RCBಗೆ ಟ್ರೋಫಿ ಡಿಫೆಂಡ್ ಚಾಲೆಂಜ್ – ಎಡವಿದ್ರೂ ಮೈಕೊಡವಿ ಎದ್ದು ನಿಲ್ತಾರಾ?
ಕ್ಲೈಮ್ಯಾಕ್ಸ್ DOMINATION ಹೇಗಿರುತ್ತೆ?

18ನೇ ಸೀಸನ್ನಲ್ಲಿ ಚೊಚ್ಚಲ ಕಪ್ ಗೆದ್ದು 19ನೇ ಸೀಸನ್ನಲ್ಲಿ ಟೇಬಲ್ ಟಾಪರ್ ಆಗಿ ಲೀಗ್ ಫಿನಿಶ್ ಮಾಡಿರೋ ಬೆಂಗಳೂರು ಕ್ವಾಲಿಫೈಯರ್ 1 ಆಡೋಕೆ ಸರ್ವಸನ್ನದ್ಧವಾಗಿದೆ. ಮೇ 26ಕ್ಕೆ ಕ್ವಾಲಿಫೈಯರ್ 1 ಪಂದ್ಯ ಶೆಡ್ಯೂಲ್ ಆಗಿದ್ದು ಗುಜರಾತ್ ಟೈಟನ್ಸ್ ವಿರುದ್ಧ ಅಖಾಡಕ್ಕೆ ಇಳೀತಾರೆ. ಌಂಡ್ ಇಂಪಾರ್ಟೆಂಟ್ ನೋಟ್ ಏನಂದ್ರೆ ಈ ಫೈಟ್ ಗೆದ್ದವ್ರಿಗೆ ಸೀದಾ ಫೈನಲ್ ಟಿಕೆಟ್. ಌಂಡ್ ಎಡವಿದ್ರೂ ಮತ್ತೊಂದು ಚಾನ್ಸ್. ಸೋ ಬೆಂಗಳೂರು ತಂಡಕ್ಕೆ ಬಿಗ್ ಅಡ್ವಾಂಟೇಜ್ ಅಂತೂ ಇದೆ. ಹೈದ್ರಾಬಾದ್ ವಿರುದ್ಧದ ಕೊನೇ ಮ್ಯಾಚಲ್ಲಿ ಎಡವಿದ್ರೂ ಈ ಸೀಸನ್ನಲ್ಲಿ ಕಪ್ ಗೆಲ್ಲೋಕೆ ಇಡೀ ತಂಡ ಡಿಸರ್ವಿಂಗ್ ಇದೆ.
ಇದನ್ನೂ ಓದಿ : ಬೆಂಗಳೂರಿನ ಹೊಸ ಕ್ರಿಕೆಟ್ ಸ್ಟೇಡಿಯಂಗಿಂದು ಸಿಎಂ ಸಿದ್ದರಾಮಯ್ಯರಿಂದ ಶಿಲಾನ್ಯಾಸ
ಕಳೆದ 2 ತಿಂಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಪೈಸಾ ವಸೂಲ್ ಪಿಕ್ಚರ್ ಥರ ಫುಲ್ ಎಂಟರ್ಟೈನ್ಮೆಂಟ್ ನೀಡಿರೋ 19ನೇ ಸೀಸನ್ ಐಪಿಎಲ್ ಕ್ಲೈಮ್ಯಾಕ್ಸ್ ಇನ್ನೇನು ಬಂದೇ ಬಿಡ್ತು. ಇವತ್ತು ಕೊಲ್ಕತ್ತಾ ಮತ್ತು ಡೆಲ್ಲಿ ನಡುವಿನ ಮ್ಯಾಚ್ ಮೂಲಕ ಲೀಗ್ ಹಂತದ ಬ್ಯಾಟಲ್ಗೆ ತೆರೆ ಬೀಳುತ್ತೆ. ಆ ನಂತ್ರ ಉಳಿದಿದ್ದೇ 4 ಪಂದ್ಯ. ಇನ್ನೊಂದೇ ವಾರದ ಸಮರ. ನೆಕ್ಸ್ಟ್ ಸಂಡೇ ಅಂದ್ರೆ ಮೇ 31ಕ್ಕೆ ನರೇಂದ್ರಮೋದಿ ಸ್ಟೇಡಿಯಮ್ನಲ್ಲಿ ಫೈನಲ್ ಫೈಟ್ ಮೂಲಕ ಈ ಸೀಸನ್ಗೆ ತೆರೆ ಬೀಳುತ್ತೆ. ಌಂಡ್ ಈ ಆವೃತ್ತಿಯಲ್ಲಿ ಈ ಸಲನೂ ಕಪ್ ನಮ್ದು ಅಂತಾ ಹೇಳೋಕೆ ಬೆಂಗಳೂರು ತಂಡಕ್ಕೆ ಸುವರ್ಣಾವಕಾಶವೂ ಇದೆ.
