ಸದ್ಯದಲ್ಲೇ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? – ಸಿದ್ದು ಬಳಿಕ ಯಾರಾಗ್ತಾರೆ ಸಿಎಂ?

ಸದ್ಯದಲ್ಲೇ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? – ಸಿದ್ದು ಬಳಿಕ ಯಾರಾಗ್ತಾರೆ ಸಿಎಂ?

ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ವೇ ಇಲ್ಲ.. ನಾನ್ ಕ್ಲೀನ್ ಹ್ಯಾಂಡ್ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಮುಡಾ ಮುಜುಗರ ತಂದಿದೆ. ಮುಡಾ ಹಗರಣ ಹೊರ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.. ಕುರ್ಚಿಯಿಂದ ಕೆಳಗಿಯಬೇಕು ಅನ್ನೋ ಕೂಗು ಬಿಜೆಪಿ ಪಾಳಯದಿಂದ ಬಲವಾಗಿ ಕೇಳಿ ಬರ್ತಿದೆ.. ಸದ್ಯಕ್ಕೆ ನಿಂತ್ರು ಕುಂತ್ರು ಚರ್ಚೆ ಆಗುತ್ತಿರೋ ವಿಷಯ ಏನಪ್ಪ ಅಂದ್ರೆ ಸಿದ್ದರಾಮಯ್ಯ ಬದಲಾವಣೆ ಆಗ್ತಾರಾ, ದಶಮಿ ನಂತ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಅನ್ನೋ ವಿಷ್ಯ. ಹಾಗಿದ್ರೆ ಸಿದ್ದರಾಮಯ್ಯ ಅವರ ಮುಂದಿನ ನಡೆಯೇನು..? ರಾಜೀನಾಮೆ ನೀಡ್ತಾರಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ಸಿಎಂ ರೇಸ್‌ನಲ್ಲಿರುವ ಸಚಿವರುಗಳು ಒಟ್ಟೊಟ್ಟಿಗೆ ಸೇರೋದು, ಸೀಕ್ರೇಟ್‌ ಸಭೆ ಮಾಡೋದು ಇದೆಲ್ಲವೂ ಕೂಡ ಸಿಎಂ ಬದಲಾವಣೆ ಆಗ್ತಾರಾ ಎಂಬ ಪುಕಾರು ಎದ್ದಿದೆ. ಸದ್ಯಕ್ಕೆ ವಿಜಯೇಂದ್ರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಬದಲಾವಣೆ ಆಗೋದು ಪಕ್ಕಾ ಅಂತ ಹೇಳಲಾಗ್ತಿದೆ. ಹಾಗಾದ್ರೆ ವಿಜಯೇಂದ್ರ ಏನ್‌ ಹೇಳಿದ್ರು ಅಂದ್ರೆ.. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ದಸರಾ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಅವರ ರಾಜೀನಾಮೆ ಅಂತೂ ಫಿಕ್ಸ್ ಅಂತ ಹೇಳಿದ್ದಾರೆ..
ಸಿದ್ದರಾಮಯ್ಯ ಬದಲಾವಣೆ ಹೇಳಿಕೆ ಕೊಟ್ಟ ಮೇಲೆ ಬಿವೈ ವಿಜಯೇಂದ್ರ ಕೂಡ ಸತೀಶ್‌ ಜಾರಕಿಹೊಳಿಯನ್ನ ಭೇಟಿ ಮಾಡಿದ್ರು . ಈ ಭೇಟಿ ಈಗ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅದರಲ್ಲೂ ಜಾರಕಿಹೊಳಿ ಭೇಟಿಗೂ ಈ ಮಾತಿನ ರಹಸ್ಯಕ್ಕೂ ಒಂದಕ್ಕೊಂದು ಲಿಂಕ್‌ ಆಗ್ತಿದೆ ಅನ್ನೋದು ರಾಜಕೀಯ ಪಡೆಸಾಲೆಯ ಮಾತು.. ಸಿಎಂ ಬದಲಾವಣೆ ಚರ್ಚೆಯೇ ಮಧ್ಯೆ ಎಲ್ಲ ಸಚಿವರು ಕೂಡ ಸತೀಶ್‌ ಜಾರಕಿಹೊಳಿಯನ್ನ ಭೇಟಿ ಮಾಡುತ್ತಿದ್ದು, ರಾಜ್ಯರಾಜಕಾರಣದಲ್ಲಿ ಸಂಚನ ಸೃಷ್ಟಿಯಾಗಿದೆ.

