ಸಚಿನ್ 3 ರೆಕಾರ್ಡ್ಸ್ ಬ್ರೇಕ್ ಆಗಲ್ವಾ? – ರನ್, ಮ್ಯಾಚ್, ಸೆಂಚುರಿ.. ಸವಾಲುಗಳೆಷ್ಟು?
ಕೊಹ್ಲಿಗೂ ಸಾಧ್ಯವಾಗದ ದಾಖಲೆಗಳಿವು!

ದಾಖಲೆ ಮೇಲೆ ದಾಖಲೆ. ಇತಿಹಾಸದ ಮೇಲೆ ಇತಿಹಾಸ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸ್ಟೇಡಿಯಮ್ಗೆ ಇಳಿದ್ರು ಅಂದ್ರೆ ಅಲ್ಲೊಂದು ರೆಕಾರ್ಡ್ ಪಕ್ಕಾ ಇರ್ತಿತ್ತು. ಕ್ರಿಕೆಟ್ ಇತಿಹಾಸದಲ್ಲೇ ಹೈಯೆಸ್ಟ್ ರನ್. ಸೆಂಚುರಿಗಳ ಸೆಂಚುರಿ. ಹೀಗೆ ಹತ್ತು ಹಲವು ದಾಖಲೆಗಳು ಸಚಿನ್ ಹೆಸರಿನಲ್ಲಿವೆ. ಭಾರತೀಯರ ಪಾಲಿಗೆ ಕ್ರಿಕೆಟ್ ದೇವರೇ ಆಗಿರೋ ಸಚಿನ್ ತೆಂಡೂಲ್ಕರ್ ಅವ್ರ ದಾಖಲೆಗಳನ್ನ ಬ್ರೇಕ್ ಮಾಡೋಕೆ ರನ್ ಮಷಿನ್ ವಿರಾಟ್ ಕೊಹ್ಲಿಯಿಂದ ಮಾತ್ರವೇ ಸಾಧ್ಯ ಅಂತಾ ಕ್ರಿಕೆಟ್ ಪಂಡಿತರೂ ಕೂಡ ಭವಿಷ್ಯ ನುಡಿದಿದ್ರು. ಆದ್ರೆ ಸಚಿನ್ ಬರೆದಿರೋ ಆ ಮೂರು ದಾಖಲೆಗಳನ್ನ ಕೊಹ್ಲಿಯಿಂದಲೂ ಕೂಡ ಅಳಿಸೋಕೆ ಆಗಲ್ಲ ಎನ್ನಲಾಗ್ತಿದೆ. ಅಷ್ಟಕ್ಕೂ ಯಾವು ಆ ರೆಕಾರ್ಡ್ಸ್? ಯಾಕೆ ಬ್ರೇಕ್ ಮಾಡೋಕೆ ಆಗಲ್ಲ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ
ರೆಕಾರ್ಡ್ಸ್ ಇರೋದೇ ಬ್ರೇಕ್ ಮಾಡೋಕೆ ಅನ್ನೋ ಮಾತಿದೆ. ಅದ್ರಲ್ಲೂ ಕ್ರಿಕೆಟ್ ಲೋಕದಲ್ಲಿ ಯಾವ ದಾಖಲೆ ಯಾವ ಮ್ಯಾಚ್ನಲ್ಲಿ ಬ್ರೇಕ್ ಆಗುತ್ತೋ ಹೇಳೋಕೆ ಆಗಲ್ಲ. ಬಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರೋ ಕೆಲ ಅಂಕಿ ಅಂಶಗಳನ್ನ ನೋಡಿದ್ರೆ ಅಚ್ಚರಿ ಅನ್ಸುತ್ತೆ. ಈ ಪೈಕಿ ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ದಾಖಲೆಗಳೂ ಕೂಡ ಹಲವಿವೆ. ಬೃಹತ್ ಬೆಟ್ಟದಂತಿರೋ ಆ ರೆಕಾರ್ಡ್ಸ್ ನ ಮೀರಿಸೋದಿರಲು ಹತ್ತಿರಕ್ಕೆ ಹೋಗೋದೂ ಕೂಡ ಕಷ್ಟವಿದೆ. ಈ ಹಿಂದೆ ತೆಂಡೂಲ್ಕರ್ ನನ್ನ ದಾಖಲೆಗಳನ್ನು ಪುಡಿಗಟ್ಟಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಗೆ ಸಾಧ್ಯ ಎಂದು ಹೇಳಿದ್ದರು. ಆದ್ರೆ ಈಗ ಈ ಮೂರು ದಾಖಲೆಗಳನ್ನ ಅಳಿಸೋದು ಅವ್ರಿಂದಲೂ ಅಸಾಧ್ಯ ಎನ್ನಲಾಗ್ತಿದೆ.
