KING ಮೇಲೆ ಬಿದ್ದ PAK ಕಣ್ಣು – ಭಾರತವನ್ನೇ ಮರೆಯುತ್ತಾರಾ ಕೊಹ್ಲಿ?
ಚಾಂಪಿಯನ್ಸ್ ಟ್ರೋಫಿಗೆ ಏನಿದು ಶಾಕ್?

KING ಮೇಲೆ ಬಿದ್ದ PAK ಕಣ್ಣು – ಭಾರತವನ್ನೇ ಮರೆಯುತ್ತಾರಾ ಕೊಹ್ಲಿ?ಚಾಂಪಿಯನ್ಸ್ ಟ್ರೋಫಿಗೆ ಏನಿದು ಶಾಕ್?

ಭಾರತ ಮತ್ತು ಪಾಕಿಸ್ತಾನ ಬದ್ಧವೈರಿ ರಾಷ್ಟ್ರಗಳು ಅನ್ನೋದು ಇಡೀ ಜಗತ್ತಿಗೇ ಗೊತ್ತಿರೋ ವಿಚಾರ. ಭೂಪ್ರದೇಶದಿಂದ ಹಿಡಿದು ಕ್ರೀಡೆವರೆಗೂ ಕೂಡ ಜಿದ್ದಾಜಿದ್ದಿ ನಡೆಯುತ್ತಲೇ ಇರುತ್ತೆ. ಆದ್ರೆ ಭಾರತದಂಥ ಬಲಿಷ್ಠ ರಾಷ್ಟ್ರದ ಎದುರು ಪಾಕಿಸ್ತಾನ ಏನೇನೂ ಅಲ್ಲ. ಅದೆಷ್ಟೇ ಸಂಚು ಮಾಡಿದ್ರೂ ಯಾವುದೂ ವರ್ಕೌಟ್ ಆಗಿಲ್ಲ. ಬಹುಶಃ ಭಾರತಕ್ಕೆ ಪ್ರತೀ ನಿಮಿಷ ಕೇಡು ಬಯಿಸಿದ್ದು ತನಗೇ ಶಾಪವಾಗಿ ತಿರುಗಿತು ಅನ್ಸುತ್ತೆ. ಇಂದು ಪಾಕಿಸ್ತಾನ ಆರ್ಥಿಕವಾಗಿ ಅಧೋಗತಿಗೆ ತಲುಪಿದೆ. ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದ್ರೂ ಅಷ್ಟೇ. ಟೀಂ ಇಂಡಿಯಾ ಪ್ರತೀ ಸಲ ಮೇಲುಗೈ ಸಾಧಿಸಿಯೇ ಬಂದಿದೆ. ಈ ಬಾರಿಯ ಟಿ-20 ವಿಶ್ವಕಪ್​ನಲ್ಲೂ ಕೂಡ ಪಾಕ್​ಗೆ ಭಾರತೀಯ ಆಟಗಾರರು ಮಾಸ್ಟರ್​ಸ್ಟ್ರೋಕ್ ಕೊಟ್ಟಿದ್ರು. ಇದೀಗ ಪಾಕಿಸ್ತಾನ ಮತ್ತೊಂದು ಮಹಾಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ತಿದೆ. 2025ರಲ್ಲಿ ಪಾಕಿಸ್ತಾನದಲ್ಲೇ ಚಾಂಪಿಯನ್ಸ್ ಟ್ರೋಫಿ ನಡೆಸೋಕೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ತಿದೆ. ಬಟ್ ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಾ ಬಿಸಿಸಿಐ ಖಡಕ್ ಸಂದೇಶ ಕಳಿಸಿದೆ. ಆದ್ರೆ ಪಾಕ್ ಅಭಿಮಾನಿಗಳು ಮತ್ತು ಆಟಗಾರರ ಕಣ್ಣು ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ.

ಇದನ್ನೂ ಓದಿ:  ಸೈನಾ ನೆಹ್ವಾಲ್ V/s ರಾಷ್ಟ್ರಪತಿ ಮುರ್ಮು – ಬ್ಯಾಡ್ಮಿಂಟನ್ ಅಂಗಳದಲ್ಲಿ ದ್ರೌಪದಿ

