಿ. 2020ರಲ್ಲೇ ಈ ಘಟನೆ ನಡೆದಿದ್ದರೂ, ವಾಸ್ತವದಲ್ಲಿ ಅಲ್ಲಿ ಆಗಿದ್ದೇನು ಎಂಬುದನ್ನು ತಿಳಿಯಲು ಬಹಳ ಸಮಯ ತಗುಲಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನು ನಕ್ಷತ್ರಗಳು ಇತರ ಗ್ರಹಗಳನ್ನು ಕಬಳಿಸುತ್ತಿದೆ ಎಂದಾದರೆ, ಮುಂದೊಂದು ದಿನ ಭೂಮಿಯನ್ನು ಕೂಡ ನುಂಗುವ ಸಾಧ್ಯತೆ ಇದೆಯಾ ಎಂಬ ಅನುಮಾನ ವಿಜ್ಞಾನಿಗಳನ್ನು ಕಾಡತೊಡಗಿದೆ. ಸೂರ್ಯನು ಕಾಲಕ್ರಮೇಣ ಉಬ್ಬುತ್ತಾ ಸಾಗಿ, ತನ್ನಲ್ಲಿನ ಇಂಧನವೆಲ್ಲ ಖಾಲಿಯಾದಾಗ, ತನ್ನ ಸುತ್ತಮುತ್ತಲಿರುವ ಗ್ರಹಗಳನ್ನು ನುಂಗಿಹಾಕಬಹುದು. ಆ ರೀತಿ ಸೂರ್ಯನ ಕಬಳಿಕೆಗೆ ಮುಂದೊಂದು ದಿನ ಭೂಮಿಯೂ ತುತ್ತಾಗುವ ಅಪಾಯವಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

suddiyaana