ಸ್ಪಿನ್ ಬೌಲಿಂಗ್ ನಲ್ಲಿ ಬ್ಯಾಟಿಂಗ್ ಕಷ್ಟ ಕಷ್ಟ – ಅನುಭವಿಗಳಲ್ಲದೆ ಲಂಕಾ ಟೆಸ್ಟ್ ಸರಣಿ ಗೆಲ್ಲುತ್ತಾ ಭಾರತ?

ಸ್ಪಿನ್ ಬೌಲಿಂಗ್ ನಲ್ಲಿ ಬ್ಯಾಟಿಂಗ್ ಕಷ್ಟ ಕಷ್ಟ – ಅನುಭವಿಗಳಲ್ಲದೆ ಲಂಕಾ ಟೆಸ್ಟ್ ಸರಣಿ ಗೆಲ್ಲುತ್ತಾ ಭಾರತ?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಲೇಬೇಕಿರೋ ಟೀಂ ಇಂಡಿಯಾ ಕಂಪ್ಲೀಟ್ ಪ್ರೆಶರ್​ನಲ್ಲಿದೆ. ಅದೂ ಅಲ್ದೇ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವ್ರ ಆಬ್ಸೆನ್ಸ್ ಮತ್ತು ಲಂಕಾ ಪಿಚ್‌ಗಳ ಸ್ಪಿನ್ ಜಾಲವನ್ನು ಬೇಧಿಸೋದು ಸುಲಭ ಕೂಡ ಅಲ್ಲ. ಒಂದ್ಕಡೆ ನಾಯಕನಾಗಿ ಡಬ್ಲ್ಯೂಟಿಸಿ ಫೈನಲ್​ ರೇಸ್​ನಲ್ಲಿ ತಂಡವನ್ನ ಉಳಿಸ್ಬೇಕು ಅಂತಾ ನಾಯಕ ಶುಭ್​ಮನ್ ಗಿಲ್ ಒತ್ತಡದಲ್ಲಿದ್ರೆ ಅತ್ತ ಹಳ್ಳ ಹಿಡಿದಿರೋ ಟೆಸ್ಟ್ ಫಾರ್ಮೆಟ್​ನ ಮೇಲೆತ್ತಬೇಕಿರೋ ಸವಾಲು ಗೌತಮ್ ಗಂಭೀರ್​ಗೂ ಇದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಲಂಕಾ ಸರಣಿಯೇ ಗಂಭೀರ್​ಗೆ ಭಾರತದ ಪರ ಲಾಸ್ಟ್ ಟೆಸ್ಟ್ ಸಿರೀಸ್ ಅನ್ನೋ ಚರ್ಚೆಯೂ ಜೋರಾಗಿದೆ.

ಇದನ್ನೂ ಓದಿ : ನನಗೆ ಮನೆ ಕಟ್ಟೋಕೆ ಜಾಗ ಕೊಡಿ- ಅಂಗಲಾಚಿ ಬೇಡಿಕೊಂಡ ರಿಷಭ್ ಪಂತ್

ಶ್ರೀಲಂಕಾ ವಿರುದ್ಧ ಆಗಸ್ಟ್ 15ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭ ಆಗಲಿದೆ. 2027ರ ಡಬ್ಲ್ಯೂಟಿಸಿ ಫೈನಲ್ ರೇಸ್​ನಲ್ಲಿ ಉಳಿಯೋಕೆ ಇಲ್ಲಿ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಭಾರತಕ್ಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ ಯುವ ಆಟಗಾರರ ನೇತೃತ್ವದಲ್ಲಿ ವಿದೇಶಿ ನೆಲದಲ್ಲಿ ಆಡುತ್ತಿರುವ ಭಾರತಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಹಾಗೇ ತಂಡಕ್ಕೂ ಕೂಡ ಸಾಲು ಸಾಲು ಸವಾಲುಗಳಿವೆ.

ಭಾರತಕ್ಕಿರೋ ಸವಾಲುಗಳು!

ಬುಮ್ರಾ ಗೈರು.. ಸಿರಾಜ್ ಮತ್ತು ಪ್ರಸಿದ್ಧ್ ವೇಗದ ಬೌಲಿಂಗ್ ಲೀಡ್

ಗಾಲೆಯಂತ ಸ್ಪಿನ್ ಫ್ರೆಂಡ್ಲಿ ಪಿಚ್ ನಲ್ಲಿ ಜೈಸ್ವಾಲ್, ರಾಹುಲ್, ಗಿಲ್ ಗೆ ಕಷ್ಟ

ರಾಹುಲ್, ಜಡೇಜಾ ಮತ್ತು ಕುಲದೀಪ್ ಮಾತ್ರವೇ ಲಂಕಾದಲ್ಲಿ ಟೆಸ್ಟ್ ಅನುಭವ

ಕ್ಯಾಪ್ಟನ್ ಆಗಿ ಲಂಕಾ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಆಡ್ತಿರೋ ಗಿಲ್