ಕ್ರಿಕೆಟ್ ಜಗತ್ತಿನ ಬೆಸ್ಟ್ ಐಕಾನ್ ಅಂತಾ ಯಾರಾದ್ರೂ ಇದ್ರೆ ಅದು ಒನ್ ಌಂಡ್ ಓರ್ನಿ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ ಮತ್ತು ಕ್ರೇಜ್ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಇದ್ರ ಬಗ್ಗೆ ಸಪರೇಟ್​ ಆಗಿ ಹೇಳ್ಬೇಕು ಅಂತೇನಿಲ್ಲ. ಅವರ ಬ್ಯಾಟಿಂಗ್, ಫೀಲ್ಡಿಂಗ್, ಅಗ್ರೆಶನ್ ಮನೋಭಾವದಿಂದಲೇ ಕೋಟ್ಯಂತರ ಜನರ ಮನಗೆದ್ದಿದ್ದಾರೆ. ಬರೀ ಭಾರತ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ನೇಮ್, ಫೇಮ್ ಗಳಿಸಿದ್ದಾರೆ. ಅದೆಷ್ಟೋ ಯುವಕರಿಗೆ ಕಿಂಗ್ ವಿರಾಟ್ ರೋಲ್ ಮಾಡೆಲ್ ಕೂಡ ಆಗಿದ್ದಾರೆ. ಕ್ರಿಕೆಟ್ ಮೇಲೆ ಅವ್ರು ಇಟ್ಟಿರೋ ಡೆಡಿಕೇಶನ್ ಅಂತೂ ಮೆಚ್ಚಲೇಬೇಕು. ವಿರಾಟ್ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಿದ್ದೇನೆ ಅಂದ್ರೆ ಅದಕ್ಕೆ ಕಾರಣ ಕೂಡ ಇದೆ. ವಿರಾಟ್ ಅಂದ್ರೆ ಬರೀ ಭಾರತೀಯರಷ್ಟೇ ಅಲ್ಲ. ನಮ್ಮ ಬದ್ಧವೈರಿ ರಾಷ್ಟ್ರವಾಗಿರೋ ಪಾಕಿಸ್ತಾನದಲ್ಲೂ ಕೂಡ ವಿರಾಟ್ ಕೊಹ್ಲಿಗೆ ಕಟ್ಟಾ ಅಭಿಮಾನಿಗಳಿದ್ದಾರೆ. ಸಾಮಾನ್ಯ ಜನ ಅಷ್ಟೇ ಅಲ್ಲ ಕ್ರಿಕೆಟರ್​ಗಳೇ ಕೊಹ್ಲಿಯನ್ನ ಆರಾಧಿಸ್ತಾರೆ. ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ ಹೇಳಿರೋ ಮಾತೇ ಸಂಚಲನ ಮೂಡಿಸಿದೆ.

ಕಿಂಗ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಅಪಾರ ಅಭಿಮಾನಿ ಬಳಗವಿದೆ. ಹಲವು ಬಾರಿ ಇದು ಸಾಬೀತು ಕೂಡ ಆಗಿದೆ. ಪಾಕಿಸ್ತಾನ ತಂಡ ಆಡುವ ಪಂದ್ಯಗಳ ವೇಳೆ ಹಾಗೂ ಪಿಎಸ್ಎಲ್ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕೊಹ್ಲಿ ಫೋಟೋ, ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗುವುದನ್ನು ನೋಡಿದ್ದೇವೆ. ಅಲ್ಲದೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ಅತಿಯಾಗಿ ಹೊಗಳುವುದನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಇದೀಗ ಪಾಕ್ ಮಾಜಿ ನಾಯಕ ಶಾಹಿದ್ ಆಫ್ರಿದಿ ನೀಡಿರೋ ಹೇಳಿಕೆ ನೋಡಿದ್ರೆ ನಿಜಕ್ಕೂ ಶಾಕಿಂಗ್ ಆಗಿದೆ. ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತದಲ್ಲಿನ ಸೌಲಭ್ಯಗಳನ್ನೇ ಮರೆತುಬಿಡುತ್ತಾರೆ ಅಂತಾ ಆಫ್ರಿದಿ ಹೇಳಿದ್ದಾರೆ. ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡುವುದನ್ನು ನೋಡಲು ನಾನು ಮತ್ತು ಅವರ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದೇವೆ ಎಂದಿದ್ದಾರೆ.

