ವೈಭವ್ ಓಪನರ್.. ಸುಂದರ್ ಔಟ್ – ಸೂರ್ಯವಂಶಿ ಆಡಿದ್ರೆ ಭಾರತಕ್ಕೇ ಪ್ಲಸ್
2ನೇ ಪಂದ್ಯಕ್ಕೆ ಪ್ಲೇಯಿಂಗ್ 11 ಸರ್ಜರಿ

ವೈಭವ್ ಓಪನರ್.. ಸುಂದರ್ ಔಟ್ – ಸೂರ್ಯವಂಶಿ ಆಡಿದ್ರೆ ಭಾರತಕ್ಕೇ ಪ್ಲಸ್2ನೇ ಪಂದ್ಯಕ್ಕೆ ಪ್ಲೇಯಿಂಗ್ 11 ಸರ್ಜರಿ

ಐರ್ಲೆಂಡ್ ವಿರುದ್ಧ ಫಾರ್ ದಿ ಫಸ್ಟ್ ಟೈಂ ಮ್ಯಾಚ್ ಸೋತಿರೋ ಭಾರತ ಅಟ್​ಲೀಸ್ಟ್ ಎರಡನೇ ಮ್ಯಾಚಲ್ಲಾದ್ರೂ ಗೆದ್ದು ಸರಣಿ ಸಮಬಲ ಮಾಡ್ಕೊಳ್ಬೇಕು. ಐರಿಷ್ ವಿರುದ್ಧ ಭಾರತ ಪಂದ್ಯ ಸೋತೇ ಇಲ್ಲ ಅನ್ನೋ ರೆಕಾರ್ಡ್ ಅಂತೂ ಬ್ರೇಕ್ ಆಗಿದೆ. ಅಟ್​​ಲೀಸ್ಟ್ ಸರಣಿ ಸೋತಿಲ್ಲ ಅನ್ನೋ ಮರ್ಯಾದೆನಾದ್ರೂ ಉಳಿಸಿಕೊಳ್ಬೇಕು. ಹೀಗಾಗಿ ಭಾನುವಾರದ ಎರಡನೇ ಪಂದ್ಯಕ್ಕಾಗಿ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆ ಮಾಡ್ಲೇಬೇಕಿದೆ. ಬಾಸ್ ಬೇಬಿಗೆ ಚಾನ್ಸ್ ನೀಡಲೇಬೇಕು. ಅಷ್ಟಕ್ಕೂ ವೈಭವ್ ಆಡಿದ್ರೆ ಭಾರತಕ್ಕೇ ಲಾಭ.

ಇದನ್ನೂ ಓದಿ : 5.. 1.. 3.. 148ಕ್ಕೆ ALL OUT – ಭಾರತದ ಅಹಂಗೆ ಐರ್ಲೆಂಡ್ ಪೆಟ್ಟು

ಭಾನುವಾರ ಐರ್ಲೆಂಡ್ ವಿರುದ್ಧದ ಪಂದ್ಯ ಭಾರತಕ್ಕೆ ಬರೀ ಸೋಲು ಗೆಲುವಿನ ಪ್ರಶ್ನೆ ಅಲ್ಲ. ಪ್ರತಿಷ್ಠೆಯ ಪ್ರಶ್ನೆ. ಕ್ರಿಕೆಟ್ ಶಿಶುಗಳ ಎದುರು ವಿಶ್ವಚಾಂಪಿಯನ್ ಭಾರತ ಸರಣಿ ಸೋಲೋದನ್ನ ತಪ್ಪಿಸಿಕೊಳ್ಳಬೇಕು. ಈಗಾಗಲೇ ಮೊದಲ ಪಂದ್ಯದಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿ ಗೆದ್ದಿರೋ ಐರಿಷ್ ಪಡೆ ಎರಡನೇ ಮ್ಯಾಚಲ್ಲೂ ಅದೇ ಕಾನ್ಫಿಡೆಂಟ್ ಮೈಂಡ್​ಸೆಟ್​ನಲ್ಲೇ ಬರ್ತಾರೆ. ಹೀಗಾಗಿ ಐರ್ಲೆಂಡ್ ತಂಡವನ್ನ ಸೋಲಿಸಿ ಭಾರತ ನೆಕ್ಸ್​ಟ್ ಇಂಗ್ಲೆಂಡ್​ಗೆ ಹಾರಬೇಕು. ಹೀಗಾಗಿ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡಕ್ಕೆ ಈ ಗೆಲುವು ತುಂಬಾನೇ ಮುಖ್ಯ. ಇದಕ್ಕಾಗಿ ಪ್ಲೇಯಿಂಗ್ 11 ಬದಲಾವಣೆ ಅನಿವಾರ್ಯವಾಗಿದೆ. ಅದ್ರಲ್ಲೂ ವೈಭವ್ ಸೂರ್ಯವಂಶಿಗೆ ಡೆಬ್ಯೂ ಚಾನ್ಸ್ ಕೊಡಲೇಬೇಕಿದೆ.

ಸೂರ್ಯವಂಶಿ ಆಡಿದ್ರೆ ಪ್ಲಸ್!

