KKR- ✔.. CSK- ✔.. GT-? – ಹ್ಯಾಟ್ರಿಕ್ ವಿಕ್ಟರಿ ಸಿಡಿಸುತ್ತಾ RCB?  

KKR- ✔.. CSK- ✔.. GT-? – ಹ್ಯಾಟ್ರಿಕ್ ವಿಕ್ಟರಿ ಸಿಡಿಸುತ್ತಾ RCB?  

18ನೇ ಸೀಸನ್ ಐಪಿಎಲ್​ ಆರ್​ಸಿಬಿ ಪಾಲಿಗೆ ತುಂಬಾನೇ ಸ್ಪೆಷಲ್ ಆಗಿದ್ದು ಓಪನಿಂಗ್​ನಲ್ಲೇ ದಾಖಲೆಯ ಗೆಲುವು ಕಂಡಿದೆ. 2 ವರ್ಷಗಳಿಂದ ಗೆಲ್ಲೋಕೇ ಬಿಡದೆ ಕಾಡ್ತಿದ್ದ ಕೆಕೆಆರ್​ನ ಅವ್ರದ್ದೇ ನೆಲದಲ್ಲಿ ಬಗ್ಗು ಬಡಿದು ಅಲ್ಲಿಂದ ಚೆನ್ನೈಗೆ ಹಾರಿ 17 ವರ್ಷಗಳ ಬಳಿಕ ಚೆಪಾಕ್​ನಲ್ಲಿ ಗೆಲುವಿನ ನಗಾರಿ ಬಾರಿಸಿತ್ತು. ಸೋ ಈಗ ಟೇಬಲ್ ಟಾಪರ್ ಆಗಿ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದು ಏಪ್ರಿಲ್ 2ರಂದು ತಮ್ಮ ಮೂರನೇ ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ : ಆರ್ ಸಿಬಿಯಲ್ಲಿ ಸಾಲ್ಟ್.. ಮುಂಬೈನಲ್ಲಿ ಸೂರ್ಯ – ಸ್ಟಂಪಡ್ ಸುಲ್ತಾನ ಧೋನಿ!

ಮೆಗಾ ಹರಾಜಿನ ಬಳಿಕ ಎರಡೂ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಹಾಗೇ ಬ್ಯಾಲೆನ್ಸ್​ಡ್ ಟೀಂ ಆಗಿ ಕಾಣ್ತಿವೆ. ರಜತ್ ಪಾಟಿದಾರ್ RCB ಕ್ಯಾಪ್ಟನ್ ಆಗಿದ್ರೆ ಶುಭ್ಮನ್ ಗಿಲ್ GT ಗೆ ನಾಯಕರಾಗಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ನೇತೃತ್ವದ ಬೌಲಿಂಗ್ ದಾಳಿ ಮತ್ತು ವಿರಾಟ್ ಕೊಹ್ಲಿ ಮತ್ತು ಟಿಮ್ ಡೇವಿಡ್, ಫಿಲ್ ಸಾಲ್ಟ್​ರಂಥ ಸ್ಫೋಟಕ ಬ್ಯಾಟಿಂಗ್ ಲೈನ್‌ಅಪ್‌ನಿಂದಾಗಿ RCB  ಸ್ಟ್ರಾಂಗ್ ಆಗಿದೆ. ಮತ್ತೊಂದೆಡೆ ಮೊಹಮ್ಮದ್ ಸಿರಾಜ್, ರಶೀದ್ ಖಾನ್ ಮತ್ತು ಜೋಸ್ ಬಟ್ಲರ್‌ರಂತಹ ಆಟಗಾರರನ್ನು ಒಳಗೊಂಡ ಜಿಟಿ ಕೂಡ ಪ್ರಬಲ ಪೈಪೋಟಿ ನೀಡಲಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಲ್‌ರೌಂಡರ್‌ಗಳಿರೋದೇ ಪ್ಲಸ್ ಆಗಿದೆ. ಸದ್ಯ ಬೆಂಗಳೂರು ಆಡಿರುವಂಥ ಎರಡು ಪಂದ್ಯಗಳನ್ನ ಗೆದ್ದು ಟೇಬಲ್ ಟಾಪರ್ ಆಗಿದೆ. ಹಾಗೇ ಜಿಟಿ ಎರಡು ಪಂದ್ಯಗಳನ್ನ ಆಡಿದ್ದು ಮೊದಲ ಪಂದ್ಯವನ್ನ ಸೋತಿದ್ರೆ ಎರಡನೇ ಪಂದ್ಯದಲ್ಲಿ ಗೆಲುವು ಕಂಡಿದೆ.