ಟ್ರೋಫಿ ಡಿಫೆಂಡ್ ಚಾಲೆಂಜ್ ಗೆಲ್ತಾರಾ ಬೆಂಗಳೂರು ಬಾಯ್ಸ್?
ಲೀಗ್ ಹಂತದಲ್ಲಿ 19 ಪಂದ್ಯಗಳನ್ನ ಗೆದ್ದು 18 ಅಂಕಗಳೊಂದಿಗೆ ಕ್ವಾಲಿಫೈಯರ್ 1ಗೆ ಕಾಲಿಟ್ಟಿರೋ ಬೆಂಗಳೂರು ಈಗ ಟ್ರೋಫಿ ಎತ್ತಿ ಹಿಡಿಯೋಕೆ ಇನ್ನೆರಡೇ ಹೆಜ್ಜೆ ಬಾಕಿ. ಗುಜರಾತ್ ವಿರುದ್ಧ ಮಂಗಳವಾರದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗೆದ್ರೆ ನೆಕ್ಸ್ಟ್ ಭಾನುವಾರ ಸೀದಾ ಫೈನಲ್ಗೆ ಗ್ರ್ಯಾಂಡ್ ಎಂಟ್ರಿ. ಆರ್ಸಿಬಿಯಲ್ಲಿ ಇರೋ ಸ್ಟ್ರೆಂಥ್ ನೋಡಿದ್ರೆ ಸತತ 2ನೇ ಕಪ್ ನಮ್ದೇ ಎನ್ನುವಂಥ ಹೋಪ್ಸ್ ಇದೆ. ಯಾಕಂದ್ರೆ ಆರ್ಸಿಬಿಗೆ ಎಲ್ಲವೂ ಕೂಡ ಕಳೆದ ವರ್ಷದಂತೆಯೇ ಕೂಡಿ ಬರ್ತಿದೆ.
ಈ ಸಲನೂ ಕಪ್ ನಮ್ದು?
ಚಾಂಪಿಯನ್ ಪ್ಲೇಯರ್ ಗಳೇ ಕಂಟಿನ್ಯೂ ಮಾಡಿರೋದು ಪ್ಲಸ್
ಲೀಗ್ ಹಂತದಲ್ಲಿ 18 ಅಂಕಗಳನ್ನು ಪಡೆದು ಡಾಮಿನೇಷನ್
ಬ್ಯಾಟಿಂಗ್ & ಬೌಲಿಂಗ್ ವಿಭಾಗ ಫಾರ್ಮ್ ಗೆ ಬಂದ್ರೆ ಬೊಂಬಾಟ್
ಪವರ್ ಪ್ಲೇ ಮತ್ತು ಡೆತ್ ಓವರ್ ನಲ್ಲಿ ಗೇಮ್ ಚೇಂಜಿಂಗ್ ಬೌಲಿಂಗ್
ಕೂಲ್ & ಕಾಮ್ ಆಗಿ ಟೀಂ ಹ್ಯಾಂಡಲ್ ಮಾಡ್ತಿರುವ ನಾಯಕ
ಹೀಗೆ ಬೆಂಗಳೂರು ತಂಡಕ್ಕೆ ಟ್ರೋಫಿಯನ್ನ ಉಳಿಸಿಕೊಳ್ಳೋಕೆ ಎಲ್ಲಾ ಅವಕಾಶಗಳೂ ಇವೆ. ಟಾಪ್ 1ನಲ್ಲಿ ಲೀಗ್ ಫಿನಿಶ್ ಮಾಡಿರೋದೇ ಅತಿದೊಡ್ಡ ಗಿಫ್ಟ್. ಸೋ ಈಗ ಮುಂದಿನ 2 ಹೆಜ್ಜೆಗಳನ್ನ ಹೇಗೆ ಇಡ್ತಾರೆ ಅನ್ನೋದಷ್ಟೇ ಇಂಪಾರ್ಟೆಂಟ್. ಹೈದ್ರಾಬಾದ್ ವಿರುದ್ಧ ಸೋತಿರಬಹುದು. ಹಾಗಂತ ಪ್ರತೀ ಪಂದ್ಯವನ್ನ ಗೆಲ್ಲೋಕೂ ಆಗಲ್ಲ. ಬಟ್ ಬೌನ್ಸ್ ಬ್ಯಾಕ್ ಮಾಡುವಷ್ಟು ಕೆಪಾಸಿಟಿ ಆರ್ಸಿಬಿ ತಂಡಕ್ಕಂತೂ ಇದೆ.

ನೋಡಿರಿ