ಐಪಿಎಲ್, ಎ ಟೀಂ ಪರ ಉತ್ತಮ ಪ್ರದರ್ಶನ ನೀಡಿ ಅದ್ಭುತ ಫಾರ್ಮ್

ಐರ್ಲೆಂಡ್ ವಿರುದ್ಧ ಕಣಕ್ಕಿಳಿಸಿದ್ರೆ ಡೆಬ್ಯೂ ಮ್ಯಾಚಲ್ಲೇ ಒಳ್ಳೆ ರನ್ಸ್ ನಿರೀಕ್ಷೆ

ಓಪನರ್ ಆಗಿ ಆಡಿದ್ರೆ ಪವರ್ ಪ್ಲೇನಲ್ಲೇ ಪಂದ್ಯದ ದಿಕ್ಕನ್ನೇ ಬದಲಿಸೋ ಸ್ಟ್ರೆಂಥ್

6 ರಿಂದ 8 ಓವರ್ ಆಡಿದ್ರೂ ಭಾರತದ ಸ್ಕೋರ್ ದಿಢೀರ್ ಹೆಚ್ಚಳ

ಔಟ್ ಆದ್ರೂ ಹೆಚ್ಚಿನ ಬಾಲ್ ಗಳನ್ನ ವೇಸ್ಟ್ ಮಾಡದೇ ಬೇಗನೇ ಔಟ್

ಎದುರಾಳಿ ತಂಡಗಳಲ್ಲಿ ವೈಭವ್ ಔಟ್ ಬಗ್ಗೆ ಹೆಚ್ಚಿನ ಫೋಕಸ್

ಉಳಿದ ಬ್ಯಾಟರ್ ಗಳು ಪಂದ್ಯವನ್ನ ಗೆಲ್ಲೋಕೆ ಅವಕಾಶ

ಇದೇ ಕಾರಣಕ್ಕೆ ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಎಕ್ಸ್ ಪರ್ಟ್ಸ್ ಕೂಡ ವೈಭವ್ ಸೂರ್ಯವಂಶಿಯನ್ನ ಆಡಿಸಿ ಅಂತಾ ಸಜೆಸ್ಟ್ ಮಾಡ್ತಿದ್ದಾರೆ. ಮೊದಲ ಪಂದ್ಯದಲ್ಲೇ ಹೊರಗಿಟ್ಟಿದ್ದಕ್ಕೆ ಸಾಕಷ್ಟು ಆಕ್ರೋಶ, ವಿರೋಧ ವ್ಯಕ್ತವಾಗ್ತಿದೆ. ಸೂರ್ಯವಂಶಿಯನ್ನ ಪ್ಲೇಯಿಂಗ್ 11ನಿಂದ ಆಚೆ ಇಟ್ಟಿದ್ದಕ್ಕೇ ಭಾರತ ಸೋಲ್ತು ಅನ್ನೋದು ಕೆಲವರ ವಾದ. ಅದೂ ಅಲ್ದೇ ತಂಡಕ್ಕೆ ಹೊರೆಯಾಗಿರೋ ವಾಷಿಂಗ್ಟನ್ ಸುಂದರ್ ರನ್ನ ಕೈಬಿಟ್ಟು ಸೂರ್ಯವಂಶಿನ ಆಡ್ಸಿ ಅಂತಿದ್ದಾರೆ.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಕಂಪ್ಲೀಟ್ ಸಪ್ಪೆಯಾದ ಸುಂದರ್!

ಅಷ್ಟಕ್ಕೂ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಅವ್ರ ಕಳಪೆ ಪ್ರದರ್ಶನದ ಬಗ್ಗೆಯೂ ಪ್ರಶ್ನೆಗಳನ್ನ ಮಾಡ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಒಂದೊಳ್ಳೆ ಸಪೋರ್ಟ್ ಸಿಗ್ತಿಲ್ಲ. ಬೌಲಿಂಗ್ ಅಂತೂ ತೀರಾ ಕಳಪೆ. ಫೀಲ್ಡಿಂಗ್ ಕೂಡ ಚೆನ್ನಾಗಿಲ್ಲ. ಹೀಗಿದ್ರೂ ಯಾಕೆ ಚಾನ್ಸ್ ಕೊಡ್ತಿದ್ದಾರೆ. ಅದ್ರ ಬದಲು ವೈಭವ್ ಸೂರ್ಯವಂಶಿಯನ್ನೇ ಆಡ್ಸಿ ಅಂತಿದ್ದಾರೆ. ಹೌದು ವಾಷಿಂಗ್ಟನ್ ಸುಂದರ್ ಆಲ್ ರೌಂಡರ್. ಬೌಲಿಂಗ್ ಕೂಡ ಮಾಡಿಸ್ಬೋದು ಅಂತಾ ಸಬೂಬು ಕೊಡ್ಬೋಡು. ಬಟ್ ಸುಂದರ್ ಒಂದೇ ಓವರ್ ನಲ್ಲಿ 19, 20 ರನ್ಸ್ ಕೊಟ್ಟು ದುಬಾರಿ ಆಗ್ತಿದ್ದಾರೆ. ಅದ್ರ ಬದಲು ಐದು ಬೌಲರ್​ಗಳೇ ಕಂಪ್ಲೀಟ್ ಓವರ್ಸ್ ಬೌಲ್ ಮಾಡಿದ್ರೆ ಸೂರ್ಯವಂಶಿ ಬ್ಯಾಟಿಂಗ್​ನಲ್ಲಿ ಆಡ್ತಾರೆ ಅನ್ನೋ ಸಜೇಷನ್ಸ್ ಕೊಡ್ತಿದ್ದಾರೆ.

2ನೇ ಪಂದ್ಯಕ್ಕೆ ಸೂರ್ಯವಂಶಿಗೆ ಚಾನ್ಸ್?

ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ

ಸಂಜು ಸ್ಯಾಮ್ಸನ್

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಶಿವಂ ದುಬೆ

ಸೂರ್ಯಾನ್ಶ್ ಶೆಡ್ಗೆ

ಹರ್ಷಿತ್ ರಾಣಾ

ಪ್ರಿನ್ಸ್ ಯಾದವ್

ಅರ್ಶದೀಪ್ ಸಿಂಗ್

Shantha Kumari

Leave a Reply

Your email address will not be published. Required fields are marked *