ಬೆಂಗಳೂರಲ್ಲಿ TOSS ಗೆದ್ದವ್ರೇ ಬಾಸ್ – ಇಬ್ಬನಿಯೇ REAL ಗೇಮ್ ಚೇಂಜರ್
ಮಳೆ ಬಂದ್ರೆ ಯಾರಿಗೆ ಲಾಭ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20ಐ ಸರಣಿ ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಎಕ್ಸ್ಪರ್ಟ್ಗಳ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗುತ್ತಿವೆ. ಬಿಗ್ಗೆಸ್ಟ್ ಟಾರ್ಗೆಟ್ ಅನ್ಕೊಂಡ್ರೆ ಈಸಿಯಾಗಿ ಚೇಸ್ ಮಾಡ್ತಾರೆ. ಚೇಸ್ ಮಾಡ್ಬೋದು ಅನ್ಕೋಂಡ ಸ್ಕೋರ್ನ ಡಿಫೆನ್ಸ್ ಮಾಡ್ತಾರೆ. ಸೋ ಪಂದ್ಯದ ರಿಸಲ್ಟ್ ಹೀಗೇ ಆಗುತ್ತೆ ಅನ್ನೋದನ್ನ ಮೊದಲೇ ಪ್ರೆಡಿಕ್ಟ್ ಮಾಡೋಕೆ ಆಗ್ತಿಲ್ಲ. ಇದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಡ್ಯೂ ಅಂದ್ರೆ ಇಬ್ಬನಿ.
ಇದನ್ನೂ ಓದಿ : ಸೋತರೂ ದಾಖಲೆ ಬರೆದ ಅಭಿಷೇಕ್!- ಒಂದೇ ವರ್ಷದಲ್ಲಿ ಸಿಕ್ಸರ್ಗಳ ವಿಶ್ವದಾಖಲೆ?
ಐದು ಪಂದ್ಯಗಳ ಸರಣಿ ಈಗ ಕ್ರೂಶಿಯಲ್ ಸ್ಟೇಜ್ನಲ್ಲಿದ್ದು ಶನಿವಾರ ನಡೆಯಲಿರುವ ಕೊನೆಯ ಪಂದ್ಯವೇ ಸರಣಿ ವಿನ್ನರ್ಸ್ ಯಾರು ಅನ್ನೋದನ್ನ ಫೈನಲ್ ಮಾಡಲಿದೆ. ಬೆಂಗಳೂರಿನಲ್ಲಿ ಸದ್ಯ ಮಳೆ ಕೂಡ ಆಗ್ತಾ ಇರೋದ್ರಿಂದ ಪಂದ್ಯಕ್ಕೆ ಮಳೆ ಭೀತಿಯೂ ಇದೆ. ಹಾಗೇನಾದ್ರೂ ಮಳೆ ಬಂದು ಶನಿವಾರದ ಪಂದ್ಯ ರದ್ದಾದ್ರೆ ಸರಣಿ ಸಮಬಲದಲ್ಲೇ ಕೊನೆಯಾಗುತ್ತೆ. ಮಳೆ ಇಲ್ಲದೇ ಇದ್ರೂ ಇಬ್ಬನಿಯೂ ದೊಡ್ಡ ಪಾತ್ರ ವಹಿಸುತ್ತೆ. ಟಾಸ್ ಸೋಲು ಗೆಲುವು ತುಂಬಾನೇ ಮುಖ್ಯವಾಗಲಿದೆ.
ಟಾಸ್ ಗೆದ್ದು ಬೌಲಿಂಗ್ ಮಾಡುವ ತಂಡಕ್ಕೆ ಪ್ಲಸ್ ಪಾಯಿಂಟ್!
