ವಿಶ್ವಕಪ್‌ನ ಹೀರೋ ಶಮಿ ಮುಂದಿನ ಟಿ-20 ವಿಶ್ವಕಪ್‌ನಲ್ಲಿ ಆಡ್ತಾರಾ? – ಸೆಲೆಕ್ಷನ್ ಕಮಿಟಿಯ ಲೆಕ್ಕಾಚಾರವೇನು?

ವಿಶ್ವಕಪ್‌ನ ಹೀರೋ ಶಮಿ ಮುಂದಿನ ಟಿ-20 ವಿಶ್ವಕಪ್‌ನಲ್ಲಿ ಆಡ್ತಾರಾ? – ಸೆಲೆಕ್ಷನ್ ಕಮಿಟಿಯ ಲೆಕ್ಕಾಚಾರವೇನು?

ವರ್ಲ್ಡ್​​ಕಪ್​ ಮುಗಿದ ಮೇಲೆ ಈಗ ಟೀಂ ಇಂಡಿಯಾ 2024ರಲ್ಲಿ ನಡೆಯೋ ಟಿ-20 ವಿಶ್ವಕಪ್  ಗೆ ತಯಾರಿ ಮಾಡುತ್ತಿದೆ. ಒಂದು ಸ್ಟ್ರಾಂಗ್ ಟಿ-20 ತಂಡವನ್ನ ಕಟ್ಟಲು ಭರದ ಸಿದ್ಧತೆ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸೀರಿಸ್​​ನ್ನು ಭಾರತ ಗೆದ್ದಿದೆ. ಆದರೆ, ಈ ಸೀರಿಸ್​​ನಿಂದ ಸ್ಪಷ್ಟವಾಗಿರೋ ಅಂಶ ಏನಂದರೆ, ಟೀಂ ಇಂಡಿಯಾದ ಬೌಲಿಂಗ್​ ಇನ್ನಷ್ಟು ಶಾರ್ಪ್ ಆಗಲೇಬೇಕಿದೆ. ವಂಡೇ ವರ್ಲ್ಡ್​ಕಪ್​ನಲ್ಲಿ ಬೌಲಿಂಗ್​​ ಡಿಪಾರ್ಟ್​ಮೆಂಟ್​​ ಅತ್ಯಂತ ಸ್ಟ್ರಾಂಗ್ ಆಗಿತ್ತು. ಬೌಲರ್ಸ್​ಗಳೇ ನಿಜವಾದ ಹೀರೋಗಳಾಗಿದ್ರು. ಅದ್ರಲ್ಲೂ ಮೊಹಮ್ಮದ್ ಶಮಿ ಬಗ್ಗೆಯಂತೂ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಆದ್ರೆ ವಿಶ್ವಕಪ್​​ನ ಹೀರೋ ಶಮಿ ಮುಂದಿನ ಟಿ-20 ವರ್ಲ್ಡ್​ಕಪ್​ನಲ್ಲಿ ಆಡ್ತಾರಾ? ಇಲ್ವಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನೋವಿನ ಬದುಕು ನುಂಗಿ ವಿಶ್ವಕಪ್‌ನಲ್ಲಿ ಶಮಿ ಶ್ರೇಷ್ಠ ಸಾಧನೆ -ಟೀಮ್ ಇಂಡಿಯಾ ಗೆಲುವಿನ ರೂವಾರಿ ಶಮಿ

ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಟಿ-20 ಕೆರಿಯರ್ ಬಗ್ಗೆ ಕುತೂಹಲ ಇರುವಾಗಲೇ ಮೊಹಮ್ಮದ್ ಶಮಿ ಕೂಡಾ ಆಡುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಶಮಿ ಕೂಡ ಟೀಂ ಇಂಡಿಯಾ ಪರ ಲಾಸ್ಟ್ ಟಿ-20 ಮ್ಯಾಚ್​​ನ್ನ ಆಡಿರೋದು 2022ರ ವರ್ಲ್ಡ್​ಕಪ್​​ನಲ್ಲೇ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​​ನಲ್ಲಿ ಕೂಡ ಶಮಿ ಆಡುತ್ತಿಲ್ಲ. ಆದರೆ, ಇಂಡಿಯನ್ ಟಿ-20 ಟೀಂನ ಈಗಿನ ಬೌಲಿಂಗ್ ಲೈನ್​ಅಪ್​ ನೋಡಿದಾಗ ಮುಂದಿನ ವರ್ಲ್ಡ್​​ಕಪ್​​ಗೆ ಶಮಿಯಂತಾ ಬೌಲರ್​ ತಂಡಕ್ಕೆ ಅತ್ಯಂತ ಅನಿವಾರ್ಯ ಅಂತಾ ಅನ್ನಿಸುತ್ತಿದೆ. ಶಮಿ ಅಂದಕೂಡಲೇ ಎಲ್ಲರಿಗೂ ನೆನಪಾಗೋದು ವರ್ಲ್ಡ್​​ಕಪ್​ನ ಪರ್ಫಾಮೆನ್ಸ್​. ಈ ಪ್ರದರ್ಶನದ ಆಧಾರದ ಮೇಲೆಯೇ ಶಮಿಯನ್ನ ನೆಕ್ಟ್ಸ್ ಟಿ-20 ವರ್ಲ್ಡ್​ಕಪ್​ ಟೀಂಗೂ ತೆಗೆದುಕೊಳ್ಳೋಕೆ ಅಗೋದೆ ಇಲ್ಲ. ಏಕದಿನ, ಟೆಸ್ಟ್​​ನಲ್ಲಿ ಬೌಲಿಂಗ್ ಮಾಡೋ ರೀತಿಯೇ ಬೇರೆ. ಟಿ-20ಯಲ್ಲಿ ಬೌಲರ್ಸ್​​ಗೆ ಎದುರಾಗೋ ಚಾಲೆಂಜೇ ಬೇರೆ. ಯಾಕಂದ್ರೆ, ಟಿ-20ಯಲ್ಲಿ ಒಬ್ಬ ಬೌಲರ್​​​ಗೆ ಒಂದು ಮ್ಯಾಚ್​​ನಲ್ಲಿ ಬೌಲ್​ ಮಾಡೋಕೆ ಸಾಧ್ಯವಾಗೋದು 4 ಓವರ್‌ಗಳು ಮಾತ್ರ. ಈ ನಾಲ್ಕು ಓವರ್​ಗಳಲ್ಲೇ ಆತ ವಿಕೆಟ್ ತೆಗೀಬೇಕು. ರನ್ ಕೂಡ ಕಂಟ್ರೋಲ್ ಮಾಡಬೇಕು. ಟೀಂ ಇಂಡಿಯಾದಲ್ಲಿ ಈಗ ಇರೋ ಸೀನಿಯರ್ ಬೌಲರ್ಸ್​ಗಳ ಪೈಕಿ ಜಸ್ಪ್ರಿತ್ ಬುಮ್ರಾ ಮಾತ್ರ ಟಿ-20 ಫಾರ್ಮೆಟ್​​ನಲ್ಲಿ ಕ್ಲಿಕ್ ಆಗಿದ್ದಾರೆ. ಟಿ-20ಯಲ್ಲೂ ಎಕ್ಸ್​​ಪರ್ಟ್ ಬೌಲರ್ ಆಗಿದ್ದಾರೆ. ಆದ್ರೆ ಮೊಹಮ್ಮದ್ ಶಮಿ ಇದುವರೆಗೂ ಟಿ-20ಯಲ್ಲಿ ಅಷ್ಟೊಂದು ಎಫೆಕ್ಟಿವ್ ಬೌಲರ್ ಆಗಿಲ್ಲ. ಟಿ-20 ಫಾರ್ಮೆಟ್​ನಲ್ಲಿ ಶಮಿಯ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಅನ್ನೋದರ ವಿವರ ಹೀಗಿದೆ.

  • ಟೀಂ ಇಂಡಿಯಾ ಪರ 23 ಮ್ಯಾಚ್​​ಗಳನ್ನಾಡಿರುವ ಶಮಿ
  • 23 ಪಂದ್ಯಗಳಲ್ಲಿ ಒಟ್ಟು 24 ವಿಕೆಟ್ ಪಡೆದಿರುವ ಶಮಿ
  • ಮೊಹಮ್ಮದ್ ಶಮಿಯ ಬೆಸ್ಟ್ ಸ್ಪೆಲ್ ಅಂದ್ರೆ 3/15
  • ಐಪಿಎಲ್​​ನಲ್ಲಿ 110 ಮ್ಯಾಚ್​ಗಳನ್ನ ಅಡಿರುವ ಶಮಿ
  • 110 ಮ್ಯಾಚ್​​ಗಳಲ್ಲಿ 127 ವಿಕೆಟ್ ಪಡೆದಿರುವ ಶಮಿ
  • ಐಪಿಎಲ್​​ನಲ್ಲಿ ಶಮಿಯ ಬೆಸ್ಟ್ ಸ್ಪೆಲ್ ಅಂದ್ರೆ 4/11

