ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಎಂಟು  ಮಂದಿ ಸಾವು

ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ – ಎಂಟು  ಮಂದಿ ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಬೀಸುತ್ತಿರುವ ಮಾರಣಾಂತಿಕ ಶೀತಗಾಳಿ  ‘ಬಾಂಬ್ ಸೈಕ್ಲೋನ್’ನಿಂದ ಎಂಟು ಮಂದಿ ಮೃತಪಟ್ಟಿದ್ದಾರೆ. ಶೀತ ಗಾಳಿಯ ಪರಿಣಾಮ ಸುಮಾರು 15 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಚಾರ ಅಸ್ಥವ್ಯಸ್ತಗೊಂಡಿದೆ.

ಭಾರೀ ಹಿಮಪಾತ, ಮಾರಣಾಂತಿಕ ಬಿರುಗಾಳಿಯ ಪರಿಣಾಮ ವಾಹನ ಸಂಚಾರ,  ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೆಡೆ ಉಷ್ಣಾಂಶ ಪ್ರಮಾಣವು – 48 ಡಿಗ್ರಿ ಸೆಲ್ಷಿಯಸ್​ನಷ್ಟು ಕುಸಿದಿದ್ದು, ಕುದಿಯುತ್ತಿರುವ ನೀರು ಸಹ ಒಲೆಯಿಂದ ಕೆಳಗೆ ಇಳಿಸಿದ ತಕ್ಷಣ ಮಂಜುಗಡ್ಡೆಯಾಗುತ್ತಿತ್ತು. ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ಇದೆಯಾದರೂ, ದಕ್ಷಿಣ ಭಾಗದಲ್ಲಿ ಪರಿಸ್ಥಿತಿ ವಿಷಮಿಸಿದೆ. ಅಮೆರಿಕದ ಸುಮಾರು 24 ಕೋಟಿ ಜನರು ಅಂದರೆ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ಇದೀಗ ಶೀತಗಾಳಿಯಿಂದ ಸಂತ್ರಸ್ತರಾಗಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಗೆಳತಿಗೆ ಪ್ರಭಾವಿ ರಾಜಕಾರಣಿಯಿಂದ 44 ಬಾರಿ ಕರೆ? – ಬಾಲಿವುಡ್‌ ನಟನ ಸಾವಿಗೆ ರಾಜಕೀಯದ ನಂಟು?

ಒಮ್ಮೆಲೆ ಹಿಮ ಸುರಿದ ಕಾರಣ ಜನರು ಶೀತಮಾರುತಗಳಿಗೆ ತಕ್ಕಷ್ಟು ಸಿದ್ಧತೆ ಮಾಡಿಕೊಂಡಿರಲಿಲ್ಲ. ಬಿರುಗಾಳಿಯಿಂದಾಗಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಮನೆ, ಹೊಟೆಲ್ ಮತ್ತು ಸಮುದಾಯ ಕೇಂದ್ರಗಳಲ್ಲಿರುವ ಹೀಟರ್​ಗಳೂ ಕೆಲಸ ಮಾಡುವುದು ನಿಲ್ಲಿಸಿದ್ದು, ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.

ಹಠಾತ್ ಬಿರುಗಾಳಿಯಿಂದಾಗಿ ದೇಶದ ವಿವಿಧೆಡೆ 4,600 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣಕ್ಕೆ ಇವರು ವಿಮಾನ ನಿಲ್ದಾಣಗಳಿಂದ ಹೊರಡುವುದು ಕಷ್ಟ ಎಂದು ಹೇಳಲಾಗಿದೆ. ಈ ಶೀತ ಬಿರುಗಾಳಿಯು ಸುಮಾರು 2,000 ಮೈಲಿಯಷ್ಟು (3,218 ಕಿಮೀ) ವ್ಯಾಪ್ತಿ ಹೊಂದಿತ್ತು. ಮುಂದಿನ ಸೂಚನೆಯವರೆಗೆ ಕಾರುಗಳನ್ನು ರಸ್ತೆಗೆ ಇಳಿಸಬಾರದು. ದೇಶದ ಮಧ್ಯ ಮತ್ತು ಪೂರ್ವಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮಿಸಬಹುದು ಎಂದು ಅಮೆರಿಕ ಸರ್ಕಾರವು ಸಾರ್ವಜನಿಕರಿಗೆ ಸೂಚನೆ ನೀಡಿದೆ.

suddiyaana