ರೋಹಿತ್ Vs ಹಾರ್ದಿಕ್ ಬೆಟರ್ ಯಾರು? – ಮೊದಲ ಪಂದ್ಯದಲ್ಲೇ ನಾಯಕತ್ವ ಸಾಬೀತು ಮಾಡ್ತಾರಾ ಪಾಂಡ್ಯ?

ರೋಹಿತ್ Vs ಹಾರ್ದಿಕ್ ಬೆಟರ್ ಯಾರು? – ಮೊದಲ ಪಂದ್ಯದಲ್ಲೇ ನಾಯಕತ್ವ ಸಾಬೀತು ಮಾಡ್ತಾರಾ ಪಾಂಡ್ಯ?

ಐಪಿಎಲ್ ಟೂರ್ನಿ ಆರಂಭವಾಗೋ ಮೊದಲೇ ಮುಂಬೈ ಇಂಡಿಯನ್ಸ್ ಸೆಟ್ಬ್ಯಾಕ್ ಅನುಭವಿಸಿಯಾಗಿದೆ. ಪ್ರಾಕ್ಟೀಸ್ ಮ್ಯಾಚ್ ಆಡಬೇಕಾದ ಜಾಗದಲ್ಲೆಲ್ಲಾ ಡ್ಯಾಮೇಜ್ ಕಂಟ್ರೋಲ್ ಮಾಡೋದ್ರಲ್ಲೇ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಬ್ಯುಸಿಯಾಗಿದ್ದರು. ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದು ರೋಹಿತ್ ಶರ್ಮಾ ಬ್ಯಾಟಿಂಗ್ ಮೇಲೆ ನೆಗೆಟಿವ್ ಎಫೆಕ್ಟ್ ಆಗುತ್ತಾ ಅನ್ನೋ ಟೆನ್ಷನ್ ಇದೆ. ಆದ್ರೆ, ಕ್ಯಾಪ್ಟನ್ಸಿಯ ಪ್ರೆಷರ್ ಇಲ್ಲಾಂದ್ರೆ ರೋಹಿತ್ ಪರ್ಫಾಮೆನ್ಸ್ ಇನ್ನಷ್ಟು ಬೆಟರ್ ಆಗಬಹುದು ಅನ್ನೋ ಲೆಕ್ಕಾಚಾರ ಕೂಡಾ ಇದೆ. ಭಾರತದ ತಂಡದ ಕ್ಯಾಪ್ಟನ್ ಆಗಿಯೇ ರೋಹಿತ್ ತಮ್ಮ ಕೆರಿಯರ್ನ ಪೀಕ್ನಲ್ಲಿರುವಾಗ ಈಗ ಐಪಿಎಲ್‌ನಲ್ಲಿ ನಾಯಕನ ಪಟ್ಟ ಇಲ್ಲದೇ ಹಿಟ್‌ಮ್ಯಾನ್ ಹೇಗೆ ಆಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯಗಳ ದಿನ ನಮ್ಮ ರೈಲು ಸೇವೆಯ ಅವಧಿ ವಿಸ್ತರಣೆ

ಕಳೆದ 10 ವರ್ಷಗಳಿಂದ ರೋಹಿತ್ ಮಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ರು. ಐದು ಬಾರಿ ಫ್ರಾಂಚೈಸಿಯನ್ನ ಚಾಂಪಿಯನ್ ಆಗಿಸಿದ್ದಾರೆ. ಈಗ ಹಿಟ್‌ಮ್ಯಾನ್ ಜಾಗದಲ್ಲಿ ಹಾರ್ದಿಕ್ ಪಾಂಡ್ಯಾ ದರ್ಬಾರ್ ಶುರುವಾಗಿದೆ. ಮುಂಬೈ ಇಂಡಿಯನ್ಸ್ ಇಷ್ಟೆಲ್ಲಾ ಅಚೀವ್ಮೆಂಟ್ ಮಾಡಿದೆ ಅಂದ್ರೆ ಅದಕ್ಕೆ ರೋಹಿತ್ ಶರ್ಮಾ ಮೇನ್ ರೀಸನ್. ರೋಹಿತ್ ಅಚೀವ್ ಮಾಡಿರೋದನ್ನ ನಾನು ಮುಂದಕ್ಕೆ ಕ್ಯಾರಿ ಮಾಡಬೇಕಿದೆ. ಮುಂಬೈ ಇಂಡಿಯನ್ಸ್ನಲ್ಲಿ ನಾನು ರೋಹಿತ್ ಅಂಡರ್ನಲ್ಲೇ ಆಡಿದ್ದೆ. ಹೀಗಾಗಿ ಈಗ ಕ್ಯಾಪ್ಟನ್ ಆಗಿ ಟೀಮ್ನ್ನ ಲೀಡ್ ಮಾಡೋಕೂ ರೋಹಿತ್ ಹೆಲ್ಪ್ ಮಾಡ್ತಾರೆ. ನನ್ನ ಹೆಗಲ ಮೇಲೆ ಯಾವತ್ತಿಗೂ ರೋಹಿತ್ ಕೈ ಇದ್ದೇ ಇರುತ್ತೆ ಅನ್ನೋದಾಗಿ ಹಾರ್ದಿಕ್ ಪಾಂಡ್ಯ ಸ್ಟೇಟ್ಮೆಂಟ್ ಬೇರೆ ಕೊಟ್ಟಿದ್ದರು. ಆದ್ರೆ, ಪಾಂಡ್ಯಾ ಕೆಲ ಚಾಲೆಂಜ್ ಫೇಸ್ ಮಾಡಲೇಬೇಕು. ಹಿಟ್‌ಮ್ಯಾನ್ ಜೊತೆ ಹೆಜ್ಜೆ ಹಾಕಲೇಬೇಕು. ಹೀಗಾಗಿ ಐಪಿಎಲ್ ಮ್ಯಾಚ್ ವೇಳೆ ಗ್ರೌಂಡ್ನಲ್ಲಿ ಇಬ್ಬರ ಕಾಂಬಿನೇಷನ್, ಇಬ್ಬರ ಬಾಡಿ ಲಾಂಗ್ವೇಜ್ ಹೇಗಿರಬಹುದು ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಕೇವಲ ರೋಹಿತ್ – ಪಾಂಡ್ಯಾ ಅಂತೇನಲ್ಲ, ಮುಂಬೈ ಇಂಡಿಯನ್ಸ್ನಲ್ಲಿರೋ ಇತರೆ ಸೀನಿಯರ್ ಪ್ಲೇಯರ್‌ಗಳಿಗೂ ಅಷ್ಟೇ. ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್ ಆಗಿರೋದು ಸಮಾಧಾನ ಇಲ್ಲ. ಹೀಗಾಗಿ ಹಾರ್ದಿಕ್ ಅಂಡರ್ನಲ್ಲಿ ಮುಂಬೈ ಯಾವ ರೀತಿ ಪರ್ಫಾಮ್ ಮಾಡುತ್ತೋ ನೋಡ್ಬೇಕಿದೆ. ಇನ್ನು ಮ್ಯಾಚ್ ನಡೆಯೋವಾಗಲೂ ಅಷ್ಟೇ, ರೋಹಿತ್ ಶರ್ಮಾ ಪರ ಘೋಷಣೆಗಳು ಕೇಳಿ ಬರೋದಂತೂ ಗ್ಯಾರಂಟಿ. ಸ್ಟೇಡಿಯಂಗೆ ಬರೋರು ಎಲ್ಲರೂ ಕೂಡ ರೋಹಿತ್ಗೆ ಸಪೋರ್ಟ್ ಮಾಡ್ತಿರ್ತಾರೆ. ಟೋಟಲಿ ಹಾರ್ದಿಕ್ ಪಾಂಡ್ಯಾಗೆ ಇದು ಅತ್ಯಂತ ಚಾಲೆಂಜಿಂಗ್ ಐಪಿಎಲ್ ಸೀಸನ್ ಆಗಿರಲಿದೆ. ಏನೇ ಆದ್ರೂ, ಯಾವ ಹಂತದಲ್ಲೂ ಪೇಷೆನ್ಸ್ ಕಳೆದುಕೊಳ್ಳದೆ ಎಲ್ಲವನ್ನೂ ತುಂಬಾ ಸ್ಮೂತ್ ಆಗಿಯೇ ಹ್ಯಾಂಡಲ್ ಮಾಡಬೇಕಿದೆ. ತಾನು ಹೇಳಿದ ಹಾಗೆಯೇ ಆಗ್ಬೇಕು. ಪ್ಲೇಯರ್‌ಗಳು ತಾನು ಹೇಳಿದಂತೆಯೇ ಕೇಳ್ಬೇಕು ಎಂಬಂತೆ ವರ್ತಿಸಿದ್ರೆ ಪಾಂಡ್ಯಾ ಇನ್ನಷ್ಟು ಹೊಡೆತ ತಿನ್ನೋದು ಗ್ಯಾರಂಟಿ. ರೋಹಿತ್ ಶರ್ಮಾ ಜೊತೆಗೆ ಡಿಸ್ಕಸ್ ಮಾಡಿ, ಟಿಪ್ಸ್ ಪಡ್ಕೊಂಡೇ ಹಾರ್ದಿಕ್ ಪಾಂಡ್ಯಾ ಟೀಮ್ನ್ನ ಲೀಡ್ ಮಾಡಬೇಕಿದೆ. ಅದರಲ್ಲೂ ಹಾರ್ದಿಕ್‌ ಬಗ್ಗೆ ಸಿಕ್ಕಾಪಟ್ಟೆ ಸೆಲ್‌ಫಿಶ್‌ ಆಟಗಾರ ಎಂಬ ಆಪಾದನೆ ಫ್ಯಾನ್ಸ್‌ ಕಡೆಯಿಂದ ಇದ್ದೇ ಇದೆ.. ಅದರಲ್ಲೂ ಒಂದು ವೇಳೆ ಮುಂಬೈ ಇಂಡಿಯನ್ಸ್‌ ಪರವಾಗಿ ಕೇವಲ ತನ್ನ ಕೇಂದ್ರಿತವಾಗಿ ಹಾರ್ದಿಕ್‌ ಯಾವುದೇ ನಿರ್ಧಾರ ಕೈಗೊಂಡರೂ ಮತ್ತೆ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಬಹುದು..

ನಿಮಗೆ ಗೊತ್ತಿರೋ ಹಾಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಗುಜರಾತ್ ಟೈಟಾನ್ಸ್ ತನ್ನ ಫಸ್ಟ್ ಐಪಿಎಲ್ ಟೂರ್ನಿಯಲ್ಲೇ ಚಾಂಪಿಯನ್ ಆಗಿತ್ತು. ಸೆಕೆಂಡ್ ಟೂರ್ನಿಯಲ್ಲಿ ಫೈನಲ್ಗೆ ಬಂದಿತ್ತು. ಆದ್ರೆ ಗುಜರಾತ್ ಟೈಟಾನ್ಸ್ನ ಸಕ್ಸಸ್ ಹಿಂದೆ ಹಾರ್ದಿಕ್ ಪಾಂಡ್ಯ ಹಿಂದೆ ಇದ್ದಿದ್ದು ಕೋಚ್ ಆಶಿಶ್ ನೆಹ್ರಾ. ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧವೇ ಮೊದಲ ಪಂದ್ಯ ಹಾರ್ದಿಕ್ ಪಾಂಡ್ಯ ಫೇಸ್ ಮಾಡ್ತಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಓಪನರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರು ಸ್ಟಾರ್‌ ಆಟಗಾರರು ತಂಡಕ್ಕೆ ಬಿಗ್ ಇನ್ನಿಂಗ್ಸ್ ಕಟ್ಟುವ ಚಾನ್ಸ್ ಇದೆ. ರೋಹಿತ್ ಬಿಗ್ ಶಾಟ್‌ಗಳ ಮೂಲಕ ರನ್‌ ರೇಟ್‌ ಹಿಗ್ಗಿಸುತ್ತಾ ಸಾಗಿದರೆ, ಇಶಾನ್‌ ಕಿಶನ್‌ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಮಿಡ್ಲ್ ಆರ್ಡರ್‌ನಲ್ಲಿ ತಿಲಕ್ ವರ್ಮಾ ಅವರು ಕಳೆದ ಎರಡು ಋತುಗಳಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಭರವಸೆ ಮೂಡಿಸಿದ್ದರು. ಅವರನ್ನು ಹೊರತುಪಡಿಸಿ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಟೀಮ್ ಸೇರಿಕೊಂಡಿದ್ದಾರೆ. ಇದ್ರ ಜೊತೆಗೆ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಪಾಕಾ ಟೀಮ್ ಗೆ ಜಾಯಿನ್ ಆಗಿದ್ದಾರೆ. ಕ್ವೆನಾ ಮಪಾಕಾಗೆ ಕೇವಲ 17 ವರ್ಷ. ಇತ್ತೀಚೆಗೆ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮಪಾಕಾ ಬೊಂಬಾಟ್ ಪ್ರದರ್ಶನ ನೀಡಿದ್ರು. ಕ್ವೆನಾ ಮಪಾಕಾ ಕೂಡ ಜಸ್ಪ್ರಿತ್ ಬುಮ್ರಾ ಅವರಂತೆ ಅತ್ಯುತ್ತಮ ಯಾರ್ಕರ್ ಎಸೆಯುವುದರಲ್ಲಿ ನಿಪುಣರು. ಜೊತೆಗೆ ಚೆಂಡನ್ನು ಉತ್ತಮ ವೇಗದಲ್ಲಿ ಸ್ವಿಂಗ್ ಮಾಡುತ್ತಾರೆ. ಮಪಾಕಾ 12 ನೇ ತರಗತಿ ವಿದ್ಯಾರ್ಥಿ. ಆದರೆ, ಕ್ರಿಕೆಟ್ ಅಂತಾ ಬಂದ್ರೆ ದೈತ್ಯ ಆಟಗಾರ.

 

 

Sulekha