 

ಇದು ಟಿ-20 ಕ್ರಿಕೆಟ್​​ನಲ್ಲಿ ಮೊಹಮ್ಮದ್ ಶಮಿಯ ಟ್ರ್ಯಾಕ್​ ರೆಕಾರ್ಡ್. ಇಂಡಿಯನ್​ ಟಿ-20 ಟೀಮ್​​ನಲ್ಲಿ ಶಮಿಯನ್ನ ಫುಲ್ ಟೈಮ್ ಪ್ಲೇಯರ್​ ಆಗಿ ಪರಿಗಣಿಸಿಲ್ಲ ಅನ್ನೋದಕ್ಕೆ ಅವರು ಆಡಿರೋ ಮ್ಯಾಚ್​ಗಳೇ ಸಾಕ್ಷಿ.

ಹಾಗಿದ್ರೆ ವಂಡೇ ವಿಶ್ವಕಪ್​​ನ ಹೀರೋ ಶಮಿಯನ್ನ ಮುಂದಿನ ಟಿ-20 ವರ್ಲ್ಡ್​​ಕಪ್ ಟೀಂಗೆ ಸೆಲೆಕ್ಟ್ ಮಾಡೋದೆ ಇಲ್ವಾ? ಶಮಿ ಟಿ-20 ಕೆರಿಯರ್ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿಯ ಲೆಕ್ಕಾಚಾರವೇನು ಅನ್ನೋದು ಇಲ್ಲಿರುವ ಇನ್ನೊಂದು ಪ್ರಶ್ನೆ. ಇದಕ್ಕೆ ಉತ್ತರ ಐಪಿಎಲ್​.. ಯೆಸ್.. ಮುಂದಿನ ಐಪಿಎಲ್​​ ಟೂರ್ನಿ ಮೊಹಮ್ಮದ್ ಶಮಿಯ ಟಿ-20 ಕೆರಿಯರ್​​ನ್ನ ನಿರ್ಧರಿಸಲಿದೆ. ಅಮೆರಿಕ ಮತ್ತು ವೆಸ್ಟ್​ಇಂಡೀಸ್​​ನಲ್ಲಿ ನಡೆಯೋ ಟಿ-20 ವಿಶ್ವಕಪ್​ಗೂ ಮುನ್ನ ಐಪಿಎಲ್​​ ಟೂರ್ನಿ ನಡೆಯುತ್ತೆ. ಒಂದು ವೇಳೆ ಐಪಿಎಲ್​ನಲ್ಲಿ ಶಮಿ ಕ್ಲಿಕ್ ಆದ್ರೂ ಅಂದ್ರೆ, ಟಿ-20 ವರ್ಲ್ಡ್​​​ಕಪ್​​ ಸ್ಕ್ವಾಡ್​​ಗೆ ಶಮಿಯನ್ನ ಸೆಲೆಕ್ಟ್ ಮಾಡುವ ಪ್ಲ್ಯಾನ್​ನಲ್ಲಿ ಟೀಂ ಇಂಡಿಯಾ ಸಲೆಕ್ಷನ್ ಕಮಿಟಿ ಇದೆ. ಒಂದು ವೇಳೆ ಐಪಿಎಲ್​​ನಲ್ಲಿ ಶಮಿ ಕಡೆಯಿಂದ ನಿರೀಕ್ಷೆಗೆ ತಕ್ಕ ಪರ್ಫಾಮೆನ್ಸ್ ಬಂದಿಲ್ಲ ಅಂದ್ರೆ ಟಿ-20 ವರ್ಲ್ಡ್​​ಕಪ್​​ಗೆ ಅವರನ್ನ ಪಿಕ್ ಮಾಡೋದು ಅನುಮಾನ.

