ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಗುಡ್ ಬೈ ಹೇಳ್ತಾರಾ? – ಕೋಚ್ ವಿರುದ್ಧ ರೊಚ್ಚಿಗೆದ್ದ ರಿತಿಕಾ!

ರೋಹಿತ್ ಶರ್ಮಾ VS ಮುಂಬೈ ಇಂಡಿಯನ್ಸ್.. ಟೀಂ ಇಂಡಿಯಾದ ಕ್ಯಾಪ್ಟನ್ ಮತ್ತು ಅಂಬಾನಿಗಳ ಫ್ರಾಂಚೈಸಿ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಲೇಟೆಸ್ಟ್ ಬೆಳವಣಿಗೆಗಳನ್ನ ನೋಡಿದ್ರೆ ರೋಹಿತ್ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡೋದು ಅನುಮಾನವಾಗಿದೆ. ಮೊದಲಿಗೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಿದ್ರು. ಬಳಿಕ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ರು. ತಮ್ಮನ್ನ ಕ್ಯಾಪ್ಟನ್ಸಿಯಿಂದ ರಿಪ್ಲೇಸ್ ಮಾಡಿದ ಬಳಿಕ ರೋಹಿತ್ ಶರ್ಮಾ ಇದುವರೆಗೂ ಆ ಬಗ್ಗೆ ಒಂದೇ ಒಂದು ಸ್ಟೇಟ್ಮೆಂಟ್ ಕೊಟ್ಟಿಲ್ಲ. ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ. ಹಾಗಂತಾ ರೋಹಿತ್ ಪತ್ನಿ ಏನೂ ಸುಮ್ನಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕ್ರಿಪ್ಟಿಕ್ ಪೋಸ್ಟ್ಗಳ ಮೂಲಕವೇ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಟಾಂಗ್ ಕೊಡ್ತಾನೆ ಇದ್ದಾರೆ. ಆದ್ರೀಗ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿಸಿರೋ ವಿಚಾರವಾಗಿ ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಮಹತ್ವದ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ರೋಹಿತ್ರನ್ನ ಕ್ಯಾಪ್ಟನ್ಸಿಯಿಂದ ಕೆಳಕ್ಕಿಳಿಸೋಕೆ ಕಾರಣ ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಟೀಮ್‌ಗೆ ಇಂಜುರಿ ಶಾಕ್ – ಇಬ್ಬರು ಔಟ್, ಸ್ಟಾರ್ ಬೌಲರ್ ಎಂಟ್ರಿ?
ಮಾರ್ಚ್ 22ರಿಂದ ಐಪಿಎಲ್ ಶುರುವಾಗ್ತಿದೆ. ಈಗ ಎಲ್ಲರ ಕ್ವಶ್ಚನ್ ಇರೋದು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ನಲ್ಲಿ ಆಡ್ತಾರಾ? ಇಲ್ವಾ? ಅನ್ನೋದು. ಯಾಕಂದ್ರೆ ಐಪಿಎಲ್ ಆರಂಭವಾಗೋದ್ರೊಳಗೆ ಏನು ಬೇಕಾದ್ರೂ ಡೆವಲಪ್ಮೆಂಟ್ಗಳಾಗುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರಿಲೇಶನ್ಶಿಪ್ ದಿನಕಳೆದಂತೆ ಇನ್ನಷ್ಟು ಹಳ್ಳ ಹಿಡೀತಾ ಇದೆ. ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗೆ ಇಳಿಸೋಕೆ ನಿಜವಾದ ಕಾರಣ ಏನು ಅನ್ನೋ ಬಗ್ಗೆ ಮುಂಬೈ ಇಂಡಿಯನ್ಸ್ ಫುಲ್ ಕ್ಲ್ಯಾರಿಟಿ ಅಂತೂ ಕೊಟ್ಟಿರಲಿಲ್ಲ. ಆದ್ರೂ ಎಂಐ ಕೋಚ್ ಮಾರ್ಕ್ ಬೌಚರ್ ಈ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಶರ್ಮಾರನ್ನ ರಿಪ್ಲೇಸ್ ಮಾಡೋದು ಪ್ಯೂರ್ಲಿ ಕ್ರಿಕೆಟಿಂಗ್ ಡಿಸೀಶನ್. ಹಾರ್ದಿಕ್ ಪಾಂಡ್ಯಾರನ್ನ ಟೀಮ್‌ಗೆ ಮರಳಿ ಕರೆತರಬೇಕು ಅನ್ನೋ ಉದ್ದೇಶ ನಮಗಿತ್ತು. ಇದು ಬದಲಾವಣೆಯ ಸಮಯ. ಭಾರತದಲ್ಲಿ ತುಂಬಾ ಜನ ಅರ್ಥಮಾಡಿಕೊಳ್ಳೋದಿಲ್ಲ. ಜನರು ಬೇಗನೆ ಎಮೋಷನ್ಗೆ ಒಳಗಾಗ್ತಾರೆ. ಎಲ್ಲವನ್ನೂ ಎಮೋಷನ್ನಲ್ಲೇ ತಗೊಳ್ತಾರೆ. ಆದ್ರೆ ಇಂಥಾ ಡಿಶೀಶನ್ಗಳನ್ನ ತೆಗೆದುಕೊಳ್ಳೋವಾಗ ಎಮೋಷನ್ನ್ನ ಸ್ವಲ್ಪ ಸೈಡಿಗಿಡಬೇಕು ಅಂತಾ ಮಾರ್ಕ್ ಬೌಚರ್ ಹೇಳಿದ್ದಾರೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಕಳೆದ ಕೆಲ ಸೀಸನ್ಗಳಲ್ಲಿ ಸ್ಕೋರ್ ಮಾಡಿಲ್ಲ. ಹೀಗಾಗಿ ರೋಹಿತ್ ಶರ್ಮಾ ಮೇಲೆ ಒಂದಷ್ಟು ಜವಾಬ್ದಾರಿಗಳಿವೆ. ತಮ್ಮ ಬ್ಯಾಟಿಂಗ್ನ್ನ ಎಂಜಾಯ್ ಮಾಡಬೇಕಿದೆ ಅಂತಾ ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.
ಇಲ್ಲಿ ಮಾರ್ಕ್ ಬೌಚರ್ ಹೇಳಿರೋದು ನೋಡಿದ್ರೆ ಕ್ಯಾಪ್ಟನ್ಸಿಯಿಂದಾಗಿಯೇ ರೋಹಿತ್ ಶರ್ಮಾ ಇತ್ತೀಚಿನ ಐಪಿಎಲ್ ಟೂರ್ನಿಗಳಲ್ಲಿ ಸ್ಕೋರ್ ಮಾಡಿಲ್ಲ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಬಟ್ ಕ್ಯಾಪ್ಟನ್ಸಿ ಅನ್ನೋದು ಯಾವತ್ತಿಗೂ ರೋಹಿತ್ ಬ್ಯಾಟಿಂಗ್ ಮೇಲೆ ನೆಗೆಟಿವ್ ಎಫೆಕ್ಟ್ ಆಗಿಯೇ ಇಲ್ಲ. ಈಗ ಕ್ಯಾಪ್ಟನ್ಸಿಯಿಂದ ಕೆಳಕ್ಕಿಳಿಸಿದ ಮಾತ್ರಕ್ಕೆ ರೋಹಿತ್ ಐಪಿಎಲ್ನಲ್ಲಿ ಸ್ಕೋರ್ ಮಾಡಬೇಕು ಅಂತಾನೆ ಏನಿಲ್ಲ. ಅಫ್ಕೋಸ್ ಕೆಲ ಪ್ಲೇಯರ್ಸ್ಗಳ ಮೇಲೆ ಕ್ಯಾಪ್ಟನ್ಸಿ ಅನ್ನೋದು ಅವರ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗುತ್ತೆ. ಒಂದೋ ನೆಗೆಟಿವ್, ಇಲ್ಲಾ ಪಾಸಿಟಿವ್ ರೀತಿಯಲ್ಲಿ ಪರಿಣಾಮ ಬೀರುತ್ತೆ. ಬಟ್ ಕ್ಯಾಪ್ಟನ್ಸಿ ಅನ್ನೋದು ರೋಹಿತ್ ಶರ್ಮಾಗಂತೂ ಯಾವುದೇ ರೀತಿಯಲ್ಲೂ ನೆಗೆಟಿವ್ ಆಗಿಯಂತೂ ಎಫೆಕ್ಟ್ ಆಗಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ನೀಡಿರೋ ರೀಸನ್ನಲ್ಲೇ ಕ್ಲ್ಯಾರಿಟಿ ಇಲ್ಲ ಅಂತಾನೆ ಹೇಳ್ಬಹುದು.