ಬೆಂಗಳೂರಿನ ಕಂಡೀಷನ್ ನೋಡಿದ್ರೆ ಈ ಮ್ಯಾಚಲ್ಲಿ ಟಾಸ್ ಗೆಲ್ಲುವ ತಂಡಕ್ಕೆ ಅಡ್ವಾಂಟೇಜಸ್ ಜಾಸ್ತಿ ಸಿಗಬಹುದು ಎನ್ನಲಾಗ್ತಿದೆ. ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ. ರಾತ್ರಿ ಪಂದ್ಯಗಳಲ್ಲಿ ಸಾಮಾನ್ಯವಾಗಿ ಇಬ್ಬನಿ ಬಿದ್ದರೆ ಬೌಲರ್ಗಳಿಗೆ ಚೆಂಡನ್ನು ಹಿಡಿಯುವುದು ಕಷ್ಟವಾಗುತ್ತದೆ. ಇದ್ರಿಂದ ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭವಾಗುತ್ತದೆ. ಆದರೆ ಶನಿವಾರ ಬೆಂಗಳೂರಲ್ಲಿ ತಾಪಮಾನ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಸುಮಾರು 23 ಡಿಗ್ರಿ ಸೆಲ್ಸಿಯಸ್ನಿಂದ ಪ್ರಾರಂಭವಾಗಿ ರಾತ್ರಿ 10 ಗಂಟೆಯ ವೇಳೆಗೆ ಸುಮಾರು 22 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು. ಈ ವೇಳೆ ಹ್ಯುಮಿಡಿಟಿ ಅಂದ್ರೆ ಆರ್ದ್ರತೆ 85 ಪರ್ಸೆಂಟ್ ಇರಲಿದೆ. ಇದ್ರಿಂದ ಗಾಳಿಯಲ್ಲಿ ತೇವಾಂಶ ಇರುತ್ತದೆಯೇ ವಿನಃ ಮೈದಾನದ ಹುಲ್ಲಿನ ಮೇಲೆ ಇಬ್ಬನಿ ನೀರು ಕೂರುವುದಿಲ್ಲ. ಇಬ್ಬನಿ ಇಲ್ಲದ ಕಾರಣ, ಪಂದ್ಯ ಮುಂದೆ ಸಾಗಿದಂತೆಲ್ಲಾ ಪಿಚ್ ಸ್ಲೋ ಆಗ್ತಾ ಹೋಗುತ್ತೆ. ಇದು ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ರನ್ ನಿಯಂತ್ರಿಸಲು ಮತ್ತು ವಿಕೆಟ್ ಪಡೆಯಲು ಪಿಚ್ ನೆರವಾಗಬಹುದು ಅನ್ನೋ ಪ್ರೆಡಿಕ್ಷನ್ ಇದೆ. ಚೇಸಿಂಗ್ ಮಾಡುವ ತಂಡಕ್ಕೆ ಬ್ಯಾಟಿಂಗ್ ಕಷ್ಟವಾಗಬಹುದು. ಆದ್ರೆ ರಾಂಚಿಯಲ್ಲಿ ನಡೆದ ಮ್ಯಾಚಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಭಾರತ 5 ವಿಕೆಟ್ಗೆ 249 ರನ್ ಗಳಿಸಿದ್ರೂ ಸಂಜೆಯ ನಂತರ ಹೊರಾಂಗಣದಲ್ಲಿ ಭಾರೀ ಮಂಜು ಆವರಿಸಿತು. ಇಬ್ಬನಿ ಜಾಸ್ತಿ ಇದ್ದ ಕಾರಣ ಬೌಲಿಂಗ್ ಗ್ರಿಪ್ ಸಿಗಲಿಲ್ಲ. ಭಾರತದ ಪರ ಇಬ್ಬರು ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ (0/63) ಮತ್ತು ಕುಲದೀಪ್ ಯಾದವ್ (1/53) ಯಾವುದೇ ನಿಯಂತ್ರಣವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹೋಪ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅದನ್ನು ಸದುಪಯೋಗಪಡಿಸಿಕೊಂಡರು, ಕೇವಲ 18.3 ಓವರ್ಗಳಲ್ಲಿ ಚೇಸಿಂಗ್ ಅನ್ನು ಕಂಪ್ಲೀಟ್ ಮಾಡಿದ್ರು.
ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ T20I ಗಳಲ್ಲಿ ಸುಮಾರು 140 ರಿಂದ 150 ರಷ್ಟಿದೆ. IPL ಮತ್ತು ಇತರ ದೇಶೀಯ T20 ಪಂದ್ಯಗಳಲ್ಲಿ 175 ರಿಂದ 190 ರಷ್ಟಿದೆ. ಬೌಂಡರಿಗಳು 54 ಮೀಟರ್ ಚದರ ಮತ್ತು 70 ಮೀಟರ್ ನೇರದಲ್ಲಿ ಚಿಕ್ಕದಾಗಿರುತ್ತವೆ, ಆದ್ದರಿಂದ ಎರಡೂ ಬದಿಗಳಲ್ಲಿರುವ ಬ್ಯಾಟ್ಸ್ಮನ್ಗಳು ಬಿಗ್ ಹಿಟ್ಗಳನ್ನೇ ಟ್ರೈ ಮಾಡ್ತಾರೆ. ಸೋ ಐದನೇ ಪಂದ್ಯಗೂ ಹೈಸ್ಕೋರಿಂಗ್ ಗೇಮ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