3 ದಾಖಲೆ ಮುರಿಯೋಕೆ ಆಗಲ್ವಾ?
ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿದ್ದಾರೆ. ಈ ದಾಖಲೆ ಬ್ರೇಕ್ ಮಾಡ್ಬೇಕು ಅಂದ್ರೆ ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು. ಕೊಹ್ಲಿ ಟೆಸ್ಟ್ನಲ್ಲಿ 8,848 ರನ್ ಗಳಿಸಿದ್ದಾರೆ. ಕೊಹ್ಲಿಗೆ 35 ವರ್ಷ ವಯಸ್ಸಾಗಿದ್ದು, ಹೆಚ್ಚೆಂದರೆ ಇನ್ನು ಮೂರ್ನಾಲ್ಕು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರೆಯಬಹುದು. ಆದರೆ ಈ ಅವಧಿಯಲ್ಲಿ ದಾಖಲೆ ಮುರಿಯುವಷ್ಟು ಟೆಸ್ಟ್ ಪಂದ್ಯಗಳು ಭಾರತ ಆಡುವುದಿಲ್ಲ. ಸಚಿನ್ ದಾಖಲೆ ಮುರಿಯಬೇಕಾದರೆ ವೇಗದ ಪ್ರದರ್ಶನ ಅಗತ್ಯ ಇದೆ. ಈ ಪೈಕಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ 12,131 ರನ್ ಗಳಿಸಿದ್ದಾರೆ. ಜೋ ರೂಟ್ ಸಚಿನ್ ದಾಖಲೆ ತಲುಪಲು ಇನ್ನೂ 3,790 ರನ್‌ಗಳ ದೂರದಲ್ಲಿದ್ದಾರೆ. ಇದನ್ನು ಪೂರ್ಣಗೊಳಿಸಲು ಕನಿಷ್ಠ 40 ಟೆಸ್ಟ್ ಪಂದ್ಯಗಳನ್ನು ಅವರು ಆಡಬೇಕು. ಇನ್ನು ಎರಡನೇ ದಾಖಲೆ ಅಂದ್ರರೆ ಸಚಿನ್ ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿ 533 ಪಂದ್ಯಗಳನ್ನು ಆಡಿದ್ದಾರೆ. ಅಂದರೆ ಕೊಹ್ಲಿ 133 ಪಂದ್ಯಗಳಷ್ಟು ಹಿಂದಿದ್ದಾರೆ. ಇತ್ತೀಚೆಗೆ ಟಿ20 ಸ್ವರೂಪಕ್ಕೆ ವಿದಾಯ ಹೇಳಿರುವ ಅವರು ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಹಾಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಸಚಿನ್ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗೇ ಮೂರನೇ ದಾಖಲೆ ಅಂದ್ರೆ ಅತ್ಯಧಿಕ ಟೆಸ್ಟ್ ಪಂದ್ಯಗಳು. 200 ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ರೆಡ್ ಬಾಲ್ ಮಾದರಿಯಲ್ಲಿ ಕೊಹ್ಲಿ 113 ಪಂದ್ಯಗಳನ್ನು ಆಡಿದ್ದಾರೆ. 2027ರ ಜುಲೈವರೆಗೆ ಭಾರತ ಗರಿಷ್ಠ 29 ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವುದರಿಂದ 36ರ ಹರೆಯದ ಕೊಹ್ಲಿ ಸಚಿನ್ ಅವರ ಈ ದಾಖಲೆ ಮುರಿಯುವು ತೀರಾ ಕಷ್ಟವೇ.
ಟೀಂ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಕೆಲವು ದಾಖಲೆಗಳಂತೂ ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತು. ಸೋ ದಾಖಲೆ ಬ್ರೇಕ್ ಮಾಡೋ ಲಿಸ್ಟ್ನಲ್ಲಿ ಮುಂಚೂಣಿಯಲ್ಲಿರೋ ರೋಹಿತ್ ಶರ್ಮಾ ಮತ್ತು ವಿರಾಟ್ರಿಂದಲೂ ಮುರಿಯೋಕೆ ಆಗಲ್ಲ. ಭವಿಷ್ಯದಲ್ಲೂ ಕೂಡ ಸಚಿನ್ರಂಥ ಆಟಗಾರ ಬರ್ತಾರೆ ಅನ್ನೋದೂ ಕೂಡ ಡೌಟೇ.