ಟೆಸ್ಟ್ ನಲ್ಲಿ ಸಾಕಷ್ಟು ಸೋಲು ಕಂಡಿರೋ ಗಂಭೀರ್ ಗೆ ಗೆಲ್ಲಲೇಬೇಕಾದ ಒತ್ತಡ

ಡಬ್ಲ್ಯೂಟಿಸಿಯಲ್ಲಿ 5ನೇ ಸ್ಥಾನದಲ್ಲಿದ್ದು ಟಾಪ್-2ಗಾಗಿ ಎರಡೂ ಪಂದ್ಯ ಗೆಲ್ಲಬೇಕು

ಬ್ಯಾಟಿಂಗ್ ವಿಭಾಗದಲ್ಲಿ ರಾಹುಲ್ ಹೊರತುಪಡಿಸಿದ್ರೆ ಅನುಭವಿಗಳು ಕಡಿಮೆ

ಹೀಗೆ ಯಂಗ್​ಸ್ಟರ್​ಗಳೇ ತುಂಬಿರೋ ಭಾರತ ಟೆಸ್ಟ್ ತಂಡ ಶ್ರೀಲಂಕಾ ದಹನ ಮಾಡೋದು ಅಷ್ಟು ಸುಲಭ ಇಲ್ಲ. ಕೋಚ್, ಕ್ಯಾಪ್ಟನ್, ಪ್ಲೇಯರ್ಸ್ ಹೀಗೆ ಎಲ್ರೂ ಕೂಡ ಪ್ರೆಶರ್​ನಲ್ಲೇ ಇರ್ತಾರೆ. ಆದ್ರೆ ಶ್ರೀಲಂಕಾ ಟೀಂ ಮಾತ್ರ ಕೂಲ್ & ಕಾಮ್ ಆಗಿದೆ. ಶ್ರೀಲಂಕಾ ತಂಡಕ್ಕೆ ಹೋಮ್ ಅಡ್ವಾಂಟೇಜ್ ಇದೆ. ಹಾಗೇ ಮತ್ತು ಭಾರತ ತಂಡದಲ್ಲಿ ಪ್ರಮುಖ ಆಟಗಾರರ ಗೈರುಹಾಜರಿ ದೊಡ್ಡ ಪ್ಲಸ್ ಪಾಯಿಂಟ್ ಆಗಲಿವೆ. ಗಾಲೆಯಂತಹ ಮೈದಾನಗಳಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸುವುದು ಯಾವುದೇ ವಿದೇಶಿ ತಂಡಕ್ಕೆ ಸುಲಭವಲ್ಲ. ಸಮಯ ಕಳೆದಂತೆ ಶ್ರೀಲಂಕಾದ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಪ್ಲಸ್ ಆಗುತ್ವೆ. ಭಾರತೀಯ ಬ್ಯಾಟರ್‌ಗಳು ಸ್ಪಿನ್ ವಿರುದ್ಧ ಡಲ್ ಇರೋದನ್ನ ಅವ್ರು ಬಳಸಿಕೊಳ್ಬೋದು. ಪ್ರಭಾತ್ ಜಯಸೂರ್ಯನಂಥ ಡೇಂಜರಸ್ ಸ್ಪಿನ್ನರ್ ತಂಡದಲ್ಲಿದ್ದಾರೆ.  ಅದೂ ಅ್ದೇ ಮೊದಲ ಪಂದ್ಯ ನಡೆಯಲಿರೋ ಗಾಲೆ ಕ್ರೀಡಾಂಗಣವು ಶ್ರೀಲಂಕಾದ ಭದ್ರಕೋಟೆಯಾಗಿದೆ. ಸ್ಪಿನ್ನರ್‌ಗಳ ಸ್ವರ್ಗ ಎಂದು ಕರೆಯಲ್ಪಡುವ ಈ ಮೈದಾನದಲ್ಲಿ ಶ್ರೀಲಂಕಾ ತಂಡವು ಅದ್ಭುತವಾದ ಟೆಸ್ಟ್ ದಾಖಲೆಗಳನ್ನು ಹೊಂದಿದೆ. ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹಿಡಿತ ಜಾಸ್ತಿ ಇರುತ್ತೆ. ಗಾಲೆ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಶೇ. 70 ರಷ್ಟು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತದೆ. ಹೀಗಾಗಿ ಬರೀ ಪರ್ಫಾಮೆನ್ಸ್ ಅಷ್ಟೇ ಅಲ್ಲ ಟಾಸ್ ಗೆದ್ರಷ್ಟೇ ಆಲ್ಮೋಸ್ಟ್ ಪಂದ್ಯ ಗೆಲ್ಲೋ ಚಾನ್ಸಸ್ ಕೂಡ ಜಾಸ್ತಿನೇ ಇರುತ್ತೆ.

Shantha Kumari

Leave a Reply

Your email address will not be published. Required fields are marked *