ಚಳಿಗಾಲದಲ್ಲಿ ಮುಖದಲ್ಲಿ ಬಿರುಕು ಬೀಳಲು, ಮುಖ ಕೆಂಪಾಗಲು ಇದೇ ಕಾರಣ!

ಚಳಿಗಾಲದಲ್ಲಿ ಮುಖದಲ್ಲಿ ಬಿರುಕು ಬೀಳಲು, ಮುಖ ಕೆಂಪಾಗಲು ಇದೇ ಕಾರಣ!

ಈಗಾಗ್ಲೆ ಚಳಿಗಾಲ ಆರಂಭವಾಗಿದೆ. ಚಳಿಗಾಲದಲ್ಲಿ ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ ಬಿರುಕು ಬಿಡುವುದು ಇತ್ಯಾದಿಗಳೆಲ್ಲಾ ಸಾಮಾನ್ಯ. ಈ ಸಮಯದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಚರ್ಮವು ತುಂಬಾ ಒಣಗುತ್ತದೆ. ಇದಕ್ಕೇನು ಕಾರಣ ಅನ್ನೋ ಮಾಹಿತಿ ಇಲ್ಲಿದೆ..

ಚಳಿಯ ವಾತಾವರಣದಲ್ಲಿ ಅನೇಕರಿಗೆ ಕಾಡೋ ಸಮಸ್ಯೆಯೆಂದರೆ ಕೆನ್ನೆ ಭಾಗದಲ್ಲಿ ಕೆಂಪಾಗುವುದು, ಕೆನ್ನೆಯ ಸಿಪ್ಪೆ ಏಳುವುದು. ಯಾಕೆ ಹೀಗಾಗುತ್ತೆ ಅಂತಾ ಅನೇಕ ಪಶ್ನೆಯಾಗಿದೆ. ಹವಾಮಾನದಲ್ಲಿ ಬದಲಾವಣೆಯಾದಾಗ ನಮ್ಮ ದೇಹ ಒಗ್ಗಿಕೊಳ್ಳುತ್ತಾ ಸಾಗುತ್ತೆ. ಇದ್ರಿಂದಾಗಿ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತೆ. ಚಳಿಗಾಲದಲ್ಲಿ ದೇಹದಲ್ಲಿ ರಕ್ತ ಪರಿಚಲನೆ ಸ್ವಲ್ಪ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚರ್ಮದೊಳಗೆ ಇರುವ ರಕ್ತನಾಳಗಳು ರಕ್ತ ಪೂರೈಕೆಗಾಗಿ ಅಗಲವಾಗುತ್ತವೆ. ಇದರಿಂದ ಮುಖದಲ್ಲಿ ಅಗತ್ಯ ಪ್ರಮಾಣದ ರಕ್ತ ಪರಿಚಲನೆಯಾಗುತ್ತದೆ. ಇದು ತುಂಬಾ ತಂಪಾಗಿರುವಾಗ, ನಮ್ಮ ದೇಹವು ಚರ್ಮವನ್ನು ಬೆಚ್ಚಗಾಗಲು ಪ್ರಯತ್ನಿಸುತ್ತದೆ. ಇದರಿಂದ ರಕ್ತಸಂಚಾರವೂ ಹೆಚ್ಚುತ್ತದೆ ಮತ್ತು ಇದರಿಂದ ಕೆನ್ನೆ ಕೆಂಪಾಗುತ್ತದೆ. ಇದಲ್ಲದೆ, ತಂಪಾದ ಗಾಳಿ, ತೇವಾಂಶದ ಕೊರತೆ ಮತ್ತು ಪೋಷಣೆಯ ಕೊರತೆಯಿಂದಾಗಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಚರ್ಮದ ಆರೈಕೆ ಹೀಗಿದ್ದರೆ ಉತ್ತಮ..

ಚಳಿಗಾಲದಲ್ಲಿ ಬೇಸಿಗೆಗೆ ಹೋಲಿಸಿದರೆ ಕುಡಿಯುವ ನೀರು ಸ್ವಲ್ಪ ಕಡಿಮೆಯಾಗುತ್ತದೆ. ಇದರಿಂದಾಗಿ ಚರ್ಮವು ಹೈಡ್ರೀಕರಿಸುವುದಿಲ್ಲ. ಜಲಸಂಚಯನದ ಕೊರತೆಯಿಂದಾಗಿ ಚರ್ಮವು ಬಿರುಕುಗೊಳ್ಳಲು ಪ್ರಾರಂಭಿಸುತ್ತದೆ. ಹೆಚ್ಚಾಗಿ ಡ್ರೈ ಸ್ಕಿನ್ ಇರುವವರು ಈ ಸಮಸ್ಯೆಯಿಂದ ಬಳಲುತ್ತಾರೆ. ಇಂತವರು ಪದೇ ಪದೆ ನೀರು ಕುಡಿಯುತ್ತಾ ಇರಬೇಕು. ಬಾಡಿ ಲೋಷನ್, ಕ್ರೀಮ್ ಮುಂತಾದವುಳನ್ನು ಆಗಾಗ್ ಹಚ್ಚುತ್ತಾ ಇರಬೇಕು. ಅಷ್ಟೇ ಅಲ್ಲದೇ ಆರೋಗ್ಯ ಆಹಾರಗಳನ್ನು ಸೇವಿಸ್ತಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು.

Shwetha M