ಇದು ಒಂದು ವಿಚಾರ, ಇಲ್ಲಿ ಇನ್ನೊಂದು ಸಂಗತಿಯನ್ನ ಕೂಡ ಗಮನಿಸಲೇಬೇಕು. ಹಾರ್ದಿಕ್ ಪಾಂಡ್ಯಾ ಏನೂ ಸುಮ್ನೆ ಅಂತೂ ಮುಂಬೈ ಇಂಡಿಯನ್ಸ್‌ಗೆ ಕಮ್ಬ್ಯಾಕ್ ಮಾಡಿಲ್ಲ. ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ರನ್ನ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಅಪ್ರೋಚ್ ಮಾಡಿದಾಗ ಹಾರ್ದಿಕ್ ಕೂಡ ಡಿಮ್ಯಾಂಡ್ ಇಟ್ಟಿದ್ರು. ಕ್ಯಾಪ್ಟನ್ ಮಾಡಿದ್ರೆ ಮಾತ್ರ ಎಂಐ ಜಾಯಿನ್ ಆಗೋದಾಗಿ ಹಾರ್ದಿಕ್ ಪಾಂಡ್ಯಾ ಹೇಳಿದ್ರಂತೆ. ಈ ಡೀಲ್ ಮೇಲೆಯೇ ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್‌ಗೆ ಬಂದಿರೋದು. ಹಾರ್ದಿಕ್ ಈ ಡಿಮ್ಯಾಂಡ್ ಇಟ್ಟಿರೋದು ಕೂಡ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸೋಕೆ ಒಂದು ಕಾರಣವಾಯ್ತು.
ಮಾರ್ಕ್ ಬೌಚರ್ ರೋಹಿತ್ ಶರ್ಮಾ ಪರ್ಫಾಮೆನ್ಸ್ ಬಗ್ಗೆ ಪ್ರಶ್ನೆಯೆತ್ತಿದ್ರೂ ಟೀಂ ಇಂಡಿಯಾ ಕ್ಯಾಪ್ಟನ್ ಈ ಬಗ್ಗೆ ಏನೂ ರಿಯಾಕ್ಟ್ ಮಾಡಿಲ್ಲ. ಬಟ್ ರೋಹಿತ್ ಪತ್ನಿ ರಿತಿಕಾ ಮಾತ್ರ ಮಾರ್ಕ್ ಬೌಚರ್ ವಿರುದ್ಧ ಗರಂ ಆಗಿರೋದಂತೂ ನಿಜ. ಸ್ಮ್ಯಾಶ್ ಸ್ಪೋರ್ಟ್ಸ್ ಅನ್ನೋ ಚಾನೆಲ್ನಲ್ಲಿ ಮಾರ್ಕ್ ಬೌಚರ್ ನೀಡಿದ ಸ್ಟೇಟ್ಮೆಂಟ್ನ ವಿಡಿಯೋವನ್ನ ಅಪ್ಲೋಡ್ ಮಾಡಲಾಗಿತ್ತು. ಇದಕ್ಕೆ ಸೋ ಮೆನಿ ಥಿಂಗ್ಸ್ ರಾಂಗ್ ವಿತ್ ದಿಸ್ ಅಂತಾ ರಿತಿಕಾ ಕಾಮೆಂಟ್ ಮಾಡಿದ್ದಾರೆ.
