ಮನವಿ ಮಾಡಿದರೆ ಮಾತ್ರ ರನೌಟ್ ತೀರ್ಪು ಕೊಡೋದಾ? – ಅಂಪೈರ್ ತೀರ್ಪಿಗೆ ಆಸ್ಟ್ರೇಲಿಯಾ ಆಟಗಾರರ ಆಕ್ರೋಶ

ಮನವಿ ಮಾಡಿದರೆ ಮಾತ್ರ ರನೌಟ್ ತೀರ್ಪು ಕೊಡೋದಾ? – ಅಂಪೈರ್ ತೀರ್ಪಿಗೆ ಆಸ್ಟ್ರೇಲಿಯಾ ಆಟಗಾರರ ಆಕ್ರೋಶ

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟಿ20 ಪಂದ್ಯದಲ್ಲಿ ಅಂಪೈರ್ ಕೊಟ್ಟಿರುವ ಅನಿರೀಕ್ಷಿತ ತೀರ್ಪು ಚರ್ಚೆಗೆ ಕಾರಣವಾಗಿದೆ. ಅಲ್ಝಾರಿ ಜೋಸೆಫ್ ಕ್ಲಿಯರ್ ರನೌಟ್ ಆಗಿದ್ದರೂ ಮನವಿ ಮಾಡಲಿಲ್ಲ ಎಂಬ ಕಾರಣ ನೀಡಿದ ಅಂಪೈರ್ ನಾಟೌಟ್ ನೀಡಿದ್ದಾರೆ.

ಇದನ್ನೂ ಓದಿ: ಅಥ್ಲೆಟಿಕ್ಸ್ ಅಂಗಳದಲ್ಲಿ ಮೆರೆದ ರೈಸಿಂಗ್ ಸ್ಟಾರ್ ಇನ್ನಿಲ್ಲ – ಅಪಘಾತಕ್ಕೆ ಬಲಿಯಾದ ಕೆಲ್ವಿನ್ ಕಿಪ್ಟಮ್

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ 2ನೇ ಟಿ20 ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 190 ರನ್‌ಗಳಿಗೆ ಆಲೌಟ್ ಆಗಬೇಕಿತ್ತು. ಆದರೆ ಅಂಪೈರ್ ನೀಡಿದ ವಿಚಿತ್ರ ತೀರ್ಪಿನಿಂದಾಗಿ ಅಲ್ಝಾರಿ ಜೋಸೆಫ್ ಅಜೇಯರಾಗಿ ಉಳಿದರು. ಪಂದ್ಯದ 19ನೇ ಓವರ್‌ನ 2ನೇ ಎಸೆತವನ್ನು ಅಲ್ಝಾರಿ ಜೋಸೆಫ್ ಕವರ್‌ನತ್ತ ಬಾರಿಸಿ ಓಡಿದರು. ಅಲ್ಲೇ ಫೀಲ್ಡಿಂಗ್‌ನಲ್ಲಿದ್ದ ನಾಯಕ ಮಿಚೆಲ್ ಮಾರ್ಷ್ ಚೆಂಡನ್ನು ಬೌಲರ್‌ಗೆ ಎಸೆದರು. ತಕ್ಷಣವೇ ಸೆನ್ಪರ್ ಜಾನ್ಸನ್ ಚೆಂಡನ್ನು ವಿಕೆಟ್‌ಗೆ ಮುಟ್ಟಿಸಿದ್ದಾರೆ. ಅಲ್ಲದೆ ರನೌಟ್ ಆಗಿರುವುದು ಕನ್ಫರ್ಮ್ ಆಗಿದ್ದ ಕಾರಣ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದ್ದರು. ಅತ್ತ ಬಿಗ್ ಸ್ಕ್ರೀನ್ನಲ್ಲೂ ರನೌಟ್ ಆಗಿರುವ ರೀಪ್ಲೇ ತೋರಿಸಲಾಗಿತ್ತು. ಆದರೆ ಇತ್ತ ಅಂಪೈರ್ ಪಂದ್ಯ ಮುಂದುವರೆಸುವಂತೆ ಸೂಚಿಸಿದ್ದರು. ಇದಕ್ಕೆ ಮುಖ್ಯ ಕಾರಣ ಆಟಗಾರರು ರನೌಟ್ ತೀರ್ಪಿಗೆ ಮನವಿ ಮಾಡದಿರುವುದು.

ಆಟಗಾರರು ಮನವಿ ಸಲ್ಲಿಸಿದರೆ ಮಾತ್ರ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ಗೆ ವಿಡಿಯೋ ಪರಿಶೀಲಿಸುವಂತೆ ಸೂಚಿಸುತ್ತಾರೆ. ಆದರೆ ಆಸ್ಟ್ರೇಲಿಯಾ ಆಟಗಾರರು ಯಾವುದೇ ಮನವಿ ಮಾಡಿರಲಿಲ್ಲ. ಇತ್ತ ಮನವಿ ಸಲ್ಲಿಸದ ಕಾರಣ ಫೀಲ್ಡ್ ಅಂಪೈರ್ ನೇರವಾಗಿ ಔಟ್ ಎಂದು ತೀರ್ಪು ನೀಡಿರಲಿಲ್ಲ. ಹಾಗಾಗಿ ನಿರ್ದಿಷ್ಟ ಸಮಯ ಮುಗಿಯುತ್ತಿದ್ದಂತೆ ಪಂದ್ಯವನ್ನು ಮುಂದುವರೆಸಲು ಸೂಚಿಸಲಾಯಿತು. ಇದರ ನಡುವೆ ಬಿಗ್ ಸ್ಕ್ರೀನ್ನಲ್ಲಿ ರನೌಟ್ ಆಗಿರುವುದನ್ನು ತೋರಿಸುತ್ತಿದ್ದಂತೆ ಆಸ್ಟ್ರೇಲಿಯಾ ಆಟಗಾರರು ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇದಾಗ್ಯೂ ಅಂಪೈರ್ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಇದೀಗ ಅಂಪೈರ್ ತೀರ್ಪಿನ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

Sulekha