ಅಸಲಿಗೆ ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಕಾಲಿಡದೇ ದಶಕವೇ ಕಳೆದು ಹೋಗಿದೆ. 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಸರಣಿ ದಾಳಿ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಯಾಕಂದ್ರೆ ಸರಣಿ ದಾಳಿ ಹಿಂದೆ ಇದ್ದಿದ್ದೇ ಪಾಕಿಸ್ತಾನ ಸಂಘಟನೆಯ ಕೈವಾಡ. ಇದೇ ಕಾರಣಕ್ಕೆ ಬಿಸಿಸಿಐ ಪಾಕ್​ ಪ್ರವಾಸವನ್ನೇ ನಿಷೇಧಿಸಿದೆ. ಬಟ್ ಈಗ 2025ಕ್ಕೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನವೇ ಆತಿಥ್ಯ ವಹಿಸುತ್ತಿದೆ. ಸೋ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೇ ಬಂದು ಆಡ್ಬೇಕು ಅನ್ನೋದು ಪಾಕ್ ಕ್ರಿಕೆಟ್ ಮಂಡಳಿ ಹಾಗೇ ಅಲ್ಲಿನ ಆಟಗಾರರ ಬೇಡಿಕೆ. ಬಟ್ ಆಟಗಾರರ ವಿಚಾರದಲ್ಲಿ ಇಂಥಾ ದೊಡ್ಡ ರಿಸ್ಕ್ ತೆಗೆದುಕೊಳ್ಳೋಕೆ ಬಿಸಿಸಿಐ ರೆಡಿ ಇಲ್ಲ. ಯಾಕಂದ್ರೆ ಟೀಂ ಇಂಡಿಯಾ ಪ್ಲೇಯರ್ಸ್ ನಮ್ಮ ಭಾರತದ ಅತ್ಯಮೂಲ್ಯ ಆಸ್ತಿ. ಒಂಥರಾ ಬೆಲೆ ಕಟ್ಟಲಾಗದ ವಜ್ರಗಳು. ಇಂಥಾವ್ರನ್ನ ಅಂತಾ ಪಾಪಿಗಳ ನೆಲಕ್ಕೆ ಅದ್ಯಾವ ನಂಬಿಕೆ ಮೇಲೆ ಕಳ್ಸೋದು ಹೇಳಿ. ಅವ್ರದ್ದೇ ದೇಶದಲ್ಲಿರೋ ಪಾಪಿಗಳನ್ನ ಅವ್ರನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗ್ತಿಲ್ಲ. ಅಂಥಾದ್ರಲ್ಲಿ ನಮ್ಮ ಪ್ಲೇಯರ್ಸ್​ಗೆ ಹೇಗೆ ತಾನೇ ಭದ್ರತೆ ಕೊಡ್ತಾರೆ. ಹೀಗಾಗೇ ಬಿಸಿಸಿಐ  ಪಾಕಿಸ್ತಾನದಲ್ಲೇ ಟೂರ್ನಿ ಆಯೋಜನೆಗೊಂಡರೆ ಭಾರತ ತಂಡ ಪ್ರಯಾಣಿಸುವುದಿಲ್ಲ ಎಂದು ಖಡಕ್ಕಾಗೇ ಹೇಳಿದೆ. ಹಾಗೇ ತಮ್ಮ ಪಂದ್ಯಗಳನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಐಸಿಸಿಗೆ ಮನವಿ ಮಾಡಿದೆ. ಅಂದ್ರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಕೇಳಿದೆ. ಭದ್ರತೆ ಮತ್ತು ಸುರಕ್ಷತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಆಟಗಾರರನ್ನು ಕಳುಹಿಸುವುದಿಲ್ಲ. ಕಳೆದ ವರ್ಷ ಏಷ್ಯಾಕಪ್ ಮಾದರಿಯಲ್ಲೇ ಭಾರತ ತಂಡದ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಬಿಸಿಸಿಐ, ಐಸಿಸಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದೆ. ಅದರಂತೆ ಶ್ರೀಲಂಕಾ ಮತ್ತು ದುಬೈಗೆ ಭಾರತದ ಪಂದ್ಯಗಳು ಸ್ಥಳಾಂತರವಾಗುವ ಸಾಧ್ಯತೆ ಇದೆ.

