ನಾಲ್ಕನೇ ಮದುವೆಯಾಗುತ್ತಾರಾ ಪವನ್ ಕಲ್ಯಾಣ್? – 13 ವರ್ಷಗಳ ದಾಂಪತ್ಯ ಮುರಿದು ಬಿದ್ದಿದ್ದು ಯಾಕೆ?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಕೊನಿಡೆಲಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. 13 ವರ್ಷಗಳಿಂದ ಜೊತೆಯಲ್ಲಿದ್ದ ಪತ್ನಿ ಅನ್ನಾ ಕೊನಿಡೆಲಾ ಅವರಿಂದ ಪವನ್ ದೂರಾಗಿದ್ದು ಯಾಕೆ?, ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರಾ ನಟ ಪವನ್ ಎಂಬ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ:ರಾಕಿಭಾಯ್ ರಾವಣಾರ್ಭಟ, ಲಂಕಾಸುರನಾಗಿ ಗೆದ್ದ ಯಶ್ – ರಾಮಾಯಣ ಕಂಪ್ಲೀಟ್ REVIEW
ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಮೂರನೇ ಮದುವೆಯೂ ಮುರಿದು ಬಿದ್ದಿದೆ. ಪವನ್ ಕಲ್ಯಾಣ್ ಮೊದಲು ನಂದಿನಿ ಎಂಬಾಕೆಯನ್ನು 1997 ರಲ್ಲಿ ವಿವಾಹವಾದರು. 11 ವರ್ಷಗಳ ದಾಂಪತ್ಯದ ನಂತರ, ಅವರು ವಿಚ್ಛೇದನ ಪಡೆದರು. ನಂತರ 2009 ರಲ್ಲಿ, ಅವರು ರೇಣು ದೇಸಾಯಿ ಅವರನ್ನು ಪ್ರೀತಿಸಿ ವಿವಾಹವಾದರು. ನಂತರ ಇವರಿಬ್ಬರ ದಾಂಪತ್ಯ ಜೀವನವೂ ಹೆಚ್ಚು ವರ್ಷಗಳ ಕಾಲ ಉಳಿಯಲಿಲ್ಲ. ರೇಣುದೇಸಾಯಿಗೂ ವಿಚ್ಛೇದನ ನೀಡಿದರು. ನಂತರ ಅನ್ನಾ ಲೆಜಿನೋವಾ ಅವರನ್ನು ವಿವಾಹವಾದರು. ಈಗ, ಅನ್ನಾ ಅವರಿಂದಲೂ ಡೈವೋರ್ಸ್ ಪಡೆದಿರುವುದಾಗಿ ಘೋಷಿಸಿದ್ದಾರೆ. 2013ರಲ್ಲಿ ಪವನ್ ಕಲ್ಯಾಣ್ ಅವರು ಅನ್ನಾ ಲೆಜಿನೋವಾ ಅವರನ್ನು ವಿವಾಹವಾದರು. ವಿವಾಹವಾದ ನಂತರ ಅನ್ನ ತಮ್ಮ ಉಪನಾಮವನ್ನು ಬದಲಾಯಿಸಿಕೊಂಡು ಅನ್ನಾ ಕೊನಿಡೇಲಾ ಎಂದು ಕರೆಯಿಸಿಕೊಂಡಿದ್ದರು.
ಅನ್ನಾ ಲೆಜಿನೋವಾ ರಷ್ಯಾದ ಮಾಜಿ ಮಾಡೆಲ್. ಪವನ್ ಕಲ್ಯಾಣ್ ಅವರಿಗಿಂತ ಸುಮಾರು ಒಂಬತ್ತು ವರ್ಷ ಹಿರಿಯರು ಎನ್ನಲಾಗಿದೆ. 2011ರಲ್ಲಿ ಬಿಡುಗಡೆಯಾದ ‘ತೀನ್ಮಾರ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮೊದಲ ಭೇಟಿ ನಡೆದಿತ್ತು. ಪರಿಚಯ ಸ್ನೇಹವಾಗಿ ಬೆಳೆದು, ನಂತರ ಪ್ರೀತಿಗೆ ತಿರುಗಿತ್ತು. ಕೊನೆಗೆ 2013ರ ಸೆಪ್ಟೆಂಬರ್ 30ರಂದು ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಪವನ್ ಕಲ್ಯಾಣ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಅನ್ನಾ ಅವರಿಗೆ ಮತ್ತೊಂದು ಮದುವೆಯಾಗಿತ್ತು ಎನ್ನಲಾಗಿದೆ. ಮೊದಲ ಮದುವೆಯಿಂದ ಪೋಲೆನಾ ಅಂಜನಾ ಪವನೋವಾ ಎಂಬ ಮಗಳಿದ್ದಾರೆ. ಪವನ್ ಕಲ್ಯಾಣ್ ಆಕೆಯನ್ನು ದತ್ತು ಪಡೆದಿದ್ದರು. ಬಳಿಕ 2017ರಲ್ಲಿ ಈ ದಂಪತಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗು ಜನಿಸಿತ್ತು. ಹೀಗೆ ಇಬ್ಬರು ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದ ಈ ಜೋಡಿ ಈಗ ಬೇರೆಯಾಗಿದ್ದಾರೆ.
ಇದೀಗ ಮೂರನೇ ಮದುವೆಯೂ ಮುರಿದು ಬಿದ್ದಿದ್ದರಿಂದ ಪವನ್ ಕಲ್ಯಾಣ್ ನಾಲ್ಕನೇ ಮದುವೆಯಾಗುತ್ತಾರಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದಲ್ಲಿ ವಿಚ್ಛೇದನಗಳು ಸಂಭವಿಸುತ್ತವೆ ಮತ್ತು ಭವಿಷ್ಯದಲ್ಲಿ ಅವರು ನಾಲ್ಕನೇ ಬಾರಿ ಮದುವೆ ಆಗೋ ಸಾಧ್ಯತೆ ಕೂಡ ಇದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ರು. ಇದೀಗ ಪವನ್ ಹಾಗೂ ಅನ್ನಾ ಲೆಜಿನೋವಾ ಅವರ ವಿಚ್ಛೇದನ ಘೋಷಣೆಯ ನಂತರ ಹಳೆಯ ಸಂದರ್ಶನದ ವೀಡಿಯೊ ಮತ್ತೆ ವೈರಲ್ ಆಗುತ್ತಿದೆ.

ನೋಡಿರಿ