ಸದ್ಯದಲ್ಲೇ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ..?

ಕಾಂಗ್ರೆಸ್‌ ಪಕ್ಷದಲ್ಲಿನ ಸಿಎಂ ಕುರ್ಚಿ ಕದನ ಈಗ ತಾರಕ್ಕಕ್ಕೇರಿದೆ.. ದಿನದಿಂದ ದಿನಕ್ಕೇ ಸಿಎಂ ಬದಲಾವಣೆ ಕೂಗು ಸ್ವಪಕ್ಷದಲ್ಲೇ ಹೆಚ್ಚಾಗುತ್ತಿದೆ. ಇತ್ತ ವಿಪಕ್ಷಗಳು ಕೂಡ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿವೆ..ಆದ್ರೆ ರಾಜೀನಾಮೆ ಕೊಡಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಸಿದ್ದರಾಮಯ್ಯ ಅಬ್ಬರಿಸುತ್ತಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿಗೆ ಸಂಪೂರ್ಣವಾಗಿ 5 ವರ್ಷ ಪೂರೈಸಿ ಎರಡನೇ ಬಾರಿಗೆ ಸಿಎಂ ಆದವರು. ಅಲ್ಲದೇ ಮೊದಲ ಬಾರಿಗೆ ಸಿದ್ದರಾಮಯ್ಯ ಮೇಲೆ ಆರೋಪ ಬಂದಿರೋದು. ಅಲ್ಲದೇ ಸಿದ್ದರಾಮಯ್ಯ ಲಾಯರ್ ಆಗಿದ್ದವರು.. ಹೀಗಾಗಿ ಸಾಕಷ್ಟು ಯೋಚನೆ ಮಾಡಿ ಹೆಜ್ಜೆ ಇಡ್ತಾರೆ. ಒತ್ತಾಯಕ್ಕೆ ಮಣಿದು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ಕೊನೆ ತನಕ ಕಾಯ್ತಾರೆ.. ಅದು ಎಲ್ಲಿಯ ತನಕ ಅಂದ್ರೆ ಮುಡಾ ಕೇಸ್‌ನಲ್ಲಿ ಅರೆಸ್ಟ್ ಆಗುವ ತನಕ.. ದಸರಾ ಮುಗಿದ ಮೇಲೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಅನ್ನೋ ಮಾತಿಗೆ ಸಿದ್ದರಾಮಯ್ಯ ಕೇರ್ ಮಾಡಲ್ಲ. ಇದೆಲ್ಲಾ ರಾಜೀಕಿಯವಾಗಿ ನನ್ನ ವಿರುದ್ಧ ನಡೆಯುತ್ತಿರೋ ಪಿತೂರಿ. ವಿರೋಧ ಪಕ್ಷ ಮಾಡಿರೋ ಕುತಂತ್ರ ಅಂತಲೇ ಸಮರ್ಥನೆ ಮಾಡಿಕೊಂಡು ಬರ್ತಾರೆ..ಒಂದು ವೇಳೆ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದೆಯೆಂದು ಅರೆಸ್ಟ್ ಮಾಡೋ ತನಕ ರಾಜೀನಾಮೆ ನೀಡಲ್ಲ.. ಅರೆಸ್ಟ್ ಮಾಡಿದ ನಂತ್ರವೇ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ. ಒಂದು ವೇಳೆ ರಾಜೀನಾಮೆ ಕೊಟ್ಟ ನಂತ್ರ ಮುಡಾ ಕೇಸ್ ಠುಸ್ ಪಟಾಕಿ ಆದ್ರೆ, ರಾಜೀನಾಮೆ ನೀಡಿರುವುದು ವೆಸ್ಟ್ ಆಗುತ್ತೆ.  ಹಾಗಾಗಿ ವಿಜಯೇಂದ್ರ ಅವರು ಹೇಳಿದಂತೆ ಸಿಎಂ ಸ್ಥಾನಕ್ಕೆ ದಶಮಿ ನಂತ್ರ ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