ಆದ್ರೆ ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಈ ಹಿಂದಿನ ಐಪಿಎಲ್​​ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಟಾಪ್ ವಿಕೆಟ್ ಟೇಕರ್ ಆಗಿದ್ರು. ಗುಜರಾತ್​ ಟೈಟಾನ್ಸ್​​ನಲ್ಲಿರೋ ಶಮಿ ಕಳೆದ ಐಪಿಎಲ್​​ನಲ್ಲಿ 17 ಮ್ಯಾಚ್​ಗಳಲ್ಲಿ ಒಟ್ಟು 28 ವಿಕೆಟ್​​ಗಳನ್ನ ಕಬಳಿಸಿದ್ರು. ಒಟ್ಟು 5 ಬಾರಿ ಒಂದೇ ಮ್ಯಾಚ್​​ನಲ್ಲಿ 3 ವಿಕೆಟ್​​ಗಳನ್ನ ಪಡೆದಿದ್ರು. ಇಡೀ ಟೂರ್ನಿಯಲ್ಲೇ ಶಮಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ರು. ಜೊತೆಗೆ ಅತ್ಯಂತ ಇಕಾನಮಿ ಬೌಲರ್​ ಆಗಿದ್ರು. ಹೀಗಾಗಿ ಮುಂದಿನ ಐಪಿಎಲ್​​ನಲ್ಲೂ ಮೊಹಮ್ಮದ್ ಶಮಿಯಿಂದ ಇದೇ ರೀತಿಯ ಪರ್ಫಾಮೆನ್ಸ್ ಬಂದ್ರೆ ಟಿ-20 ವರ್ಲ್ಡ್​​ಕಪ್​ನಲ್ಲೂ ಆಡಬಹುದು. ಹೀಗಾಗಿ ಐಪಿಎಲ್​ ಅಕ್ಷರಶ: ಶಮಿಯ ಟಿ-20 ಕೆರಿಯರ್​ನ್ನ ನಿರ್ಧರಿಸೋದ್ರಲ್ಲಿ ಡೌಟೇ ಇಲ್ಲ.

ಇನ್ನು ಸದ್ಯಕ್ಕಂತೂ ಮೊಹಮ್ಮದ್ ಟೆಸ್ಟ್​ ಕ್ರಿಕೆಟ್​​ನತ್ತ ಫೋಕಸ್ ಮಾಡಿದ್ದಾರೆ. ವೈಟ್​ ಬಾಲ್​​ ಕ್ರಿಕೆಟ್​​ನಲ್ಲಿ ಸ್ವಲ್ಪ ಟೈಮ್ ದೂರ ಉಳಿಯೋಕೆ ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸೀರಿಸ್​ನಲ್ಲಿ ಮಾತ್ರ ಶಮಿ ಆಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಒಟ್ಟು 7 ಪ್ರಮುಖ ಟೆಸ್ಟ್​ ಮ್ಯಾಚ್​ಗಳನ್ನ ಆಡಲಿದೆ. ಇಂಗ್ಲೆಂಡ್ ವಿರುದ್ಧ ಒಟ್ಟು 5 ಟೆಸ್ಟ್​ ಮ್ಯಾಚ್​ಗಳು ನಡೆಯಲಿದೆ. ಹೀಗಾಘಿ ಟೆಸ್ಟ್​ ಸೀರಿಸ್​ಗಳನ್ನ ಆಡೋದೆ ಶಮಿಯ ಮೇನ್ ಫೋಕಸ್ ಆಗಿದೆ. ಇವೆಲ್ಲದ್ರ ಮಧ್ಯೆ ಮೊಹಮ್ಮದ್ ಶಮಿಯ ಕಾಲಿಗೆ ಇಂಜ್ಯೂರಿಯಾಗಿದ್ದು, ಸದ್ಯ ಟ್ರೀಟ್​ಮೆಂಟ್ ಪಡೀತಾ ಇದ್ದಾರೆ. ಒಂದು ವೇಳೆ ಕಂಪ್ಲೀಟ್ ಫಿಟ್ ಆದ್ರು ಅಂದ್ರೆ ಮಾತ್ರ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸೀರಿಸ್​ನಲ್ಲಿ ಆಡ್ತಾರೆ. ಇಲ್ಲಾಂದ್ರೆ ಅದನ್ನೂ ಮಿಸ್ ಮಾಡಿಕೊಳ್ಳಬಹುದು. ಅಂತೂ ಟೀಂ ಇಂಡಿಯಾದ ಮೂವರು ಸೀನಿಯರ್​ ಕ್ರಿಕೆಟರ್ಸ್​ಗಳ ಟಿ-20 ಕೆರಿಯರ್​ ಬಗ್ಗೆ ಈಗ ಸಾಕಷ್ಟು ಸುದ್ದಿಗಳು ಹರಿದಾಡ್ತಾ ಇವೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ.. ಈ ಮೂವರು ಕೂಡ ವಂಡೇ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾದ ಮೂರು ಕಂಬಗಳಂತಿದ್ರು. ಆದ್ರೀಗ ಟಿ-20 ವರ್ಲ್ಡ್​​ಕಪ್​ನಲ್ಲೂ ಆಡ್ತಾರಾ ಅನ್ನೋದೆ ಈಗಿರುವ ಪ್ರಶ್ನೆ.

​​

Sulekha