ಬುದ್ಧಿ ಕಲಿಯದ ಪಾಕಿಸ್ತಾನ – ಭಾರತ ಜೊತೆಗಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ಬಯಸಿದ್ದೇಕೆ?

ಬುದ್ಧಿ ಕಲಿಯದ ಪಾಕಿಸ್ತಾನ – ಭಾರತ ಜೊತೆಗಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ಬಯಸಿದ್ದೇಕೆ?

ಇಸ್ಲಮಾಬಾದ್: ಕಾಶ್ಮೀರ ವಿವಾದ ಸೇರಿದಂತೆ ಭಾರತದ ಜೊತೆಗಿನ ಎಲ್ಲ ಬಿಕ್ಕಟ್ಟು ಇತ್ಯರ್ಥಕ್ಕೆ ಮೂರನೇ ದೇಶದ ಮಧ್ಯಸ್ಥಿಕೆಗೆ ಪಾಕಿಸ್ತಾನ ಒಲವು ತೋರಿಸಿದೆ.

ಭಾರತದ ಜೊತೆಗಿನ ಎಲ್ಲಾ ರೀತಿಯ ಬಿಕ್ಕಟ್ಟನ್ನು  ಬಗೆಹರಿಸಲು ಅಂತರರಾಷ್ಟ್ರೀಯ ಸಮುದಾಯವು ಮುಖ್ಯ ಪಾತ್ರ ವಹಿಸುವುದನ್ನು ಸ್ವಾಗತಿಸುವುದಾಗಿ ಪಾಕ್ ತಿಳಿಸಿದೆ.

ಇದನ್ನೂ ಓದಿ: ಎಲ್ಲವೂ ಕೇಂದ್ರದ ಆಜ್ಞೆಯಂತೆ ನಡೀಬೇಕಂದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಏಕೆ ಬೇಕು ? –ಸುಪ್ರೀಂಕೋರ್ಟ್

ಈ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಝಹ್ರಾ ಬಲೋಚ್, ಭಾರತ – ಪಾಕ್ ಮಧ್ಯೆ ಶಾಂತಿ ನೆಲೆಸಲು ಅಮೆರಿಕ ಸೇರಿದಂತೆ ಮೂರನೇ ಅಂತರರಾಷ್ಟ್ರೀಯ ಸಮುದಾಯದ ಮಧ್ಯಸ್ಥಿಕೆಯನ್ನು ಸ್ವಾಗತ ಮಾಡುವುದಾಗಿ ಹೇಳಿದ್ದಾರೆ

ಪಾಕಿಸ್ತಾನದ ಜೊತೆಗೆ ಮಾತುಕತೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಮೊದಲಿನಿಂದಲೂ ವಿರೋಧಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಲು ಬೇರೆ ಯಾವುದೇ ದೇಶಕ್ಕೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಪಾಕಿಸ್ತಾನದೊಂದಿಗಿನ ಬಾಂಧವ್ಯ ಹದಗೆಡಲು ಕಾರಣವಾಗಿದೆ. ಪುಲ್ವಾಮಾ ದಾಳಿ ನಂತರ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಆರ್ಥಿಕವಾಗಿ ದಿವಾಳಿ ಎದ್ದರೂ ಪಾಕಿಸ್ತಾನ ಬುದ್ದಿ ಕಲಿಯದಿರುವುದು ಮತ್ತೆ ಸ್ಪಷ್ಟವಾಗಿದೆ.

suddiyaana