ರಿಷಬ್ ಪಂತ್ CSK ಕ್ಯಾಪ್ಟನ್ ಆಗ್ತಾರಾ? – ಶಿಷ್ಯನಿಗೆ ಪಟ್ಟ ಕಟ್ತಾರಾ ಧೋನಿ?

ರಿಷಬ್ ಪಂತ್ CSK ಕ್ಯಾಪ್ಟನ್ ಆಗ್ತಾರಾ? – ಶಿಷ್ಯನಿಗೆ ಪಟ್ಟ ಕಟ್ತಾರಾ ಧೋನಿ?

ರಾಜಕೀಯ ಮತ್ತು ಕ್ರಿಕೆಟ್​ನಲ್ಲಿ ಸಣ್ಣ ಸಣ್ಣ ಸಿಗ್ನಲ್​ಗಳಿಗೂ, ಡೆವಲಪ್​​​ಮೆಂಟ್​​ಗಳಿಗೂ ಸಾಕಷ್ಟು ವ್ಯಾಲ್ಯೂ ಇರುತ್ತೆ. ಐಪಿಎಲ್​ ವಿಚಾರವಾಗಿ ಒಂದಷ್ಟು ಇಂಟ್ರೆಸ್ಟಿಂಗ್ ಬೆಳವಣಿಗೆಗಳು ನಡೆಯುತ್ತಿದೆ. ದೆಹಲಿ ಕ್ಯಾಪಿಟಲ್ಸ್​ನಲ್ಲಿರೋ ರಿಷಬ್​ ಪಂತ್ ಚೆನ್ನೈ ಸೂಪರ್​ ಕಿಂಗ್ಸ್​ ಕ್ಯಾಪ್ಟನ್ ಆಗ್ತಾರಾ? ಈ ಒಂದು ಕ್ವಶ್ಚನ್ ಕಳೆದ ಕೆಲ ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಯಾಗ್ತಾ ಇದೆ. 2022 ಐಪಿಎಲ್​ ಟೂರ್ನಿಯಲ್ಲಿ ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿದ್ರು. ಕಾರು ಆ್ಯಕ್ಸಿಡೆಂಟ್​​ನಿಂದಾಗಿ 2023ರ ಟೂರ್ನಿಯಲ್ಲಿ ಪಂತ್ ಆಡಿರಲಿಲ್ಲ. ಇದೀಗ 2024ರ ಐಪಿಎಲ್​​ಗೆ ಎಲ್ಲಾ ತಯಾರಿ ಕೂಡ ನಡೀತಿದೆ. ರಿಷಬ್ ಪಂತ್ ಕೂಡ ಈ ಬಾರಿ ಐಪಿಎಲ್​​ಗೆ ಕಮ್​ಬ್ಯಾಕ್ ಮಾಡೋದು ಗ್ಯಾರಂಟಿಯಾಗಿದೆ.​​ ಈ ನಡುವೆ ರಿಷಬ್ ಪಂತ್ ಚೆನ್ನೈ ಸೂಪರ್​ ಕಿಂಗ್ಸ್ ಕ್ಯಾಪ್ಟನ್ ಆಗ್ತಾರಾ ಅನ್ನೋ ಅನುಮಾನ ಎದ್ದಿದೆ. ಹಾಗಿದ್ರೆ ರಿಷಬ್ ಪಂತ್ ದೆಹಲಿ ಬಿಟ್ಟು ಚೆನ್ನೈಗೆ ಶಿಫ್ಟ್ ಆಗ್ತಾರಾ? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೈಗ್ ಹಾಕಲೋ ಎಂದ ಕೆ.ಎಲ್ ರಾಹುಲ್ – ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು

2024ರ ಐಪಿಎಲ್​ ಟೂರ್ನಿಯಲ್ಲಿ ಪಂತ್ ದೆಹಲಿ ಕ್ಯಾಪಿಟಲ್ಸ್ ಪರವೇ ಆಡಲಿದ್ದಾರೆ. ಟೀಂ ಲೀಡ್ ಮಾಡ್ತಾರಾ? ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಿಲ್ಲ. ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್ ಟೀಂ ಮೆಂಬರ್ ಆಗಿಯೇ ಇರೋದಂತೂ ಗ್ಯಾರಂಟಿ. ಆದ್ರೆ 2025ರ ಐಪಿಎಲ್​​ ವೇಳೆಗೆ ರಿಷಬ್ ಪಂತ್ ಐಪಿಎಲ್ ಕೆರಿಯರ್ ವಿಚಾರದಲ್ಲಿ ಏನು ಬೇಕಾದ್ರೂ ಚೇಂಜೆಸ್​​ಗಳಾಗಬಹುದು. ದೆಹಲಿ ಕ್ಯಾಪಿಟಲ್ಸ್​ ಬಿಟ್ಟು ಚೆನ್ನೈ ಸೂಪರ್​ ಕಿಂಗ್ಸ್ ಜಾಯಿನ್ ಆದ್ರೂ ಆಗಬಹುದು. ಅಷ್ಟೇ ಅಲ್ಲ, ಸಿಎಸ್​​ಕೆ ಕ್ಯಾಪ್ಟನ್ ಆದ್ರೂ ಆಶ್ಚರ್ಯ ಇಲ್ಲ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟ್ರೇಟರ್ ಆಗಿರೋ ದೀಪ್ ದಾಸ್ ಗುಪ್ತಾ ಈ ವಿಚಾರವಾಗಿ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. 2025ರ ಐಪಿಎಲ್​​ ಟೂರ್ನಿಯಲ್ಲಿ ರಿಷಬ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್​ನ್ನ ಲೀಡ್ ಮಾಡಬಹುದು ಎಂದಿದ್ದಾರೆ.

ಎಂಎಸ್ ಧೋನಿ ಮತ್ತು ರಿಷಬ್ ಪಂತ್ ಇಬ್ಬರೂ ತುಂಬಾನೆ ಕ್ಲೋಸ್ ಫ್ರೆಂಡ್ಸ್. ಇಬ್ಬರೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳೇ.. ಇಬ್ಬರೂ ಬೆಸ್ಟ್ ಫಿನಿಶರ್ಸೇ.. ವಿಕೆಟ್ ಕೀಪಿಂಗ್​ಗೆ ಸಂಬಂಧಿಸಿ ಪಂತ್​ರನ್ನ ಟ್ರೈನ್ ಮಾಡಿರೋದೆ ಎಂ.ಎಸ್ ಧೋನಿ. ಇನ್ನು ಧೋನಿ ಲೆವೆಲ್​ಗೆ ಅಲ್ಲದಿದ್ರೂ ಕೂಡ ರಿಷಬ್​​ ಪಂತ್​​ರಲ್ಲೂ ಒಬ್ಬ ಕ್ಯಾಪ್ಟನ್ ಇದ್ದಾರೆ. ಈಗಾಗ್ಲೇ ಐಪಿಎಲ್​​ನಲ್ಲಿ ದೆಹಲಿ ಕ್ಯಾಪಿಟಲ್ಸ್​ನ್ನ ಲೀಡ್ ಮಾಡಿರೋ ಎಕ್ಸ್​ಪೀರಿಯನ್ಸ್ ಕೂಡ ರಿಷಬ್ ಪಂತ್​ಗೆ ಇದೆ. ಇನ್ನು ಈಗಲೂ ಅಷ್ಟೇ ಧೋನಿ ಜೊತೆಗೆ ರಿಷಬ್ ಪಂತ್ ತುಂಬಾನೆ ಟೈಮ್ ಸ್ಪೆಂಡ್ ಮಾಡ್ತಾರೆ. ಆಗಾಗ ಇಬ್ಬರೂ ಭೇಟಿಯಾಗ್ತಾನೆ ಇರ್ತಾರೆ. ಇತ್ತೀಚೆಗಷ್ಟೇ ನಡೆದ ಐಪಿಎಲ್​ ಮಿನಿ ಆಕ್ಷನ್ ಟೈಮ್​ನಲ್ಲೂ ಅಷ್ಟೇ ಧೋನಿ ಮತ್ತು ರಿಷಬ್ ಪಂತ್ ದುಬೈನಲ್ಲಿ ಜೊತೆಗೆ ಇದ್ರು. ಈಗ ಕ್ರಿಸ್ಮಸ್ ಹಬ್ಬದ ವೇಳೆಯೂ ಜೊತೆಗೆ ಕಾಣಿಸಿಕೊಂಡಿದ್ದಾರೆ. ರಿಷಬ್ ಪಂತ್ ಪಾಲಿಗೆ ಧೋನಿ ಒಂಥರಾ ಗಾಡ್ ಫಾದರ್ ಇದ್ದಂತೆ. ಅದ್ರಲ್ಲಿ ಯಾವುದೇ ಡೌಟ್ ಬೇಡ. ಹೀಗಾಗಿ 2025ರ ವೇಳೆಗೆ ಎಂಎಸ್​ಡಿ ತಮ್ಮ ಉತ್ತರಾಧಿಕಾರಿಯಾಗಿ ರಿಷಬ್​ ಪಂತ್​ರನ್ನ ಸೆಲೆಕ್ಟ್ ಮಾಡುವ ಸಾಧ್ಯತೆಯೂ ಇದೆ. ಅದ್ರೆ ರಿಷಬ್ ಸಿಎಸ್​ಕೆ ಕ್ಯಾಪ್ಟನ್ ಆಗಬೇಕು ಅನ್ನೋದಾದ್ರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್​ ಮಧ್ಯೆ ಮೆಗಾ ಟ್ರೇಡ್ ಡೀಲ್ ನಡೆಯಲೇಬೇಕು. ಈ ಟ್ರೇಡ್ ಡೀಲ್​ಗೆ ದೆಹಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ಒಪ್ಪಿದ್ರೆ ಮಾತ್ರ ರಿಷಬ್ ಪಂತ್ ಸಿಎಸ್​ಕೆ ಜಾಯಿನ್ ಆಗೋಕೆ ಸಾಧ್ಯ. ಆದ್ರೆ ಸದ್ಯದ ಪರಿಸ್ಥಿತಿಯಲ್ಲಂತೂ ರಿಷಬ್ ಪಂತ್​ರನ್ನ ದೆಹಲಿ ಕ್ಯಾಪಿಟಲ್ಸ್ ಬಿಟ್ಟು ಕೊಡೋದು ಡೌಟ್. ಜೊತೆಗೆ 2024ರ ಐಪಿಎಲ್​​ನಲ್ಲಿ ರಿಷಬ್ ಪಂತ್​​ ಮತ್ತೆ ಡಿಸಿಯನ್ನ ಲೀಡ್​ ಮಾಡಿದ್ರೂ ಆಶ್ಚರ್ಯ ಇಲ್ಲ.

ಇನ್ನು ಇಲ್ಲಿ ಎಂಎಸ್ ಧೋನಿ ಐಪಿಎಲ್​ ಕೆರಿಯರ್ ಬಗ್ಗೆ ಹೇಳಲೇಬೇಕಾಗುತ್ತೆ. ಈಗಿನ ಡೆವಲಪ್​ಮೆಂಟ್​ಗಳನ್ನ ನೋಡಿದ್ರೆ 2024ರ ಐಪಿಎಲ್​ ಟೂರ್ನಿಯಲ್ಲೂ ಮಾಹಿ ಆಡೋ ಸಾಧ್ಯತೆ ಹೆಚ್ಚಿದೆ. 2023ರ ಐಪಿಎಲ್​ ಟೂರ್ನಿಯನ್ನ ಗೆದ್ದ ಬಳಿಕ ಧೋನಿ ಕಾಲಿಗೆ ಸರ್ಜರಿಯಾಗಿತ್ತು. ಇದೀಗ ಎಂಎಸ್​​ಡಿ ಕಂಪ್ಲೀಟ್ ಫೀಟ್ ಆಗಿದ್ದು, ಜಿಮ್​ನಲ್ಲೂ ವರ್ಕೌಟ್ ಮಾಡ್ತಾ ಇದ್ದಾರೆ. ಮುಂದಿನ ಕೆಲ ದಿನಗಳಲ್ಲಿ ನೆಟ್ ಪ್ರಾಕ್ಟೀಸ್ ಕೂಡ ಶುರು ಮಾಡಲಿದ್ದಾರೆ. ಮಾರ್ಚ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್​ ನಡೆಯಲಿದ್ದು, ಧೋನಿ ಕೂಡ ಟ್ರೈನಿಂಗ್ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ. ಆದ್ರೆ ಧೋನಿ ವಿಚಾರವಾಗಿ ಇನ್ನೂ ಒಂದು ಡೌಟ್ ಇದೆ. ಧೋನಿ 2024ರ ಐಪಿಎಲ್​​ನಲ್ಲಿ ಆಡಿಯೇ ಆಡ್ತಾರೆ ಅನ್ನೋದು ಇನ್ನೂ ಕೂಡ 100 ಪರ್ಸೆಂಟ್ ಗ್ಯಾರಂಟಿ ಇಲ್ಲ. ಆಡಲ್ಲ ಅಂತಾನೂ ಹೇಳಿಲ್ಲ.. ಆಡ್ತೇನೆ ಅನ್ನೋದಾಗಿಯೂ ಧೋನಿ ಸ್ಟೇಟ್​ಮೆಂಟ್​​ ಕೊಟ್ಟಿಲ್ಲ. ಒಂದು ವೇಳೆ ಧೋನಿ ಆಡಿದ್ರೂ ಕ್ಯಾಪ್ಟನ್ ಆಗಿರ್ತಾರಾ ಅನ್ನೋದೂ ಗೊತ್ತಿಲ್ಲ. ಸದ್ಯ ಚೆನ್ನೈ ಸೂಪರ್​ ಕಿಂಗ್ಸ್​​ನಲ್ಲಿರೋ ಪ್ಲೇಯರ್ಸ್​ಗಳ ಪೈಕಿ ಧೋನಿ ಕ್ಯಾಪ್ಟನ್ಸಿ ಶೂ ಫಿಲ್​ ಮಾಡೋಕೆ ರೇಸ್​​ನಲ್ಲಿರುವ ಮೇನ್ ಪ್ಲೇಯರ್ ಅಂದ್ರೆ ರುತುರಾಜ್ ಗಾಯಕ್ವಾಡ್. ಆದ್ರೆ ಭವಿಷ್ಯದಲ್ಲಿ ರುತುರಾಜ್ ಬದಲು ರಿಷಬ್ ಪಂತ್​ಗೆ ಸಿಎಸ್​ಕೆ ಪ್ರಯಾರಿಟಿ ನೀಡುವ ಸಾಧ್ಯತೆ ಇದೆ. ಅದಕ್ಕೆ ಇನ್ನೊಂದು ರೀಸನ್ ಕೂಡ ಇದೆ. ಒಂದು ವೇಳೆ ಧೋನಿ ಐಪಿಎಲ್​​ನಿಂದ ರಿಟೈರ್ ಆದ್ರೂ ಕೂಡ ಒಂದಲ್ಲಾ ಒಂದು ರೋಲ್​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್ ಫ್ರಾಂಚೈಸಿಯಲ್ಲೇ ಇರೋದಂತೂ ಗ್ಯಾರಂಟಿ. ಮೆಂಟರ್ ಆಗಿ ಅಥವಾ ಕೋಚ್ ಧೋನಿ ಕಂಟಿನ್ಯೂ ಆಗೋ ಸಾಧ್ಯತೆ ಇದೆ. ಆಗ ರಿಷಬ್ ಪಂತ್​ರನ್ನ ಕ್ಯಾಪ್ಟನ್ ಮಾಡಿದ್ರೆ ಧೋನಿ-ರಿಷಬ್ ಕಾಂಬಿನೇಷನ್ ಕೂಡ ಸಿಎಸ್​​ಕೆ ವರ್ಕೌಟ್​ ಆಗಬಹುದು. ಈ ಎಲ್ಲಾ ಲೆಕ್ಕಾಚಾರಗಳಿಂದಾಗಿ 2025ರ ಐಪಿಎಲ್​ ವೇಳೆಗೆ ರಿಷಬ್ ಪಂತ್ ಸಿಎಸ್​ಕೆ ಜಾಯಿನ್ ಆಗಬಹುದು ಅಂತಾ ಹೇಳಲಾಗ್ತಾ ಇದೆ. ರಿಷಬ್ ಪಂತ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಳ್ತಾರೆ ಅನ್ನೋದಾದ್ರೆ 2024ರಲ್ಲ ಧೋನಿ ಆಡೋದು ಆಲ್​​ಮೋಸ್ಟ್ ಕನ್ಫರ್ಮ್ ಅಂತಾನೆ ಹೇಳಬಹುದು.