ಸಿದ್ದರಾಮಯ್ಯ ನಂತ್ರ ಯಾರಾಗ್ತಾರೆ ಸಿಎಂ..?

ಈ ಹಿಂದಿನ ಇತಿಹಾಸವನ್ನ ನೋಡಿದ್ರೆ, ಸಿಎಂ ಯಾರು ಆಗಿರುತ್ತಾರೋ ಅವರ ಮೇಲೆ ಆರೋಪ ಬಂದಾಗ, ರಾಜೀನಾಮೆ ನೀಡುವ ಪ್ರಸಂಗ ಬಂದಾಗ ಅವರ ಆಪ್ತರೇ ಸಿಎಂ ಆಗಿರೋದನ್ನು ನಾವೆಲ್ಲರೂ ಕೂಡ ನೋಡಿದ್ದೇವೆ.. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ರಾಜೀನಾಮೆ ನೀಡುವ ಪ್ರಸಂಗ ಬಂದಾಗ ಅವರ ಆಪ್ತರಾಗಿದ್ದ ಸದಾನಂದಾಗೌಡರು, ಜಗದೀಶ್‌ ಶೆಟ್ಟರ್‌ ಅನಂತರ ಬೊಮ್ಮಾಯಿ ಅವರನ್ನು ಸಿಎಂ ಆಗಿದ್ರು. ಹೀಗೆ ಸಿದ್ದರಾಮಯ್ಯನವರ ವಿಷಯದಲ್ಲೂ ಆಗುತ್ತಾ ಅನ್ನೋ ಚರ್ಚೆ ಹುಟ್ಟುಹಾಕಿದೆ. ಸಿದ್ದರಾಮಯ್ಯನವರ ಆಪ್ತ ಆಗಿರುವ ಸತೀಶ್‌ ಜಾರಕಿಹೊಳಿಯನ್ನು ಸಿದ್ದರಾಮಯ್ಯ ಸಿಎಂ ಮಾಡುತ್ತಾರಾ ಎಂಬ ಚರ್ಚೆ ಶುರುವಾಗಿದೆ.. ತಮ್ಮ ಮಾತನ್ನೇ ಕೇಳುವಂಥ ನಾಯಕನನ್ನು ಸಿಎಂ ಸೀಟಿನಲ್ಲಿ ಕೂರಿಸಬೇಕು ಅನ್ನೋದು ಸಿದ್ದರಾಮಯ್ಯ ಪ್ಲಾನ್‌ ಇದೆ ಎನ್ನಲಾಗ್ತಿದೆ.. ಈ ಪ್ಲಾನ್‌ ಅರಿತ ಡಿಕೆ ಶಿವಕುಮಾರ್‌ ಈಗ ಯೂಟರ್ನ್‌ ಹೊಡೆದಿದ್ದಾರೆ. ಸಿದ್ದರಾಮಯ್ಯುನವರೇ ಐದು ವರ್ಷ ಸಿಎಂ ಆಗಿರಬೇಕು ಅಂತ ಮಾತಿನ ದಾಟಿ ಬದಲಾಯಿಸಿದ್ದಾರೆ.  ಈ ನಡುವೆ ವಿಜಯೇಂದ್ರ ದಶಮಿ ನಂತ್ರ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ ಅಂತಾ ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *