ಸಂಜು ಸ್ಯಾಮ್ಸನ್‌ಗಾಗಿ ಸ್ಟಾರ್ ಆಟಗಾರನ ಬಿಡುತ್ತಾ CSK ?– ಚೆನ್ನೈ ತಂಡ ಬಿಡ್ತಾರಾ ರವೀಂದ್ರ ಜಡೇಜಾ?

ಸಂಜು ಸ್ಯಾಮ್ಸನ್‌ಗಾಗಿ ಸ್ಟಾರ್ ಆಟಗಾರನ ಬಿಡುತ್ತಾ CSK ?– ಚೆನ್ನೈ ತಂಡ ಬಿಡ್ತಾರಾ ರವೀಂದ್ರ ಜಡೇಜಾ?

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ. ಇಷ್ಟು ವರ್ಷ ತನ್ನ ತಂಡಕ್ಕಾಗಿ ಆಡಿದ ರವೀಂದ್ರ ಜಡೇಜಾ ಅವರ ಕೈ ಬಿಡಲು ಮುಂದಾಗಿದೆ ಚೆನ್ನೈ ಸೂಪರ್ ಕಿಂಗ್ಸ್. ಇದೆಲ್ಲಾ ಮಾಡುತ್ತಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮನ್ಸ್​ಗಾಗಿ.

ಇದನ್ನೂ ಓದಿ: ಸೌತ್ ಆಫ್ರಿಕಾ ಬೇಟೆಗೆ RO-KO ರೆಡಿ – ಇದೇ ತಿಂಗಳಲ್ಲೇ ODI ವಾರ್

ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಮಿನಿ ಹರಾಜಿಗೂ ಮುನ್ನ ಸ್ವಾಪ್ ಡೀಲ್ ಕುದುರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸಜ್ಜಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ. ಸಂಜು ಸ್ಯಾಮ್ಸನ್‌ಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇಬ್ಬರು ಆಟಗಾರರನ್ನು ನೀಡಲು ನಿರ್ಧರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್​ಗಾಗಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪ್ರಾಂಚೈಸಿ, ರವೀಂದ್ರ ಜಡೇಜಾ ಜೊತೆ ಡೆವಾಲ್ಡ್ ಬ್ರೆವಿಸ್ ಅವರನ್ನು ನೀಡುವಂತೆ ಕೋರಿಕೊಂಡಿತ್ತು. ಇದೀಗ ಸಿಎಸ್‌ಕೆ ಪ್ರಾಂಚೈಸಿ, ಬ್ರೆವಿಸ್ ಸ್ಥಾನದಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡುವುದಾಗಿ ತಿಳಿಸಿದೆ. ಈ ಸ್ವಾಪ್ ಡೀಲ್​ ಅನ್ನು ರಾಜಸ್ಥಾನ್ ರಾಯಲ್ಸ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಅದರಂತೆ ಶೀಘ್ರದಲ್ಲೇ ಆಟಗಾರರ ಬದಲಾವಣೆಯಾಗುವ ಸಾಧ್ಯತೆಯಿದೆ. ಐಪಿಎಲ್ ಟ್ರೇಡ್ ನಿಯಮಗಳ ಪ್ರಕಾರ, ಈ ಸ್ವಾಪ್ ಡೀಲ್​ಗಳಿಗೆ ಆಟಗಾರರ ಒಪ್ಪಿಗೆ ಕೂಡ ಮುಖ್ಯ. ಇದೀಗ ಸಿಎಸ್​ಕೆ ಫ್ರಾಂಚೈಸಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಕಡೆಯಿಂದ ಸ್ವಾಪ್ ಡೀಲ್ ಒಪ್ಪಂದದ ಲಿಖಿತ ಒಪ್ಪಿಗೆಯನ್ನು ಎದುರು ನೋಡುತ್ತಿದೆ. ಇಬ್ಬರ ಕಡೆಯಿಂದ ಒಪ್ಪಿಗೆ ಬಂದರೆ ಜಡೇಜಾ ಹಾಗೂ ಕರನ್ ಅವರನ್ನು ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲಿದೆ.

Sulekha