ಒಂದಂತೂ ನಿಜ.. WHO IS AFTER DHONI ಅನ್ನೋ ಕ್ವಶ್ಚನ್​ಗೆ ಆನ್ಸರ್​ ಕಂಡುಕೊಳ್ಳೋಕೆ ಸಿಎಸ್​ಕೆ ಎಲ್ಲಾ ರೀತಿಯ ಪ್ರಯತ್ನ ಕೂಡ ಮಾಡ್ತಿದೆ. ಇಲ್ಲೂ ಅಷ್ಟೇ ಚೆನ್ನೈ ಮ್ಯಾನೇಜ್ಮೆಂಟ್ ಕಂಪ್ಲೀಟ್ ಆಗಿ ಡಿಪೆಂಡ್ ಆಗಿರೋದು ಎಂಸ್ ಧೋನಿಯನ್ನೇ. ಮಾಹಿ ಯಾರ ಹೆಸರನ್ನ ಸಜೆಸ್ಟ್ ಮಾಡ್ತಾರೋ ಅವರನ್ನೇ ಸಿಎಸ್​ಕೆ  ಕ್ಯಾಪ್ಟನ್ ಮಾಡೋದು ಗ್ಯಾರಂಟಿ. ಧೋನಿ ಪರ್ಮಿಷನ್ ಇಲ್ಲದೆ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡೋದಿಲ್ಲ. ನೀವು ಗಮನಿಸರಲೂಬಹುದು. ದುಬೈನಲ್ಲಿ ನಡೆದ ಐಪಿಎಲ್​ ಮಿನಿ ಆಕ್ಷನ್ ವೇಳೆ ಸಿಎಸ್​ಕೆ ಟೇಬಲ್​ನಲ್ಲಿ ಧೋನಿ ಇರಲಿಲ್ಲ. ಆದ್ರೆ, ಸಿಎಸ್​ಕೆ ಮ್ಯಾನೇಜ್ಮೆಂಟ್ ಮಂದಿ ಕಿವಿಗೆ ಏರ್​ಪಾಡ್ ಹಾಕಿ ಕೂತಿದ್ರು. ಧೋನಿ ದುಬೈನಲ್ಲೇ ಹೊರಗಡೆ ಇದ್ರು. ಬಟ್ ಆಕ್ಷನ್​​ನಲ್ಲಿ ಕುಳಿತಿದ್ದ ಸಿಎಸ್​ಕೆ ಮ್ಯಾನೇಜ್ಮೆಂಟ್ ಜೊತೆಗೆ ಮಾಹಿ ಕಾಂಟೆಕ್ಟ್​​ನಲ್ಲಿದ್ರು. ಧೋನಿ ಆ ಕಡೆಯಿಂದ ಓಕೆ ಅಂದ್ಮೇಲೆಯಷ್ಟೇ ಈ ಕಡೆ ಮ್ಯಾನೇಜ್ಮೆಂಟ್ ಬಿಡ್ಡಿಂಗ್​​ಗೆ ಮುಂದಾಗ್ತಾ ಇದ್ರು. ರಚಿನ್ ರವೀಂದ್ರರಿಂದ ಹಿಡಿದು ಅಂದು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಪ್ರತಿಯೊಬ್ಬ ಪ್ಲೇಯರ್​ ಕೂಡ ಫೈನಲ್​ ಮಾಡಿರೋದು ಧೋನಿಯೇ. ಲಿಟ್ರಲಿ ಫೋನ್​ನಲ್ಲೇ ಧೋನಿ ಅಂದು ಬಿಡ್ಡಿಂಗ್ ಮಾಡಿದ್ರು. ಹೀಗಿರೋವಾಗ ಚೆನ್ನೈ ಸೂಪರ್​​ ಕಿಂಗ್ಸ್​​ನಲ್ಲಿ ಯಾವತ್ತಿಗೂ ಡಿಸೈಡಿಂಗ್ ಫ್ಯಾಕ್ಟರ್ ಆಗಿರೋದು ಮಾಹಿಯೇ. ಹೀಗಾಗಿ ಫ್ಯೂಚರ್ ಕ್ಯಾಪ್ಟನ್ ವಿಚಾರವಾಗಿ ಸಿಎಸ್​​ಕೆನಲ್ಲಿ ಪ್ಲ್ಯಾನಿಂಗ್ ನಡೀತಾ ಇರೋದಂತೂ ಸುಳ್ಳಲ್ಲ.

Sulekha