ಚಳಿಗಾಲ ಆರಂಭದಲ್ಲೇ  ಮೂಳೆ ನಡುಗಿಸುತ್ತಿದೆ ಚಳಿ – ಎಲ್ಲೆಲ್ಲೂ ಮಂಜು, ಈ ರಾಜ್ಯದಲ್ಲಿ 6 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ

ಚಳಿಗಾಲ ಆರಂಭದಲ್ಲೇ  ಮೂಳೆ ನಡುಗಿಸುತ್ತಿದೆ ಚಳಿ – ಎಲ್ಲೆಲ್ಲೂ ಮಂಜು, ಈ ರಾಜ್ಯದಲ್ಲಿ 6 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ

ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ದೇಶದ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದೆ. ದಿನವಿಡೀ ಚಳಿಯ ಅನುಭವ ಹೆಚ್ಚಾಗಿದೆ. ಹಿಂದೆಂದೂ ಕಂಡು ಕೇಳರಿಯದ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಜನರು ಮನೆಯಿಂದಲೇ ಹೊರಬಾರದಂತಾಗಿದೆ. ಜನ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುವಂತಾಗಿದೆ. ಇದೀಗ ಉತ್ತರ ಭಾರತದಲ್ಲಿ ಚಳಿ ತೀವ್ರಗೊಂಡಿದ್ದು, ಝಾರ್ಖಂಡ್‌ನ‌ಲ್ಲಿ 6 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.

ಹೌದು,  ರಾಷ್ಟ್ರ ರಾಜಧಾನಿ ದಿಲ್ಲಿ, ಪಂಜಾಬ್‌, ಹರಿಯಾಣ ಸೇರಿ ಉತ್ತರ ಭಾರತದಲ್ಲಿ ಚಳಿಗಾಳಿ ತೀವ್ರಗೊಂಡಿದ್ದು, ದಟ್ಟ ಮಂಜು ಆವರಿಸುತ್ತಿದೆ. ಮುಂದಿನ 3 ದಿನಗಳಲ್ಲಿ ಪಂಜಾಬ್‌, ಹರಿಯಾಣ, ಅಸ್ಸಾಂ, ಮೇಘಾಲಯ, ನಾಗಾ ಲ್ಯಾಂಡ್‌, ಮಿಜೋರಾಂ, ಮಣಿಪುರ ಮತ್ತು ತ್ರಿಪುರಾದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಪರೀತ ಚಳಿಯ ಕಾರಣ ಡಿ. 26ರಿಂದ 31ರ ವರೆಗೆ ಝಾರ್ಖಂಡ್‌ನ‌ ಎಲ್ಲ ಸರಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಕಾಫಿನಾಡಿನಲ್ಲಿ ಪ್ರವಾಸಿತಾಣಗಳಿಗೆ 6 ದಿನ ನಿರ್ಬಂಧ – 3 ದಿನ ಮದ್ಯ ಮಾರಾಟ ನಿಷೇಧ!

ಜಮ್ಮು – ಕಾಶ್ಮೀರದಲ್ಲಿ ತೀವ್ರ ಚಳಿಯ ಅವಧಿ “ಚಿಲ್ಲಾ-ಇ-ಕಲನ್‌’ ಗುರುವಾರ ದಿಂದ ಆರಂಭವಾಗಿದೆ. ಈ ಸಮಯದಲ್ಲಿ ಕಾಶ್ಮೀರದ ಹಲವು ಭಾಗಗಳು ಚಳಿಯಿಂದ ತತ್ತರಿಸಲಿದ್ದು, ನೀರು ಮಂಜುಗಡ್ಡೆಯಾಗಲಿದೆ. ಜ. 31 ರಂದು “ಚಿಲ್ಲಾ – ಇ – ಕಲನ್‌’ ಮುಗಿಯಲಿದೆ.  ಇದೇ ವೇಳೆ ಮಂಗಳವಾರ ರಾತ್ರಿ ಶ್ರೀನಗರದಲ್ಲಿ -4.3 ಡಿ.ಸೆ., ಪಹಲ್ಗಾಮ್‌ನಲ್ಲಿ -5.8 ಡಿ.ಸೆ., ಗುಲ್ಮಾರ್ಗ್‌ ನಲ್ಲಿ -3.0 ಡಿ.ಸೆ. ಮತ್ತು ಕುಪ್ವಾರಾದಲ್ಲಿ -4.0 ಡಿ.ಸೆ. ದಾಖಲಾಗಿದೆ. ದಿಲ್ಲಿಯಲ್ಲಿ 6 ಡಿ.ಸೆ. ದಾಖಲಾಗಿದೆ.

ಇನ್ನು ಕರ್ನಾಟಕದಲ್ಲೂ ಕಳೆದ ಒಂದು ವಾರದಿಂದ ಚಳಿ ತೀವ್ರಗೊಂಡಿದೆ. ಮೈಕೊರೆಯುವ ಚಳಿಯಿದ್ದು, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸದಾಕಾಲ ಬಿಸಿಲಿನ ಕಾವು ನೋಡುತ್ತಿದ್ದ ಬೀದರ್‌ ಜಿಲ್ಲೆಯ ಜನರು ಮೈಕೊರೆಯುವ ಥಂಡಿಗೆ ಥಂಢಾ ಹೊಡೆದಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಜನರು ಮನೆಯಿಂದಲೇ ಹೊರಬಾರದಂತಾಗಿದೆ. ಜನ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ.  ಕಳೆದೊಂದು ವಾರದಿಂದ 12 ರಿಂದ 13 ಡಿಗ್ರಿ ಸೆಲ್ಸಿಯಸ್ ಬೀದರ್‌ನಲ್ಲಿ ದಾಖಲಾಗುತ್ತಿದೆ. ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣಾಗಿದ್ದಾರೆ.

Shwetha M