ಅಷ್ಟಕ್ಕೂ ಗುಜರಾತ್ ಟೈಟಾನ್ಸ್ ತಂಡ 2022ರಲ್ಲಿ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದು ಕಳೆದ ಮೂರು ವರ್ಷಗಳಲ್ಲಿ ಆರ್​ಸಿಬಿ ವಿರುದ್ಧ 5 ಪಂದ್ಯಗಳನ್ನಾಡಿದೆ. ಈ ಪೈಕಿ 2022ರಲ್ಲಿ ಒಂದು ಪಂದ್ಯವನ್ನ ಜಿಟಿ ಗೆದ್ರೆ ಇನ್ನೊಂದು ಪಂದ್ಯವನ್ನ ಆರ್​ಸಿಬಿ ಗೆದ್ದಿತ್ತು. ಹಾಗೇ 2023ರಲ್ಲಿ ಎರಡೂ ತಂಡಗಳು ಒಂದು ಸಲ ಮಾತ್ರ ಮುಖಾಮುಖಿಯಾಗಿದ್ವು. ಈ ವೇಳೆ ಜಿಟಿ ತಂಡ ಗೆಲುವು ಕಂಡಿತ್ತು. 2024ರಲ್ಲಿ ಎರಡು ಪಂದ್ಯಗಳಲ್ಲಿ ಎದುರು ಬದುರಾಗಿದ್ದು ಎರಡು ಬಾರಿಯೂ ಬೆಂಗಳೂರು ತಂಡವೇ ಗೆದ್ದು ಬೀಗಿದೆ. ಸೋ ಈಗ ಏಪ್ರಿಲ್ ಎರಡಕ್ಕೆ ಆರನೇ ಬಾರಿ ಮುಖಾಮುಖಿಯಾಗ್ತಿದ್ದು, ಬಾರೀ ಕುತೂಹಲ ಮೂಡಿಸಿದೆ.

ಕೊಲ್ಕತ್ತಾದಲ್ಲಿ ಹಾಗೇ ಚೆನ್ನೈನಲ್ಲಿ ಗೆದ್ದಿದ್ದಕ್ಕಿಂತ ಆರ್ ಸಿಬಿಗೆ ಬೆಂಗಳೂರಲ್ಲಿ ನಡೆಯಲಿರುವ ಪಂದ್ಯವೇ ಪ್ರತಿಷ್ಠೆ. ಹೋಂ ಗ್ರೌಂಡ್ ನಲ್ಲಿ ಗೆದ್ದು ಅಭಿಮಾನಿಗಳ ಖುಷಿ ಹೆಚ್ಚಿಸಬೇಕಿದೆ. ಅದ್ರಲ್ಲೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೆಕೆಆರ್ ಮತ್ತು ಚೆನ್ನೈ ವಿರುದ್ಧ ಗೆದ್ದಿರೋ ಆರ್​ಸಿಬಿಗೆ ಹೋಂ ಗ್ರೌಂಡ್ ನಲ್ಲಿ ಇದು ಫಸ್ಟ್ ಮ್ಯಾಚ್. ಅಲ್ದೇ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ರನ್ ಮಳೆಯೇ ಹರಿದು ಬರೋ ಸಾಧ್ಯತೆ ಇರುತ್ತೆ. ಈ ವಿಕೆಟ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ 2024ರಲ್ಲಿ ಆರ್‌ಸಿಬಿ ವಿರುದ್ಧ 287 ರನ್ ಗಳಿಸಿತ್ತು. ಈವರೆಗೂ ಇದೇ ಐಪಿಎಲ್​ನ ಗರಿಷ್ಠ ಸ್ಕೋರ್ ಆಗಿದೆ. ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡ 147 ರನ್‌ಗಳಿಗೆ ಆಲೌಟ್ ಆಗಿದ್ದೂ ಸಹ ಇದೇ ಮೈದಾನದಲ್ಲಿ. ಇದೀಗ ಚೆನ್ನೈ ವಿರುದ್ಧದ ಗೆಲುವಿನ ಬಳಿಕ ಬೆಂಗಳೂರು ಟೀಂ ಮತ್ತಷ್ಟು ಬಲಿಷ್ಠವಾಗಿದೆ.

Shantha Kumari