ಅಂತೂ ವನ್ ಫ್ಯಾಮಿಲಿ ಅಂತಾ ಕರೆಸಿಕೊಳ್ಳುವ ಮುಂಬೈ ಇಂಡಿಯನ್ಸ್ ಈಗ ಒಡೆದು ಹೋಗಿರೋದಂತೂ ನಿಜ. ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡಿರೋದಕ್ಕೆ ಈಗಾಗ್ಲೇ ಮುಂಬೈ ಇಂಡಿಯನ್ಸ್ನ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರಿತ್ ಬುಮ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಟೀಮ್ನಲ್ಲಿ ಆಲ್ಮೋಸ್ಟ್ ಯಾರಿಗೂ ಕೂಡ ಪಾಂಡ್ಯಾ ಕ್ಯಾಪ್ಟನ್ ಆಗಿರೋದು ಸಮಾಧಾನ ಇಲ್ಲ. ಇನ್ನು ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಪರವೇ ಆಡ್ತಾರೆ ಅಂತಾನೂ ಹೇಳೋಕಾಗೋದಿಲ್ಲ. ಐಪಿಎಲ್ ಆರಂಭವಾಗೋದ್ರೊಳಗೆ ಏನು ಬೇಕಾದ್ರೂ ಚೇಂಜೆಸ್ಗಳಾಗಬಹುದು. ಯಾಕಂದ್ರೆ ಐಪಿಎಲ್ ಆರಂಭವಾಗೋ ಒಂದು ವಾರದವರೆಗೂ ಟ್ರೇಡಿಂಗ್ಗೆ ಅವಕಾಶ ಇದೆ. ಈಗಾಗ್ಲೇ ರೋಹಿತ್ ಶರ್ಮಾ ಮೇಲೆ ಕೆಲ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅದ್ರಲ್ಲೂ ದೆಹಲಿ ಕ್ಯಾಪಿಟಲ್ಸ್ ಅಂತೂ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ ಮಾಡೋಕೆ ರೆಡಿಯಿದೆ. ಮತ್ತೊಂದೆಡೆ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಈ ಬಾರಿ ಕೊನೆಯ ಟೂರ್ನಿ ಆಡ್ಬಹುದು. NEXT ಸೀಸನ್ಗೆ ಸಿಎಸ್ಕೆಗೂ ಹೊಸ ಕ್ಯಾಪ್ಟನ್ ನೇಮಕವಾಗಬಹುದು. ಹೀಗಾಗಿ ಮುಂದಿನ ಟೂರ್ನಿ ವೇಳೆಗೆ ರೋಹಿತ್ ಚೆನ್ನೈ ಸೂಪರ್ ಕಿಂಗ್ಸ್ಗೆ ಜಂಪ್ ಆದ್ರೂ ಆಶ್ಚರ್ಯ. ಒಂದು ವೇಳೆ ರೋಹಿತ್ ಮುಂಬೈ ಇಂಡಿಯನ್ಸ್ನಲ್ಲೇ ಆಡ್ತಾರೆ ಅಂದ್ರೆ ಇದು ಎಂಐ ಪರ ಕೊನೆಯ ಟೂರ್ನಿಯಾಗಬಹುದು.
2025ರ ಟೂರ್ನಿ ವೇಳೆಗಂತೂ ರೋಹಿತ್ ಮುಂಬೈನಲ್ಲಿರೋದು ಡೌಟ್. ಒಂದೋ ಐಪಿಎಲ್ನಿಂದ ರಿಟೈರ್ಡ್ ಆಗಬಹುದು. ಇಲ್ಲಾ ಬೇರೆ ಫ್ರಾಂಚೈಸಿಯನ್ನ ಸೇರಿಕೊಳ್ಳಬಹುದು. ಆರ್‌ಸಿಬಿ ಸಪೋರ್ಟರ್ಸ್ ಅಂತೂ ರೋಹಿತ್ ಶರ್ಮಾ ನಮ್ಮ ಟೀಮ್‌ಗೆ ಬರಲಿ ಅಂತಾ ಒತ್ತಾಯಿಸ್ತಿದ್ದಾರೆ. ಯಾಕಂದ್ರೆ 39 ವರ್ಷದ ಆರ್‌ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ಗೂ ಕ್ಯಾಪ್ಟನ್ ಆಗಿ ಇದು ಕೊನೆಯ ಟೂರ್ನಿಯಾಗಬಹುದು. ಹೀಗಾಗಿ ಆರ್‌ಸಿಬಿ ಕೂಡ ಹೊಸ ಕ್ಯಾಪ್ಟನ್ನ ಹುಡುಕಾಟದಲ್ಲಿದೆ. NEXT ಸೀಸನ್ಗೆ ರೋಹಿತ್ ಶರ್ಮಾರನ್ನ ಪಿಕ್ ಮಾಡ್ಬಹುದಾ ಗೊತ್ತಿಲ್ಲ.
ಅಂತೂ ರೋಹಿತ್ ಶರ್ಮಾ ವಿಚಾರವಾಗಿ ಈ ಬಾರಿಯ ಐಪಿಎಲ್ ಟೂರ್ನಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿರಲಿದೆ. ಅದ್ರಲ್ಲಿ ಡೌಟೇ ಬೇಡ. ಐಪಿಎಲ್ ಟೈಮ್ನಲ್ಲಿ ಎಲ್ಲರ ಫೋಕಸ್ ಕೂಡ ರೋಹಿತ್ ಶರ್ಮಾ ಮೇಲೆಯೇ ಇರಲಿದೆ. ಈವನ್ ರೋಹಿತ್ ಮುಂಬೈ ಇಂಡಿಯನ್ಸ್ ಪರವೇ, ಹಾರ್ದಿಕ್ ಪಾಂಡ್ಯ ಅಂಡರ್ನಲ್ಲೇ ಆಡಿದ್ರೂ ರೋಹಿತ್ ಶರ್ಮಾ ಈಸ್ ದಿ ಸೆಂಟರ್ ಆಫ್ ಅಟ್ರಾಕ್ಷನ್. ಈಗಾಗ್ಲೇ ಕೆಲವು ಮಿಲಿಯನ್ ರೋಹಿತ್ ಫ್ಯಾನ್ಸ್ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾ ಪೇಜ್ನ್ನ ಅನ್ಫಾಲೋ ಮಾಡಿದ್ದಾರೆ. ಮ್ಯಾಚ್ ನಡೆಯೋವಾಗಂತೂ ಸ್ಟೇಡಿಯಂನಲ್ಲಿ ಬರೋ ರೋಹಿತ್ ಶರ್ಮಾ ಪರ ಘೋಷಣೆಗಳೇ ಕೇಳಿ ಬರೋದು ಗ್ಯಾರಂಟಿ. ಅದ್ರಲ್ಲೂ ಹಾರ್ದಿಕ್ ಪಾಂಡ್ಯಾರನ್ನ ಟಾರ್ಗೆಟ್ ಮಾಡೋಕೆ ರೋಹಿತ್ ಫ್ಯಾನ್ಸ್ ಕಾಯ್ತಾ ಇದ್ದಾರೆ. ಒಂದು ವೇಳೆ ಕ್ಯಾಪ್ಟನ್ಸಿಯಲ್ಲಿ ಅಥವಾ ಪರ್ಫಾಮೆನ್ಸ್ನಲ್ಲೇ ಇರ್ಲಿ ಹಾರ್ದಿಕ್ ಪಾಂಡ್ಯಾ ಫ್ಲಾಪ್ ಆದ್ರೂ ಅಂದ್ರೆ ಕೇಳೋದೇ ಬೇಡ. ರೋಹಿತ್ ಫ್ಯಾನ್ಸ್ ರೊಚ್ಚಿಗೆದ್ದು ಬಿಡ್ತಾರೆ. ಐಪಿಎಲ್ನಲ್ಲಿ ಈ ಎಲ್ಲಾ ಚಾಲೆಂಜ್ಗಳನ್ನ ಫೇಸ್ ಮಾಡಬೇಕಾಗುತ್ತೆ ಅನ್ನೋದು ಪಾಂಡ್ಯಾಗೂ ಈಗ ಗೊತ್ತಿದೆ. ಹೀಗಾಗಿಯೇ ಫಿಟ್ನೆಸ್ ವಿಚಾರದಲ್ಲಿ, ಮೆಂಟಲಿ ಸ್ಟ್ರಾಂಗ್ ಆಗೋಕೆ ಸಾಕಷ್ಟು ವರ್ಕೌಟ್ ಮಾಡ್ತಾ ಇದ್ದಾರೆ. ಎಕ್ಸ್ಸೈಸ್, ಧ್ಯಾನ ಮಾಡೋ ವಿಡಿಯೋ, ಫೊಟೋಸ್ಗಳನ್ನೆಲ್ಲಾ ಪೋಸ್ಟ್ ಮಾಡ್ತಾ ಇರ್ತಾರೆ.