ಅಮ್ಮನ ಅಕೌಂಟ್ ಗೆ WC ದುಡ್ಡು – ನತಾಶ ವಿರುದ್ಧ ಪಾಂಡ್ಯ ರಿವೇಂಜ್?
ತುತ್ತಾ.. ಮುತ್ತಾ.. ಹಾರ್ದಿಕ್  ಬೇರೇನೇ..

ಅಮ್ಮನ ಅಕೌಂಟ್ ಗೆ WC ದುಡ್ಡು – ನತಾಶ ವಿರುದ್ಧ ಪಾಂಡ್ಯ ರಿವೇಂಜ್?ತುತ್ತಾ.. ಮುತ್ತಾ.. ಹಾರ್ದಿಕ್  ಬೇರೇನೇ..

ಹಾರ್ದಿಕ್ ಪಾಂಡ್ಯ.. ಸದ್ಯ ದೇಶದಾದ್ಯಂತ ಹಾಟ್ ಟಾಪಿಕ್ ಆಗಿದ್ದಾರೆ.. ಕಳೆದ ಕೆಲವು ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಗಿದ್ದ ಆಲ್‌ರೌಂಡರ್ ಈಗ ಟಿ20 ವಿಶ್ವಕಪ್ ಹೀರೋ.. ಐಪಿಎಲ್ ನಲ್ಲಿ ಫಾರ್ಮ್ ಗಾಗಿ ತಡಾಕಾಡ್ತಿದ್ದ ಪಾಂಡ್ಯ ವಿಶ್ವಕಪ್ನಲ್ಲಿ ತಾನೊಬ್ಬ ಗ್ರೇಟ್ ಕ್ರಿಕೆಟರ್ ಅಂತಾ ತೋರಿಸಿಕೊಟ್ಟಿದ್ರು. ಕಪ್ ಗೆಲ್ತಿದ್ದಂತೆ ಕಳೆದ ಕೆಲವು ತಿಂಗಳಿನಿಂದ ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಕಣ್ಣೀರಿನ ಮೂಲಕ ಹೊರಹಾಕಿದ್ದರು. ಇಡೀ ದೇಶವೇ ಪಾಂಡ್ಯ ರಿಯಲಿ ಗ್ರೇಟ್ ಅಂತಾ ಹೇಳ್ತಿದ್ರೆ, ಪಾಂಡ್ಯ ಪತ್ನಿ ನತಾಶ ಮಾತ್ರ ನನಗೂ ಈ ಸಂಭ್ರಮಾಚರಣೆಗೂ ಯಾವುದೇ ಸಂಬಂಧ ಇಲ್ಲ ಅನ್ನೋ ತರ ಇದ್ದಾರೆ.. ಆದ್ರೆ, ನಿಮಗೊಂದು ವಿಚಾರ ಗೊತ್ತಿರಲೂ ಬಹುದು. ಹಾರ್ದಿಕ್ ಪಾಂಡ್ಯಾ ತನ್ನ ತಾಯಿಯನ್ನೇ ಜಗತ್ತು ಅನ್ನೋ ರೀತಿ ಪ್ರೀತಿಸ್ತಾರೆ. ಕೈಹಿಡಿದ ಪತ್ನಿ ನತಾಶ ಹೇಗೇ ಇರಲಿ, ಪಾಂಡ್ಯ ಯಾವತ್ತೂ ಹೆತ್ತಮ್ಮನ ಬಿಟ್ಟು ಕೊಟ್ಟವರಲ್ಲ. ಸಹೋದರ ಕೃನಾಲ್ ಪಾಂಡ್ಯ ಮತ್ತು ತಾಯಿ ನಳಿನಿ ಪಾಂಡ್ಯ ಮತ್ತು ಮುದ್ದಿನ ಕಂದ ಪಾಂಡ್ಯ ಪ್ರಪಂಚ. ಇದೀಗ ಪತ್ನಿಯ ನಿಗೂಢ ನಡೆಯ ನಡುವೆೇ ಪಾಂಡ್ಯ ತನ್ನ ತಾಯಿಗೆ ಸರ್‌ಪ್ರೈಸ್ ನೀಡಿದ್ದಾರೆ. ಪಾಂಡ್ಯರ ಈ ಮಾತೃಪ್ರೇಮವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ನತಾಶಾಗೆ ಬುದ್ದಿಕಲಿಸಲೆಂದೇ ಪಾಂಡ್ಯ ಈ ರೀತಿ ಮಾಡಿದ್ರಾ, ಅಷ್ಟಕ್ಕೂ ಪಾಂಡ್ಯ ತಾಯಿಗೆ ಕೊಟ್ಟಿರೋದೇನು ಎಂಬ ಬಗ್ಗೆ ಬಗೆಗಿನ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬ ಸಾಧಕನ ಹಿಂದೆ ಕುಟುಂಬದವರು ಇದ್ದೇ ಇರ್ತಾರೆ. ತಾಯಿಯಾದರೂ ಸರಿಯೇ, ಪತ್ನಿಯಾದರೂ ಸರಿಯೇ, ಅಣ್ಣ ತಮ್ಮ, ಅಕ್ಕತಂಗಿಯಾದರೂ ಸರಿಯೇ. ಕುಟುಂಬದ ಬೆಂಬಲ ಚೆನ್ನಾಗಿದ್ದಾಗ ಮಾತ್ರ ಯಾರೇ ಆದರೂ ಎದೆಯುಬ್ಬಿಸಿ ಸಾಧನೆ ಮಾಡಬಹುದು. ಆದ್ರೆ, ವೈಯಕ್ತಿಕ ಜೀವನದಲ್ಲಿ ಏರುಪೇರಾದಾಗ ಎಂಥಾ ಸಾಧಕನೇ ಇರಲಿ, ಮುಖದಲ್ಲಿ ನೋವಿನ ಗೆರೆ ಇದ್ದೇ ಇರುತ್ತದೆ. ಬಹುಷಃ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಹೀಗೆ ಆಗಿರಬಹುದೋ ಏನೋ. ಯಾಕೆಂದ್ರೆ, ಐಪಿಎಲ್ ಟೂರ್ನಿ ವೇಳೆ ಹಾರ್ದಿಕ್ ಪಾಂಡ್ಯ ಸಂಸಾರ ಹಳಿ ತಪ್ಪಿತ್ತು ಎನ್ನಲಾಗ್ತಿತ್ತು. ಇದೇ ನೋವೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿತ್ತೋ ಏನೋ. ಆದ್ರೆ, ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಸಿಡಿದೆದ್ದಿದ್ದಾರೆ. ಪ್ರಮುಖ ಪಂದ್ಯಗಳಲ್ಲಿ ಮ್ಯಾಚ್ ಇಂಡಿಯಾ ಪರ ವಾಲುವಂತೆ ಮಾಡಿದ್ದಾರೆ. ಈ ವೇಳೆ ನತಾಶಾ ಮತ್ತು ಹಾರ್ದಿಕ್ ಬಗ್ಗೆ ಗಾಸಿಪ್ ಕಡಿಮೆಯಾಗ್ತಾ ಹೋಯ್ತು. ಆದ್ರೆ, ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನತಾಶ ಇನ್ಸ್ಟಾಗ್ರಾಂ ಪೋಸ್ಟ್ ಕೂಡ ಭಾರಿ ಸದ್ದು ಮಾಡಿತ್ತು.. ನತಾಶ ಪೋಸ್ಟ್  ನೋಡಿ ಇವರ ಮಧ್ಯೆ ಅಂತದ್ದೇನು ಮನಸ್ತಾಪ ಇರೋದಕ್ಕೆ ಸಾಧ್ಯ ಇಲ್ಲ ಅಂತಾ ಅಭಿಪ್ರಾಯ ಪಟ್ಟಿದ್ರು.. ಅದ್ರೆ   ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ ರೂಪಾರಿಯಾಗಿರೋ ಪಾಂಡ್ಯಗೆ ನತಾಶ ಒಂದು ವಿಶ್ ಕೂಡ ಮಾಡದೇ ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿದೆ.. ಹೀಗಾಗಿ ನತಾಶ ಸೋಶಿಯಲ್ ಮೀಡಿಯಾ ಅಕೌಂಟ್ ಮೇಲೆ ಅಭಿಮಾನಿಗಳು ಸದಾ ಕಣ್ಣಿಟ್ಟಿದ್ದಾರೆ.. ಪಾಂಡ್ಯ ಸಾಧನೆ ಬಗ್ಗೆ ಕೊಂಡಾಡುತ್ತಾರಾ ಅಂತಾ ಕಾಯ್ತಾ ಇದ್ರು.. ಕಡೆಗೂ ನತಾಶ ವಿಶ್ವಕಪ್ ಗೆದ್ದ ಮೂರು ದಿನಗಳ ನಂತರ, ತನ್ನ ಇನ್ ಸ್ಟಾಗ್ರಾಮ್ನಲ್ಲಿ ಮೊದಲ ಬಾರಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆದ್ರೆ ಈ ಪೋಸ್ಟ್ ಕೂಡ ಹಾರ್ದಿಕ್ ಬಗ್ಗೆ ಅಲ್ಲ. ತಮ್ಮ ಫೋಟೋವೊಂದನ್ನ ನತಾಶಾ ಪೋಸ್ಟ್ ಮಾಡಿದ್ದಾರೆ.. ಈ ಫೋಟೋಗಳಿಗೆ ‘ಫಿಟ್ ಚೆಕ್’ ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ ಕೆರಳಿದ್ದಾರೆ.. ಈ ಪೋಸ್ಟ್ಗೆ ಕಾಮೆಂಟ್ಗಳ ಸುರಿಮಳೆ ಗೈದಿದ್ದಾರೆ. ಈ ಬೆನ್ನಲ್ಲೇ ನತಾಶ ವಿರುದ್ಧ ಪಾಂಡ್ಯ ರಿವೇಂಜ್ ತೆಗೆದುಕೊಳ್ಳಲು ಮುಂದಾಗಿದ್ದಾರಾ ಅನ್ನೋ ಬಿಸಿ ಬಿಸಿ ಚರ್ಚೆ ಶುರುವಾಗಿದೆ..

ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, 17 ವರ್ಷಗಳ ಬಳಿಕ ಕಪ್ಅನ್ನು  ಗೆಲ್ಲಿಸಿಕೊಟ್ಟಿದ್ದಕ್ಕೆ ಆಟಗಾರರಿಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿತ್ತು. ಈ ಬಹುಮಾನದ ಮೊತ್ತವನ್ನು ಆಟಗಾರರು ಸ್ವದೇಶಕ್ಕೆ ಮರಳಿದ ಬಳಿಕ ನೀಡಲಾಗುತ್ತೆ. ಇದೀಗ ಈ ಮೊತ್ತವನ್ನು ಹಾರ್ದಿಕ್ ತಮ್ಮ ತಾಯಿಯ ಅಕೌಂಟ್ಗೆ ಜಮೆ ಮಾಡುವಂತೆ ಹೇಳಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದು, ಸಖತ್ ಟ್ರೆಂಡ್ ಆಗುತ್ತಿದೆ. ಪಾಂಡ್ಯ ನತಾಶ ಮೇಲೆ ರಿವೇಂಜ್ ತೀರಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತಾ ಫ್ಯಾನ್ಸ್ ಚರ್ಚೆ ನಡೆಸ್ತಾ ಇದ್ದಾರೆ..

ಹೌದು, 2023ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಗಾಯಗೊಂಡು ಆ ಬಳಿಕ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವದ ವಿಚಾರವಾಗಿ ತೀವ್ರವಾಗಿ ಟ್ರೋಲ್ ಆಗಿದ್ದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಚ್ಛೇದನದ ವಿಚಾರವಾಗಿ ಸದ್ದು ಮಾಡಿದ್ದರು. ಹಾರ್ದಿಕ್ ಪತ್ನಿ ನತಾಶಾ ಪತಿಯ ಆಸ್ತಿಯಲ್ಲಿ ಶೇ.70 ರಷ್ಟು ಪಾಲನ್ನು ಜೀವನಾಂಶಕ್ಕೆ ನೀಡಬೇಕೆಂದು ಡಿವೋರ್ಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದರೆ, ಆ ಬಳಿಕ ತಿಳಿದು ಬಂದ ವಿಚಾರವೇನೆಂದರೆ ಹಾರ್ದಿಕ್ ತಾವು ಖರೀದಿಸಿದ ಕಾರು, ಮನೆ ಹಾಗೂ ಬೆಲೆಬಾಳುವ ವಸ್ತುಗಳನ್ನ ತಮ್ಮ ತಾಯಿಯ ಹೆಸರಿನಲ್ಲಿ ನೋಂದಾಯಿಸಿದ್ದರೆಂದು. ನತಾಶಾಗೆ 70 ಅಲ್ಲಾ ಶೇ. 07ರಷ್ಟು ಪಾಲು ಸಿಗುವುದಿಲ್ಲವೆಂದು. ಇದೀಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಬಿಸಿಸಿಐ ತಮಗೆ ಕೊಡುವ ಮೊತ್ತವನ್ನು ತಮ್ಮ ತಾಯಿಯ ಖಾತೆಗೆ ಹಾಕಬೇಕೆಂದು ಹಾರ್ದಿಕ್ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರ ಬಳಿ ಮನವಿ ಮಾಡಿಕದ್ದಾರಂತೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದು, ಇದರ ಮೀಮ್ಸ್ ಸಖತ್ ವೈರಲ್ ಆಗುತ್ತಿದೆ. ಆದ್ರೆ ನಿಜಕ್ಕೂ ಪಾಂಡ್ಯ ಈ ನಿರ್ಧಾರ ಕೈಗೊಂಡಿದ್ದಾರಾ ಇಲ್ವಾ ಅಂತಾ ಗೊತ್ತಿಲ್ಲ.. ಈ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ ಪಾಂಡ್ಯ.. ಆದ್ರೆ ನತಾಶ ವಿರುದ್ದ ಸಿಟ್ಟಲ್ಲಿ ಪಾಂಡ್ಯ ನಿರ್ಧಾರ ಕೈಗೊಂಡರೂ ಅಚ್ಚರಿ ಇಲ್ಲ..

Shwetha M

Leave a Reply

Your email address will not be published. Required fields are marked *