ಮುಂಬೈನಲ್ಲಿ HITಮ್ಯಾನ್ ಸೈಡ್ ಲೈನ್ – RCB ವಿರುದ್ಧವೂ ಆಡಲ್ವಾ ರೋಹಿತ್?

ಮುಂಬೈನಲ್ಲಿ HITಮ್ಯಾನ್ ಸೈಡ್ ಲೈನ್ – RCB ವಿರುದ್ಧವೂ ಆಡಲ್ವಾ ರೋಹಿತ್?

ಮುಂಬೈಗೆ ಐದೈದು ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ. ಹೀಗಿದ್ರೂ 17ನೇ ಸೀಸನ್​ನಲ್ಲಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ರು. ಈಗ 18ನೇ ಸೀಸನ್​ಗೆ ಆಟದಿಂದಲೇ ಹೊರಗಿಡ್ತಿದ್ದಾರೆ. ಈ ಸೀಸನ್​ನಲ್ಲಿ ಆರಂಭದ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿ ಬ್ಯಾಟಿಂಗ್​ಗಷ್ಟೇ ಫಿಲ್ಡಿಗಿಳಿಸಿದ್ರು. ಫೀಲ್ಡಿಂಗ್ ವೇಳೆ ಬೆಂಚ್ ಕಾಯಿಸಿದ್ರು. ಬಟ್ ಲಕ್ನೋ ವಿರುದ್ಧ ಪ್ಲೇಯಿಂಗ್ 11ನಿಂದಲೇ ಹೊರಗಿಟ್ಟಿರೋದೇ ಬಾರೀ ಚರ್ಚೆಯಾಗ್ತಿದೆ. ಹೀಗಾಗಿ ಸೋಮವಾರ ನಡೆಯಲಿರೋ ಬೆಂಗಳೂರು ವರ್ಸಸ್ ಮುಂಬೈ ನಡುವಿನ ಪಂದ್ಯಕ್ಕೆ ಹಿಟ್​ಮ್ಯಾನ್​ರನ್ನ ಆಡಿಸ್ತಾರೋ ಇಲ್ವೋ ಅನ್ನೋ ಪ್ರಶ್ನೆ ಮೂಡಿದೆ. ರೋಹಿತ್ ರನ್ನ ಡ್ರಾಪ್ ಫ್ರಾಂಚೈಸಿ ನೀಡಿರೋ ಕಾರಣವೇ ಸುಳ್ಳು ಅನ್ನಿಸ್ತಿದೆ.

ಇದನ್ನೂ ಓದಿ : ವ್ಹೀಲ್ ಚೇರ್ ನಲ್ಲಿ ರಾಜಸ್ತಾನಕ್ಕೆ ದ್ರಾವಿಡ್ ತರಬೇತಿ – ರಾಯಡುಗೆ ಯಾಕಿಷ್ಟು ಉರಿ?

ಅಷ್ಟಕ್ಕೂ ಲಕ್ನೋ ವಿರುದ್ಧದ ಪಂದ್ಯಕ್ಕೆ ರೋಹಿತ್​ರನ್ನ ಕಣಕ್ಕಿಳಿಸದೆ ಇರೋದಕ್ಕೆ ಕಾರಣ ಅವ್ರ ಕಳಪೆ ಫಾರ್ಮ್ ಎನ್ನಲಾಗ್ತಿದೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ರೋಹಿತ್ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಫಾರ್ಮ್​ನಲ್ಲಿಲ್ಲ. ಮೊದಲ ಪಂದ್ಯದಲ್ಲಿ ಡಕ್​ಔಟ್, ಎರಡನೇ ಪಂದ್ಯದಲ್ಲಿ 8 ರನ್, ಮೂರನೇ ಪಂದ್ಯದ್ಲಲಿ 13 ರನ್ ಗಳಿಸಿದ್ರು. ಇದೇ ರಿಸಲ್ಟ್ ಮ್ಯಾನೇಜ್ಮೆಂಟ್‌ ಚಿಂತೆಗೆ ಕಾರಣವಾಗಿದೆ. ಸ್ಫೋಟಕ್‌ ಬ್ಯಾಟ್ಸ್‌ಮನ್‌ಗೆ ಫಾರ್ಮ್‌ ಕೈಕೊಟ್ಟಿದೆ. ರೋಹಿತ್‌ ಶರ್ಮಾ ದೊಡ್ಡ ಇನ್ನಿಂಗ್ಸ್‌ ಆಡುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಮತ್ತೆ ಮತ್ತೆ ಹುಸಿಯಾಗುತ್ತಿದೆ. ಜತೆಗೆ ಹಿಟ್‌ಮ್ಯಾನ್ ಬ್ಯಾಟಿಂಗ್ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿರುವ ಅಭಿಮಾನಿಗಳು ನಿರಾಸೆಗೊಳ್ಳುತ್ತಿದ್ದಾರೆ. ಸೋಲಿನ ಸುಳಿಯಲ್ಲಿ ಬಿದ್ದಿರೋ ಫ್ರಾಂಚೈಸಿ ಪಂದ್ಯದಿಂದಲೇ ಕೈಬಿಟ್ಟಿರೋ ಚರ್ಚೆ ನಡೀತಿದೆ.

