ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಎಫ್ ಐಆರ್ – ವಂಚನೆ ಕೇಸ್ ನಲ್ಲಿ ಅರೆಸ್ಟ್ ಆಗ್ತಾರಾ?

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಎಫ್ ಐಆರ್ – ವಂಚನೆ ಕೇಸ್ ನಲ್ಲಿ ಅರೆಸ್ಟ್ ಆಗ್ತಾರಾ?

2025 ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಚೊಚ್ಚಲ ಟ್ರೋಫಿಗೆ ಮುತ್ತಿಡುವಲ್ಲಿ ವೇಗದ ಬೌಲರ್ ಯಶ್ ದಯಾಳ್ ಪರ್ಫಾಮೆನ್ಸ್ ಕೂಡ ದೊಡ್ಡದಿದೆ. ಆದ್ರೀಗ ಅದೇ ದಯಾಳ್ ಅರೆಸ್ಟ್ ಆಗೋ ಭೀತಿಯಲ್ಲಿದ್ದಾರೆ. ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿಯಾಗಿರೋ ಯುವತಿಯೊಬ್ಬಳು, ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು ಪೊಲೀಸರು ಕೂಡ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಹಾಗೇನಾದ್ರೂ ಯುವತಿ ನೀಡಿದ ದೂರಿನ ಅಂಶಗಳು ಪ್ರೂವ್ ಆದ್ರೆ ಯಶ್ ದಯಾಳ್ ಜೈಲು ಪಾಲಾಗಲಿದ್ದು, ಇದ್ರಿಂದ ಅವರ ವೃತ್ತಿಜೀವನವು ಅಂತ್ಯವಾಗುವ ಸಾಧ್ಯತೆಗಳಿವೆ. ಅಷ್ಟಕ್ಕೂ ದಯಾಳ್ ವಿರುದ್ಧ ಕೇಳಿ ಬಂದಿರೋದು ಅಂತಿಂಥ ಆರೋಪವಲ್ಲ.

ಇದನ್ನೂ ಓದಿ : ಭಾರತದ ಬೆಳಗಿದ ಆಕಾಶ್ ದೀಪ್ ಮನದಲ್ಲಿ ನೋವಿನ ಸರಮಾಲೆ- ತಮ್ಮನ ಸಾಧನೆಗೆ ಅನಾರೋಗ್ಯದ ನಡುವೆಯೂ ಅಕ್ಕನ ಸಂಭ್ರಮ

ಮೋಸ ಮಾಡಿದ್ರಾ ದಯಾಳ್?

ಮದುವೆಯ ಆಮಿಷವೊಡ್ಡಿ ಫೈನಾನ್ಶಿಯಲಿ, ಮೆಂಟಲಿ ಹಾಗೇ ಫಿಸಿಕಲಿ ಶೋಷಣೆ

ಯಶ್ ದಯಾಳ್ ಜೊತೆಗಿರುವ ಫೋಟೋವನ್ನು ಶೇರ್, ಪೊಲೀಸರಿಗೆ ದೂರು

ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು

5 ವರ್ಷಗಳಿಂದ ಯಶ್ ದಯಾಳ್ ಜೊತೆ ಸಂಬಂಧ ಹೊಂದಿದ್ದಾಗಿ ಉಲ್ಲೇಖ

ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂಬುದನ್ನು ಉಲ್ಲೇಖ

ಬಿಎನ್ ​​ಎಸ್ ಅಂದ್ರೆ ಭಾರತೀಯ ನ್ಯಾಯ ಸಂಹಿತ ಸೆಕ್ಷನ್ 69ರ ಅಡಿ ಕೇಸ್

ಘಾಜಿಯಾಬಾದ್​ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್ ​ಐಆರ್

ಸಿಎಂ ಕಚೇರಿ ಸೂಚನೆ ಮೇರೆಗೆ ಪೊಲೀಸರು ದಯಾಳ್ ವಿರುದ್ಧ ಎಫ್​ ಐಆರ್

ಕಳೆದ ಐದು ವರ್ಷಗಳಿಂದ ಪ್ರೀತಿ, ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋ ಹಾಗೂ ಸ್ಕ್ರೀನ್​ ಶಾಟ್ ಶೇರ್

ಸದ್ಯ ಪ್ರಕರಣದ ಗಂಭೀರತೆ ಅರಿತ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಯಶ್ ದಯಾಳ್ ಬಹಿರಂಗವಾಗಿ ಯಾವುದೇ ಸ್ಪಷ್ಟನೇ ನೀಡದಿದ್ದರೂ, ದಯಾಳ್ ಅವರ ತಂದೆ ಮಾತ್ರ ಈ ಹುಡುಗಿ ಬಗ್ಗೆ ನಮಗೇನು ತಿಳಿದಿಲ್ಲ. ಈ ಹುಡುಗಿ ಈ ಆರೋಪಗಳನ್ನು ಏಕೆ ಮಾಡಿದ್ದಾಳೆಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಪೊಲೀಸರು ಈಗಾಗ್ಲೇ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದ ಪೊಲೀಸರು, ಎಫ್​ಐಆರ್ ದಾಖಲಿಸಿದ್ದಾರೆ. ಇದರಿಂದ ದಯಾಳ್​​ಗೆ ಬಂಧನದ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದರೂ ಆರ್​ಸಿಬಿ ಸ್ಟಾರ್ ಯಶ್​​, ಬಂಧನ ಆಗಬಹುದು. ಇನ್ನು, ಯುವತಿ ಆರೋಪಕ್ಕೆ ದಯಾಳ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರೋದು ಕೂಡ ಸಾಕಷ್ಟು ಅನುಮಾನಗಳನ್ನ ಮೂಡಿಸಿದೆ.

ಯಶ್ ದಯಾಳ್ ಅಂದ್ರೆ ಐಪಿಎಲ್​ನಲ್ಲಿ ಥಟ್ ಅಂತಾ ನೆನಪಾಗೋದೇ 2023ರಲ್ಲಿ 5 ಸಿಕ್ಸರ್ ಹೊಡೆಸಿಕೊಂಡಿದ್ದು. ರಿಂಕು ಸಿಂಗ್ ಕೊನೇ ಐದು ಬಾಲ್​ಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನ ಗೆಲ್ಲಿಸಿಕೊಟ್ಟಿದ್ರು. ಕಳಪೆ ಬೌಲಿಂಗ್​ನಿಂದಾಗಿ ಗುಜರಾತ್ ತಂಡ ದಯಾಳ್​ರನ್ನ ಕೈಬಿಟ್ಟಿತ್ತು. ಇಂಥಾ ಟೈಮಲ್ಲಿ ಅವ್ರಿಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದೇ ಆರ್​ಸಿಬಿ. ಬೆಂಗಳೂರು ಫ್ರಾಂಚೈಸಿಯ ನಂಬಿಕೆ ಉಳಿಸಿಕೊಂಡಿದ್ದ ದಯಾಳ್ ಅದ್ಭುತ ಪ್ರದರ್ಶನವನ್ನೇ ನೀಡಿದ್ರು. ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಶ್ ದಯಾಳ್ ಈ ಆವೃತ್ತಿಯಲ್ಲಿ 15 ಪಂದ್ಯಗಳನ್ನು ಆಡಿದ್ದು, 13 ವಿಕೆಟ್‌ಗಳನ್ನು ಕಬಳಿಸಿದ್ದರು. ಬಟ್ ರಿಯಲ್ ಲೈಫ್​ನಲ್ಲಿ ಈಗ ಗಂಭೀರ ಆರೋಪಕ್ಕೆ ತುತ್ತಾಗಿದ್ದಾರೆ. ಹಾಗೇನಾದ್ರೂ ದಯಾಳ್ ತಪ್ಪು ಮಾಡಿದ್ದು ಸಾಬೀತಾದ್ರೆ ಐಪಿಎಲ್​ನಲ್ಲಿ ದಯಾಳ್​ರನ್ನ ಬ್ಯಾನ್ ಮಾಡೋ ಅವಕಾಶ ಐಪಿಎಲ್ ಆಡಳಿತ ಮಂಡಳಿಗೆ ಇದೆ. ಅಥವಾ ಆರ್​ಸಿಬಿ ಫ್ರಾಂಚೈಸಿಯೇ ತನ್ನ ಬ್ರ್ಯಾಂಡ್ ವ್ಯಾಲ್ಯೂವನ್ನ ಉಳಿಸಿಕೊಳ್ಳಲು ಯಶ್ ದಯಾಳ್ ರನ್ನ ಟೀಂನಿಂದ ಬಿಡುಗಡೆ ಮಾಡಬಹುದು. ಅಥವಾ ಪಂದ್ಯಗಳಲ್ಲಿ ಭಾಗಿಯಾಗದಂತೆ ನಿಷೇಧವನ್ನೂ ಹೇರಬಹುದು. 2013 ರಲ್ಲಿ, ಶ್ರೀಶಾಂತ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಶಿಕ್ಷೆ ವಿಧಿಸುವ ಮೊದಲೇ ಅವರನ್ನು ನಿಷೇಧಿಸಲಾಗಿತ್ತು. ಸೋ ಈಗ ದಯಾಳ್ ವಿಚಾರದಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ.2026ರ ಐಪಿಎಲ್​ನಲ್ಲಿ ಆಡ್ತಾರಾ ಅನ್ನೋದೇ ಅತಿದೊಡ್ಡ ಪ್ರಶ್ನೆಯಾಗಿದೆ.

Shantha Kumari