ಅಸಲಿಗೆ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ಬಂದು ಆಟ ಆಡ್ಲಿ ಅನ್ನೋದು ಅಲ್ಲಿನವ್ರ ಒತ್ತಾಯ. ಅದಕ್ಕೆ ಕಾರಣ ಕೂಡ ಇದೆ ಬಿಡಿ. ಹೇಳಿಕೇಳಿ ಭಾರತ ತಂಡ ಜಗತ್ತಲ್ಲೇ ಬಲಿಷ್ಠ ತಂಡ. ಸೋ ಇಂಥಾ ಟೀಂ ಪಾಕ್​ಗೆ ಹೋದ್ರೆ ಪಾಕಿಸ್ತಾನಕ್ಕೂ ದೊಡ್ಡ ಲಾಭ ಇದೆ. ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳನ್ನ ಆಯೋಜನೆ ಮಾಡ್ಬೋದು ಅನ್ನೋದು ಅವ್ರ ಪ್ಲ್ಯಾನ್. ಭಾರತ ಮತ್ತು ಪಾಕ್ ಪಂದ್ಯಗಳು ಹೆಚ್ಚಾದಂತೆಲ್ಲಾ ವೀಕ್ಷಣೆಯೂ ಜಾಸ್ತಿ ಸಿಗುತ್ತೆ. ಸೋ ಪಾತಾಳಕ್ಕೆ ಕುಸಿದಿರೋ ಪಾಕ್​ನ ಆರ್ಥಿಕತೆಗೂ ಬೂಸ್ಟ್ ಸಿಕ್ಕಂತಾಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಅವ್ರ ತಂತ್ರಗಳನ್ನೆಲ್ಲಾ ಉಲ್ಟಾ ಮಾಡಿ ಬಿಸಿಸಿಐ ಶಾಕ್ ಕೊಟ್ಟಿದೆ. ಇದೇ ಕಾರಣಕ್ಕೆ ಅಲ್ಲಿನ ಆಟಗಾರರು ಹೊಸ ವರಸೆ ಶುರು ಮಾಡಿದ್ದಾರೆ. ಕಿಂಗ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದು ಆಡ್ಲೇಬೇಕು ಅಂತಿದ್ದಾರೆ.

ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲೇ ಆಟವಾಡಬೇಕು ಅಂತಾ ಶಾಹಿದ್ ಅಫ್ರಿದಿ ಕುತೂಹಲಕಾರಿ ಹೇಳಿಕೆಯೊಂದನ್ನ  ನೀಡಿದ್ದಾರೆ. ವಿರಾಟ್‌ ಕೊಹ್ಲಿಗೆ ಪಾಕಿಸ್ತಾನದಲ್ಲಿ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಜೆರ್ಸಿಯ ಮೇಲೆ ಕೊಹ್ಲಿ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಬರುವ ಭಾರತ ತಂಡಕ್ಕೆ ಸ್ವಾಗತ. ಭಾರತಕ್ಕೆ ಪಾಕಿಸ್ತಾನ ತಂಡ ಪ್ರವಾಸ ಮಾಡಿದ್ದಾಗ ನಮಗೆ ಸಾಕಷ್ಟು ಗೌರವ ಲಭಿಸಿದೆ. 2005ರಲ್ಲಿ ಭಾರತಕ್ಕೆ ಪಾಕಿಸ್ತಾನ ತಂಡ ಪ್ರವಾಸ ಮಾಡಿದ್ದಾಗಲೂ ನಮಗೆ ಸಾಕಷ್ಟು ಪ್ರೀತಿ ಮತ್ತು ಗೌರವ ಸಿಕ್ಕಿದೆ. ರಾಜಕೀಯದಿಂದ ಕ್ರೀಡೆಯನ್ನ ದೂರ ಇಡಬೇಕಾಗಿದೆ. ಎರಡೂ ತಂಡಗಳು ಒಬ್ಬರಿಗೊಬ್ಬರು ಕ್ರಿಕೆಟ್‌ ಆಡುವುದಕ್ಕಿಂತ ಉತ್ತಮ ರಾಜಕೀಯ ಮತ್ತೊಂದಿಲ್ಲ. ಭಾರತ ತಂಡ ಪಾಕಿಸ್ತಾನಕ್ಕೆ ಬರುವುದು ಮತ್ತು ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದು ಇದು ಎಷ್ಟು ಸುಂದರವಾಗಿದೆ. ಅದ್ರಲ್ಲೂ ಪಾಕಿಸ್ತಾನಕ್ಕೆ ವಿರಾಟ್‌ ಕೊಹ್ಲಿ ಬಂದರೆ, ಇಲ್ಲಿನ ಬೆಂಬಲ ಹಾಗೂ ಪ್ರೀತಿಯಿಂದ ಅವರು ಭಾರತವನ್ನು ಮರೆತು ಬಿಡುತ್ತಾರೆ. ಪಾಕಿಸ್ತಾನದಲ್ಲಿ ವಿರಾಟ್‌ ಕೊಹ್ಲಿಗೆ ಸಾಕಷ್ಟು ಕ್ರೇಜ್‌ ಇದೆ. ನಮ್ಮ ದೇಶದಲ್ಲಿ ವಿರಾಟ್‌ ಕೊಹ್ಲಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರು ನನ್ನ ನೆಚ್ಚಿನ ಆಟಗಾರ. ಅವರು ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಬಾರದಾಗಿತ್ತು ಎಂದಿದ್ದಾರೆ ಆಫ್ರಿದಿ.

