ಶಿವಂ ದುಬೆಗೆ ಯಾಕಿಷ್ಟು ಚಾನ್ಸ್?  – 7 ಪಂದ್ಯ.. 106 ರನ್.. ಫೈನಲ್ ಹೇಗೆ?
ಜೈಸ್ವಾಲ್, ಸಂಜುಗೆ BCCI ಅನ್ಯಾಯ 

ಶಿವಂ ದುಬೆಗೆ ಯಾಕಿಷ್ಟು ಚಾನ್ಸ್?  – 7 ಪಂದ್ಯ.. 106 ರನ್.. ಫೈನಲ್ ಹೇಗೆ?ಜೈಸ್ವಾಲ್, ಸಂಜುಗೆ BCCI ಅನ್ಯಾಯ 

2024ರ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. ಒಂದೂ ಪಂದ್ಯವನ್ನ ಸೋಲದೆ ಫಿನಾಲೆಗೆ ಎಂಟ್ರಿ ಕೊಟ್ಟಿದೆ. ಆದ್ರೂ ಕೂಡ ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಬ್ಬರು ಆಟಗಾರರ ಪ್ರದರ್ಶನ ತುಂಬಾನೇ ಬೇಸರ ಮೂಡಿಸಿದೆ. ಅದ್ರಲ್ಲಿ ಒಂದು ವಿರಾಟ್ ಕೊಹ್ಲಿ ಮತ್ತೊಂದು ಶಿವಂ ದುಬೆ. ವಿರಾಟ್ ಕೊಹ್ಲಿ ಬಿಡಿ ಜಗತ್ತು ಕಂಡ ಒಬ್ಬ ಲೆಜೆಂಡರಿ ಕ್ರಿಕೆಟಿಗ. ಇಂದಲ್ಲ ನಾಳೆ ಬ್ಯಾಟ್ ಮೂಲಕವೇ ಉತ್ತರ ಕೊಡ್ತಾರೆ. ಬಟ್ ಶಿವಂ ದುಬೆ ಕಥೆಯೇ ಅರ್ಥವಾಗ್ತಿಲ್ಲ. ಟೂರ್ನಿಯುದ್ದಕ್ಕೂ ಫ್ಲ್ಯಾಪ್ ಶೋ ನೀಡ್ತಿದ್ರೂ ಕೂಡ ಪ್ಲೇಯಿಂಗ್ 11ನಿಂದ ಡಾಪ್ ಮಾಡೋದು ಬಿಟ್ಟು ಯಾಕಿಷ್ಟು ಚಾನ್ಸ್ ಕೊಡ್ತಾರೆ ಅನ್ನೋದು. ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡುವ ಶಿವಂ ದುಬೆ ಫ್ಲ್ಯಾಪ್ ಶೋ ಬರೀ ಟಿ-20 ವಿಶ್ವಕಪ್​ನಲ್ಲಿ ಮಾತ್ರ ಅಲ್ಲ. ಐಪಿಎಲ್​ನಲ್ಲೇ ಶುರುವಾಗಿತ್ತು. ಅದೂ ಕೂಡ ಟಿ-20 ವರ್ಲ್ಡ್​ಕಪ್ ಸ್ಕ್ವಾಡ್​ಗೆ ಸೆಲೆಕ್ಟ್ ಆದ್ಮೇಲೆ ಅವ್ರ ಬ್ಯಾಟ್ ಕಂಪ್ಲೀಟ್ ಸೈಲೆಂಟ್ ಆಗಿತ್ತು.

ಡಲ್ ಆದ ದುಬೆ!

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಟಾರ್ ಆಲ್‌ರೌಂಡರ್ ಶಿವಂ ದುವೆ ಆಟ ಕಂಡು 2024ರ ಐಪಿಎಲ್​ನಲ್ಲಿ ಫ್ಯಾನ್ಸ್‌ ಫುಲ್ ಖುಷ್ ಆಗಿದ್ದರು. ಮಿಡ್ಲ್ ಆರ್ಡರ್‌ನಲ್ಲಿ ಧಮಾಕೆದಾರ್ ಬ್ಯಾಟಿಂಗ್ ಮಾಡಿ ಎದುರಾಳಿಗಳಿಗೆ ನಡುಕ ಹುಟ್ಟುಸುತ್ತಿದ್ದ ಆಟಗಾರ ಈತ. ಐಪಿಎಲ್‌ನ ಮೊದಲಾರ್ಧದಲ್ಲಿ ಬರೀ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್‌ಗಳನ್ನು ಡೀಲ್ ಮಾಡ್ತಿದ್ರು. ಇದೇ ಪರ್ಫಾಮೆನ್ಸ್ ನೋಡಿಯೇ ಬಿಸಿಸಿಐ ಟಿ20 ವಿಶ್ವಕಪ್‌ ತಂಡದಲ್ಲಿ ಈ ಯುವ ಆಟಗಾರನಿಗೆ ಮಣೆ ಹಾಕಿತು. ಶಿವಂ ದುಬೆ ತಂಡಕ್ಕೂ ಆಯ್ಕೆ ಆಗುವ ಮುನ್ನ 172 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ 58 ರ ಸರಾಸರಿಯಲ್ಲಿ ರನ್ ಗಳಿಸಿದ್ರು. ಆದ್ರೆ ಯಾವಾಗ ಟೀಂ ಇಂಡಿಯಾದಲ್ಲಿ ಹೆಸ್ರು ಅನೌನ್ಸ್ ಆಯ್ತೋ ಅಲ್ಲಿಂದಲೇ ಕಂಪ್ಲೀಟ್ ಫೇಲ್ಯೂರ್ ಆದ್ರು. ಏಪ್ರಿಲ್ 30 ರಂದು ಬಿಸಿಸಿಐ ಟಿ-20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನ ಅನೌನ್ಸ್ ಮಾಡಿತು. ಅದ್ರಲ್ಲಿ ಶಿವಂ ದುಬೆ ಕೂಡ ಸೆಲೆಕ್ಟ್ ಆಗಿದ್ರು. ಇದಾದ ಬಳಿಕ ಮೇ1 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಮೇ 5ರಂದು ಪಂಜಾಬ್‌ ವಿರುದ್ಧವೂ ಸೊನ್ನೆ ಇವರನ್ನು ಅಪ್ಪಿಕೊಂಡಿತು. ಮೇ 10 ರಂದು ಗುಜರಾತ್‌ ವಿರುದ್ಧ 21, ಮೇ 12 ರಂದು ರಾಜಸ್ಥಾನ ವಿರುದ್ಧ 18 ರನ್, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಮೇ 18 ರಂದು 7 ರನ್‌ ಬಾರಿಸಿ ನಿರಾಸೆ ಅನುಭವಿಸಿದರು. ಅದ್ರಲ್ಲೂ RCB ವಿರುದ್ಧದ ಮಹತ್ವದ ಪಂದ್ಯದಲ್ಲಿ 15 ಎಸೆತಗಳಲ್ಲಿ 7 ರನ್ ಗಳಿಸಿದ್ದು ಚೆನ್ನೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಮೇಲೆ ವಿಶ್ವಕಪ್​ನಲ್ಲೂ ಕೂಡ ದುಬೆ ಕಳಪೆ ಫಾರ್ಮ್​ನಿಂದ ಹೊರಬಂದೇ ಇಲ್ಲ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 2 ಬಾಲ್ ಎದುರಿಸಿದ್ರೂ ಶಿವಂ ದುವೆ ಒಂದೂ ರನ್ ಗಳಿಸಿರಲಿಲ್ಲ. ಅಷ್ಟ್ರಲ್ಲಿ ಟೀಂ ಇಂಡಿಯಾ ಟಾರ್ಗೆಟ್ ರೀಚ್ ಆಗಿತ್ತು. ಇನ್ನು ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಂತೂ 9 ಬಾಲ್ ಎದುರಿಸಿ ಜಸ್ಟ್ 3 ರನ್ ಕಲೆ ಹಾಕಿದ್ರು. ಬಳಿಕ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಇನ್ನು ಯುಎಸ್​ಎ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ 31 ರನ್ ಗಳಿಸಿದ್ರು. ಇನ್ನು ಅಫ್ಘಾನಿಸ್ತಾನದ ಸೂಪರ್ 8 ಪಂದ್ಯದಲ್ಲಿ 7 ಬಾಲ್ ಎದುರಿಸಿ 10 ರನ್ ಗಳಿಸಿದ್ರು. ಇನ್ನು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 34 ರನ್ ಕಲೆ ಹಾಕಿದ್ರು. ಇದೇ ದುಬೆಯವ್ರ ಹೈಯೆಸ್ಟ್ ಸ್ಕೋರ್. ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 22 ಎಸೆತಗಳಲ್ಲಿ 28 ರನ್ ಸಿಡಿದ್ರು. ಆದ್ರೆ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಕದನದಲ್ಲಿ ಡಕ್​ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು. ಈ ಮೂಲಕ ಒಟ್ಟಾರೆ 7 ಪಂದ್ಯಗಳಿಂದ 106 ರನ್ ಕಲೆ ಹಾಕಿದ್ದಾರೆ.

ಐಪಿಎಲ್​ನ ಸೆಕೆಂಡ್ ಆಫ್​ನಲ್ಲೇ ಮಂಕಾಗಿದ್ದ ದುಬೆ ವಿಶ್ವಕಪ್​ನಲ್ಲೂ ಅಬ್ಬರಿಸಿಲ್ಲ. ಆದ್ರೀಗ ಶಿವಂ ದುಬೆಗೆ ಬಿಸಿಸಿಐ ಇನ್ನೊಂದು ಚಾನ್ಸ್ ನೀಡಿದೆ.  ಮುಂಬರುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ದುಬೆಯನ್ನ ಆಯ್ಕೆ ಮಾಡಲಾಗಿದೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದು, ಅವರನ್ನು ತಂಡದಿಂದ ಕೈಬಿಡಲಾಗಿದೆ.ಮ ಹೀಗಾಗಿ ಗಾಯಗೊಂಡಿರುವ ನಿತೀಶ್ ರೆಡ್ಡಿ ಬದಲಿಗೆ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಮಾಡಿದೆ. ಜಿಂಬಾಬ್ವೆ ಸರಣಿಯು ಜುಲೈ 6ರಂದು ಮೊದಲ ಪಂದ್ಯದಿಂದ ಆರಂಭವಾಗಲಿದೆ. ಶುಭ್ಮನ್ ಗಿಲ್‌ಗೆ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಒಟ್ನಲ್ಲಿ ದುಬೆ ಬ್ಯಾಕ್ ಟು ಬ್ಯಾಕ್ ನೀರಸ ಪ್ರದರ್ಶನ ನೀಡ್ತಿದ್ದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ದುಬೆ ಬದಲಿಗೆ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡುವಂತೆ ಮನವಿ ಮಾಡ್ತಿದ್ದಾರೆ. ಹೀಗಾಗಿ ಇನ್ನಾದ್ರೂ ದುಬೆ ಕಳಪೆ ಫಾರ್ಮ್​ನಿಂದ ಹೊರ ಬರ್ತಾರಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *