ಶಮಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಝಾ ಮದುವೆಯಾಗ್ತಾರಾ..? – ಅಭಿಮಾನಿಗಳ ಕಲ್ಪನೆಗೆ ಬಂತು ರೆಕ್ಕೆಪುಕ್ಕ..!

ಶಮಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಝಾ ಮದುವೆಯಾಗ್ತಾರಾ..? – ಅಭಿಮಾನಿಗಳ ಕಲ್ಪನೆಗೆ ಬಂತು ರೆಕ್ಕೆಪುಕ್ಕ..!

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಝಾ ಮದುವೆಯಾಗ್ತಾರಾ..? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಳ್ಳೋಕೆ ಕಾರಣ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು. ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ​ಸಾನಿಯಾ ಮಿರ್ಜಾ ದಾಂಪತ್ಯ ಜೀವನದಿಂದ ಬೇರ್ಪಟ್ಟಿದ್ದಾರೆ. ಬಳಿಕ ಶೊಯೆಬ್ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದರು. ಈ ಸುದ್ದಿ ಬೆನ್ನಲ್ಲೇ  ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಸಾನಿಯಾ ಮಿರ್ಝಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಸುದ್ದಿ ಬೆನ್ನಲ್ಲೇ ಶಾಕಿಂಗ್ ನ್ಯೂಸ್ – ಪಾಕಿಸ್ತಾನಿ ನಟಿ ಜೊತೆ ಶೋಯೆಬ್ ಮಲಿಕ್ ಮದುವೆ

ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002ರಲ್ಲಿ ಆಯೇಷಾ ಸಿದ್ದಿಕಿ ಎಂಬವರೊಂದಿಗೆ ಮಲಿಕ್ ವಿವಾಹವಾಗಿದ್ದರು. ನಂತರ ಶೋಯೆಬ್ ಮಲಿಕ್ 2010 ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾನಿಯಾಗೂ ವಿಚ್ಛೇದನ ನೀಡಿದ್ದಾರೆ ಶೊಯಿಬ್ ಮಲಿಕ್. ಇತ್ತೀಚೆಗೆ ಪಾಕ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ.

ಮತ್ತೊಂದೆಡೆ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್​ನಿಂದ ದೂರವಾಗಿದ್ದಾರೆ.  ಹೀಗಾಗಿ ಮೊಹಮ್ಮದ್ ಶಮಿ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಶೊಯೆಬ್​ನಿಂದ ದೂರವಾಗಿರುವ ಸಾನಿಯಾ ಹೆಸರು ಶಮಿ ಜೊತೆ ತಳುಕು ಹಾಕಿಕೊಂಡಿದೆ. ಆದ್ರೆ ಇಬ್ಬರು ಆಟಗಾರರು ಮಾತ್ರ ಈ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಜೊತೆಗೆ ಸಾನಿಯಾ ಮಿರ್ಜಾರಿಗೆ ಮಗನಿದ್ದಾನೆ. ಸಿಂಗಲ್ ಪೇರೆಂಟ್ ಆಗಿರುವ ಸಾನಿಯಾ ಮಿರ್ಜಾ ಮಗನ ಭವಿಷ್ಯದ ಬಗ್ಗೆ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರಂತೆ.

 

Sulekha