ಆಕ್ಚುಲಿ ಹೇಳ್ಬೇಕಂದ್ರೆ ಕ್ರಿಕೆಟ್ ಆಡಲು ಪಾಕಿಸ್ತಾನದಕ್ಕೆ ವಿರಾಟ್ ಕೊಹ್ಲಿ ಈವರೆಗೂ ಕಾಲೇ ಇಟ್ಟಿಲ್ಲ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಇದುವರೆಗೂ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2008ರಲ್ಲಿ ಧೋನಿ ನೇತೃತ್ವದ ಭಾರತ ತಂಡ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಅಂದಿನಿಂದ ಎರಡೂ ದೇಶಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಭಾರತದಲ್ಲಿ ನಡೆದಿದ್ದ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಕಣಕ್ಕೆ ಇಳಿದಿತ್ತು. ಆದರೆ ಭಾರತ ತಂಡ ತನ್ನ ಆಟಗಾರರಿಗೆ ಸೂಕ್ತ ಭದ್ರತೆ ಇಲ್ಲದೆ ಪಾಕಿಸ್ತಾನ ಪ್ರವಾಸ ಮಾಡುತ್ತಿಲ್ಲ. ಇದಲ್ಲದೆ, ಭಾರತ ಸರ್ಕಾರವೂ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಪರ್ಮಿಷನ್ ಕೂಡ ಕೊಟ್ಟಿಲ್ಲ. ಸೋ ಮುಂಬರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಸೋ ಈ ಟೂರ್ನಿಯಲ್ಲಿ ಭಾರತದ ಪಂದ್ಯಗಳು ಬೇರೆಡೆ ನಡೆಸೋ ಬಗ್ಗೆ ಚಿಂತನೆ ನಡೆಸಲಾಗ್ತಿದೆ.  ಇದ್ರ ನಡುವೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೋಸ್ಕರ ಆದ್ರೂ ಪಾಕಿಸ್ತಾನಕ್ಕೆ ಬಂದು ಆಡ್ಲಿ ಅಂತಾ ಬೇಡಿಕೆ ಇಡ್ತಿದ್ದಾರೆ. ಆದ್ರೆ ವಿರಾಟ್ ಕೊಹ್ಲಿಯೇ ಆಗ್ಲಿ ಭಾರತದ ಯವುದೇ ಆಟಗಾರರೇ ಇರ್ಲಿ. ಟೂರ್ನಿ ಮಿಸ್ ಮಾಡಿಕೊಂಡ್ರೂ ಅವ್ರನ್ನಂತೂ ಪಾಕ್​ಗೆ ಕಳಿಸೋಕೆ ಸಾಧ್ಯನೇ ಇಲ್ಲ. ಹಾಗೇ ಪಾಕಿಸ್ತಾನದ ಅಭಿಮಾನಿಗಳ ಪ್ರೀತಿ ನೋಡಿ ಭಾರತವನ್ನೇ ಕೊಹ್ಲಿ ಮರೆತುಬಿಡ್ತಾರೆ ಅನ್ನೋದು ಅತಿಶಯೋಕ್ತಿ ಅಷ್ಟೇ. ಯಾಕಂದ್ರೆ ಇಲ್ಲೇ ಹುಟ್ಟಿ ಬೆಳೆದ ಕಿಂಗ್ ಯಾವತ್ತೂ ಕೂಡ ತನ್ನ ತವರನ್ನ ಮರೆಯೋಕೆ ಸಾಧ್ಯ ಇಲ್ಲ. ಭಾರತೀಯರು ಕೊಟ್ಟಿರೋ ಪ್ರೀತಿಯಿಂದ್ಲೇ ಇಂದು ವಿರಾಟ್ ಕೊಹ್ಲಿ ಇಡೀ ಕ್ರಿಕೆಟ್ ಜಗತ್ತಿನ ಕಿಂಗ್ ಆಗಿದ್ದು ಅನ್ನೋದೂ ಸುಳ್ಳಲ್ಲ.

Shwetha M

Leave a Reply

Your email address will not be published. Required fields are marked *