ಲಕ್ನೋ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಮಾಡಲು ಬಂದಾಗ, ಅಭ್ಯಾಸದ ಸಮಯದಲ್ಲಿ ರೋಹಿತ್ ಶರ್ಮಾ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಪಂದ್ಯವನ್ನು ಆಡುವುದಿಲ್ಲ ಎಂದು ತಿಳಿಸಿದರು. ಈ ಸುದ್ದಿ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ರು. ಆದ್ರೆ ರೋಹಿತ್ ಶರ್ಮಾ ನಿಜವಾಗಿಯೂ ಗಾಯಗೊಂಡಿದ್ದಾರೆಯೇ ಅಥವಾ ಕಳಪೆ ಪ್ರದರ್ಶನದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋ. ಫ್ರಾಂಚೈಸಿಯೇ ಹಂಚಿಕೊಂಡಿರೋ ವಿಡಿಯೋದಲ್ಲಿ ಪಂದ್ಯಕ್ಕೂ ಮೊದಲು ರೋಹಿತ್ ಶರ್ಮಾ ಆರಾಮವಾಗಿ ಮೆಟ್ಟಿಲುಗಳನ್ನು ಹತ್ತುತ್ತಿರುವುದು ಕಂಡುಬಂದಿದೆ. ಇದಕ್ಕೂ ಮೊದಲು, ಪಂದ್ಯದ ಹಿಂದಿನ ದಿನ ರೋಹಿತ್ ಶರ್ಮಾ, ಜಹೀರ್ ಖಾನ್‌ ಬಳಿ ‘ಅಗತ್ಯವಿದ್ದಾಗ ನಾನು ಎಲ್ಲವನ್ನೂ ಮಾಡಿದ್ದೇನೆ. ಈಗ ನನಗೆ ಯಾವುದನ್ನೂ ಸಾಧಿಸಿ ತೋರಿಸಬೇಕಾದ ಅಗತ್ಯವಿಲ್ಲʼ ಎಂದು ಹೇಳುತ್ತಿರುವ ವೀಡಿಯೋವೊಂದು ವೈರಲ್‌ ಆಗಿತ್ತು. ಈಗ ರೋಹಿತ್‌ ಶರ್ಮಾ ಗಾಯದ ಕಾರಣಕ್ಕೆ ತಂಡದಿಂದ ಹೊರಗುಳಿದಿರುವುದು ಇನ್ನಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಅಲ್ದೇ ಮುಂಬೈ ಇಂಡಿಯನ್ಸ್ ತಂಡದ ಸ್ಟ್ರಾಟಜಿಕ್ ಟೈಮ್ ಔಟ್ ವೇಳೆ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಯಾವುದೇ ಸಮಸ್ಯೆ ಇಲ್ಲವೆಂಬಂತೆ ಸಹ ಆಟಗಾರರಿಗೆ ಸಲಹೆ ನೀಡುತ್ತಿರುವುದು ಸಹ ಕಂಡು ಬಂದಿತ್ತು.

ಈ ಹಾರ್ದಿಕ್ ಪಾಂಡ್ಯ ಮ್ಯಾಚ್ ಚೆನ್ನಾಗಿ ಆಡ್ತಾರೆ. ಬಟ್ ಅವ್ರ ಌಟಿಟ್ಯೂಡ್ ಅವ್ರನ್ನ ವಿಲನ್ ಎನ್ನುವಂತೆ ಬಿಂಬಿಸ್ತಿದೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಪಾಂಡ್ಯ ಕೆಲ ನಿರ್ಧಾರಗಳಿಂದ ವಿಲನ್ ಆಗಿದ್ದಾರೆ. ತಿಲಕ್ ವರ್ಮಾರನ್ನ ಸುಮ್ದೇ ರಿಟೈರ್ಡ್ ಔಟ್ ಮಾಡಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಅಷ್ಟೇ ಅಲ್ಲ ಅದಕ್ಕೂ ಮುಂಚೆ ಸ್ಟ್ರಾಟೆಜಿಕ್ ಟೈಮ್ ಔಟ್ ಸಂದರ್ಭದಲ್ಲಿ ಮೈದಾನಕ್ಕೆ ಆಗಮಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ಚರ್ಚೆ ನಡೆಸ್ತಿದ್ರು. ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ವಿಷಯದಲ್ಲಿ ಸಲಹೆ ನೀಡಲು ಮುಂದಾಗಿದ್ರು. ಆದ್ರೆ ರೋಹಿತ್ ಶರ್ಮಾ ಮಾತನಾಡುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ಅವರ ಮಾತನ್ನು ನಿರ್ಲಕ್ಷಿಸಿ ಹೊರಟು ಹೋಗಿದ್ರು. ಪಾಂಡ್ಯ ಬದಲಾಗಲ್ಲ ಅಂತಾ ಫ್ಯಾನ್ಸ್ ಆಕ್ರೋಶ ಹೊರ ಹಾಕ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *