ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗುತ್ತಾ? – ಬಿಎಂಆರ್‌ಸಿಎಲ್ ಹೇಳಿದ್ದೇನು?
ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾಗಿ ದಶಕಗಳೇ ಕಳೆದಿದೆ. ನಿತ್ಯ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ.
ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡಲಾಗುತ್ತಿದೆ ಎಂಬ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಾಗಿತ್ತು. ಇದರಿಂದಾಗಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಆತಂತ ವ್ಯಕ್ತಪಡಿಸಿದ್ದರು. ಇದೀಗ ಯಾವುದೇ ಕಾರಣಕ್ಕೂ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದ ನಾಲ್ಕು ನಗರಗಳಿಗೆ ನಮ್ಮ ಮೆಟ್ರೋ ವಿಸ್ತರಣೆ?
ದಶಕದ ಬಳಿಕ ಲಾಭದತ್ತ ದಾಪುಗಾಲು ಇರಿಸಿದ ನಮ್ಮ ಮೆಟ್ರೋ!
ನಮ್ಮ ಮೆಟ್ರೋ ಆರಂಭವಾಗಿ ಸುಮಾರು 10 ವರ್ಷ ಕಳೆದಿದೆ. ಇದೀಗ ದಶಕದ ಬಳಿಕ ನಮ್ಮ ಮೆಟ್ರೋ ಲಾಭದತ್ತ ಮುನ್ನುಗ್ಗುತ್ತಿದೆ. 2022-23 ರಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ರೂ 594.02 ಕೋಟಿ ಗಳಿಸಿದ್ದು, ನಿರ್ವಹಣಾ ವೆಚ್ಚ 486.61 ಕೋಟಿಯಾಗಿದೆ. BMRCL ಈ ವರ್ಷದ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ರೂ 190.67 ಕೋಟಿ ಗಳಿಸಿದೆ. ಈ ನಾಲ್ಕು ತಿಂಗಳಲ್ಲಿ ರೈಲು ಕಾರ್ಯಾಚರಣೆಗಳಿಗಾಗಿ ರೂ 186.92 ಕೋಟಿ ಖರ್ಚು ಮಾಡಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಮೆಟ್ರೊ ರೈಲಿನಲ್ಲಿ ಕಳೆದ ವರ್ಷ ಸರಾಸರಿ ನಿತ್ಯ 5.32 ಲಕ್ಷ ಜನ ಪ್ರಯಾಣಿಸಿದ್ದರು. ಈ ವರ್ಷ ನಿತ್ಯ ಸಂಚರಿಸುವವರ ಪ್ರಮಾಣ 5.2ಲಕ್ಷದಿಂದ 6.3 ಲಕ್ಷದವರೆಗೆ ಏರಿದೆ. ಜನರಲ್ಲಿ ಮೆಟ್ರೊ ಮೂಡಿಸಿರುವ ಸುರಕ್ಷತಾ ಭಾವನೆಯಿಂದ ಇದು ಸಾಧ್ಯವಾಗಿದೆ. ಈಗಿನ ಪ್ರಯಾಣಿಕರ ಪ್ರಮಾಣದ ಅಂದಾಜಿನಲ್ಲಿ ಈ ಆರ್ಥಿಕ ವರ್ಷದ ಕೊನೆಗೆ 3 100 ಕೋಟಿ ಲಾಭ ನಿರೀಕ್ಷಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.
2022-23ರ ಅಂಕಿ ಅಂಶ ಪ್ರಕಾರ, 7 422.61 ಕೋಟಿ ಪ್ರಯಾಣಿಕರಿಂದ ಬಂದ ಆದಾಯ 7171.41 ಕೋಟಿ ರೂಪಾಯಿಯಾಗಿದೆ. ಇತರ ಶುಲ್ಕಗಳಿಂದ ಬಂದ ಆದಾಯ 7486.61 ಕೋಟಿ ರೂ ಆಗಿದ್ದು, ನಿರ್ವಹಣಾ ವೆಚ್ಚ 2023ರ ಏಪ್ರಿಲ್‌ನಿಂದ ಜುಲೈವರೆಗಿನ ಅಂಕಿ ಅಂಶ 170.58 ಕೋಟಿ ರೂಪಾಯಿ ಆಗಿದೆ. ಇನ್ನು ಪ್ರಯಾಣಿಕರಿಂದ ಬಂದ ಆದಾಯ 20.09 ಕೋಟಿ ಆಗಿದ್ದು, ಇತರ ಶುಲ್ಕಗಳಿಂದ ಬಂದ ಆದಾಯ 186.92 ಕೋಟಿ ನಿರ್ವಹಣಾ ವೆಚ್ಚ ಆಗಿದೆ ಎಂದು ತಿಳಿಸಿದ್ದಾರೆ.