ತುಮಕೂರಿನಲ್ಲಿ ಕಮಾಲ್ ಮಾಡ್ತಾರಾ ಮುದ್ದಹನುಮೇಗೌಡ? – ದಳಪತಿಗಳ ತವರುಮನೆಯಲ್ಲಿ ಸೋಲಿನ ಪಂಚ್?
ಕಾಂಗ್ರೆಸ್‌ನವರ ಪ್ರಕಾರ ತುಮಕೂರಿನಿಂದ ಮುದ್ದಹನುಮೇಗೌಡ ಟಿಕೆಟ್ ಪಡೆದಿರೋದ್ರಿಂದ ಗೆಲ್ಲೋದು ಪಕ್ಕಾ ಅಂತೆ.. ಇದಕ್ಕೆ ಕಾರಣವೂ ಇದೆ.. ಕಾಂಗ್ರೆಸ್ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಶಾಸಕರನ್ನು ಹೊಂದಿದೆ.. ಬಿಜೆಪಿ ಎರಡು ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಗೆದ್ದಿದೆ.. ಹಾಗಿದ್ದರೂ ಗೆಲುವಿನ ಹಾದಿ ಕಾಂಗ್ರೆಸ್‌ಗೆ ಸುಲಭವಿಲ್ಲ. ಮತ್ತೊಂದೆಡೆ ಹಾಸನ ಕ್ಷೇತ್ರವೂ ಚರ್ಚೆಯಲ್ಲಿದೆ. ಹೇಳಿಕೇಳಿ ಹಾಸನ ದಳಪತಿಗಳ ತವರುಮನೆ.. ಆದ್ರೆ ತವರಿನ ಉಡುಗೊರೆ ಈ ಬಾರಿ ಜೆಡಿಎಸ್‌ಗೆ ಕಹಿಯಾಗಿರುತ್ತಾ ಎನ್ನುವ ಅನುಮಾನವಿದೆ..
ಇದನ್ನೂ ಓದಿ: ಕಾಂಗ್ರೆಸ್ಸಿಗರ ವಿರುದ್ಧ ರೊಚ್ಚಿಗೆದ್ದ ಸಂಸದೆ ಸುಮಲತಾ – ಮಂಡ್ಯದಲ್ಲಿ ಶುರುವಾಯ್ತು ಕ್ರೆಡಿಟ್ ವಾರ್
ತುಮಕೂರಿನ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್‌ಗೆ ಉತ್ತಮ ಮತಗಳಿಕೆ ಇದ್ದೇ ಇದೆ.. ಕಳೆದ ಬಾರಿ ಹೆಚ್.ಡಿ.ದೇವೇಗೌಡರೇ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ನಿಂತರೂ ಸೋಲು ಕಂಡಿದ್ದರು.. ಆದ್ರೆ ಈ ಬಾರಿ ಬಿಜೆಪಿ ವಿ.ಸೋಮಣ್ಣಗೆ ಟಿಕೆಟ್ ಕೊಟ್ಟರೆ, ದೇವೇಗೌಡರನ್ನು ಸೋಲಿಸಿದಂತೆ ಹೊರಗಿನವರಿಗೆ ತುಮಕೂರಿನ ಸೋಲಿನ ಕಹಿ ಉಣ್ಣಿಸಿದ್ರೂ ಅಚ್ಚರಿಯೇನಿಲ್ಲ.. ಸೋಮಣ್ಣ ಒಳ್ಳೆಯ ನಾಯಕ.. ಜನಪ್ರಿಯತೆ ಹೊಂದಿದ್ದಾರೆ, ಲಿಂಗಾಯತರ ಪ್ರಮುಖ ಲೀಡರ್ ಎನ್ನುವುದರಲ್ಲಿ ಅನುಮಾನವಿಲ್ಲ.. ಆದರೆ ಗೆಲುವಿಗೆ ಇಷ್ಟೇ ಸಾಲದು.. ಲೋಕಲ್ ನಾಯಕರ ಸಂಪೂರ್ಣ ಬೆಂಬಲ ಬೇಕಿರುತ್ತದೆ.. ಈ ವಿಚಾರದಲ್ಲಿ ಮುದ್ದಹನುಮೇಗೌಡ ಒಂದಿಷ್ಟು ಅಡ್ವಾಂಟೇಜ್ ಹೊಂದಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ..
ದಳಪತಿಗಳ ತವರುಮನೆಯಲ್ಲಿ ಸೋಲಿನ ಪಂಚ್ ಪಕ್ಕಾ?
2024ರ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದರೆ ಅದು ಹಾಸನ.. ಆದರೆ, ಈ ಬಾರಿ ಜೆಡಿಎಸ್‌ಗೆ ಸೋಲಿನ ಪಂಚ್ ಸಿಗುತ್ತಾ ಎನ್ನುವ ಅನುಮಾನವಿದೆ.. ಇದಕ್ಕೆ ನೇರ ಕಾರಣ ಪ್ರಜ್ವಲ್ ರೇವಣ್ಣ ಅವರ ನಡವಳಿಕೆ.. ಅವರ ಅಮ್ಮ ಭವಾನಿ ರೇವಣ್ಣ ಅವರ ವರ್ತನೆ ಮತ್ತು ಅವರ ಅಪ್ಪ ಹೆಚ್.ಡಿ.ರೇವಣ್ಣ ಅವರ ಧೋರಣೆ.. ಇದೇ ಪ್ರಜ್ವಲ್‌ಗೆ ಮುಳುವಾಗುವ ಲಕ್ಷಣವಿದೆ.. ಮೇಲ್ನೋಟಕ್ಕೆ ಜೆಡಿಎಸ್ 4 ಮತ್ತು ಬಿಜೆಪಿ 2 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ.. ಕಾಂಗ್ರೆಸ್ ಕೇವಲ ಎರಡು ಶಾಸಕರನ್ನು ಮಾತ್ರ ಹೊಂದಿದೆ.. ಆದರೆ ಹಾಸನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಎಣ್ಣೆ ಸೀಗೆಕಾಯಿ ರೀತಿಯ ಸಂಬಂಧವಿದೆ.. ಹಾಗಿದ್ದರ ಇದೆಲ್ಲವನ್ನೂ ದಳಪತಿಗಳು ಹೇಗೆ ಮ್ಯಾನೇಜ್ ಮಾಡ್ತಾರೆ ಎಂಬುದು ಬಹಳ ಮುಖ್ಯ.. ಜೊತೆಗೆ ಕಾಂಗ್ರೆಸ್ ಎಷ್ಟು ಸಂಘಟಿತವಾಗಿ ಕೆಲಸ ಮಾಡುತ್ತದೆ ಎಂಬ ರೀತಿಯಲ್ಲಿ ಗೆಲುವಿನ ಲೆಕ್ಕಾಚಾರ ನಿಂತಿದೆ..